Advertisement

ಆ್ಯಂಟಿ ಓಕ್ಸಿಡೆಂಟ್‌ಗಳು ಮತ್ತು ಐಸೊಫ್ಲೇವನ್‌ಗಳು

06:55 PM May 18, 2019 | Team Udayavani |

ಮುಂದುವರಿದುದು ಐಸೊಫ್ಲೇವನ್‌ಗಳು
– ಜಗತ್ತಿನ ಎಲ್ಲೆಡೆ ಐಸೊಫ್ಲೇವನ್‌ಗಳು ಮನುಷ್ಯರ ಆಹಾರದ ಭಾಗವಾಗಿವೆ. ಏಶ್ಯಾದ ದೇಶಗಳ ಸಾಂಪ್ರದಾಯಿಕ ಆಹಾರ ಪದ್ಧತಿಯಲ್ಲಿ ಸೋಯಾ ಉತ್ಪನ್ನಗಳು ಅವಿಭಾಜ್ಯ ಅಂಗವಾಗಿದ್ದು, ಇದರಲ್ಲಿ ಹೆಚ್ಚು ಐಸೊಫ್ಲೇವನ್‌ಗಳು ಇರುತ್ತವೆ. ಆದರೆ ಪಾಶ್ಚಾತ್ಯ ದೇಶಗಳಲ್ಲಿ ಸೋಯಾವನ್ನು ಉಪಯೋಗಿಸುವುದು ಕಡಿಮೆ. ಐಸೊಫ್ಲೇವನ್‌ ಎನ್ನುವುದು ಸೋಯಾಬೀನ್ಸ್‌, ಕಡಲೆ, ಪಿಸ್ತಾ, ನೆಲಗಡಲೆ ಮತ್ತು ಇತರ ದ್ವಿದಳ ಧಾನ್ಯಗಳು ಮತ್ತು ತರಕಾರಿಗಳಲ್ಲಿ ಕಂಡುಬರುವ ಒಂದು ಬಗೆಯ ಪಾಲಿಫಿನೈಲ್‌ ಆಗಿದೆ.

Advertisement

– ಸೋಯಾಬೀನ್‌ ಐಸೊಫ್ಲೇವನ್‌ನ ಅತ್ಯಂತ ಸಮೃದ್ಧ ಮೂಲ. ಸೋಯಾ ಆಹಾರಗಳು ಮತ್ತು ಅದರ ಅಡಕ ವಸ್ತುಗಳು ಐಸೊಫ್ಲೇವನ್‌ಗಳನ್ನು ವಿವಿಧ ಪ್ರಮಾಣಗಳಲ್ಲಿ ಹೊಂದಿರುತ್ತವೆ. ಸಂಸ್ಕರಣೆಯಿಂದ ಐಸೊಫ್ಲೇವನ್‌ ಪ್ರಮಾಣ ಕೊಂಚ ಬಾಧಿತವಾದರೂ ಇಡೀ ಧಾನ್ಯ ಮತ್ತದರ ಉತ್ಪನ್ನಗಳಾದ ಟೊಫ‌ು ಮತ್ತು ಬೇಯಿಸಿದ ಸೋಯಾಬೀನ್‌ನಲ್ಲಿ ಇದು ಅತ್ಯಧಿಕ ಪ್ರಮಾಣದಲ್ಲಿ ಸಿಗುತ್ತದೆ.

– ಸೋಯ್‌ ಐಸೊಫ್ಲೇವನ್‌ಗಳು ಸೋಯಾಬೀನ್‌ ಮತ್ತು ಸೋಯಾಬೀನ್‌ ಉತ್ಪನ್ನಗಳಲ್ಲಿ ಕಂಡುಬರುವ ಸಂಯುಕ್ತಗಳು. ಇವು ದೇಹ ಮತ್ತು ಮನಸ್ಸಿಗೆ ಸಂಬಂಧಿಸಿದ ಅಸಂಖ್ಯಾತ ಗುಣಗಳನ್ನು ಹೊಂದಿವೆ. ಟ್ಯೂಮರ್‌ ವಿರೋಧಿ, ಮಹಿಳೆಯರಲಿಲ್ಲ ಋತುಸ್ರಾವ ಬಂಧ ವಿರೋಧಿ, ಆಸ್ಟಿಯೊಪೊರೊಸಿಸ್‌ ವಿರೋಧಿ ಮತ್ತು ಮುಪ್ಪಾಗುವುದನ್ನು ತಡೆಯುವ ಗುಣಗಳು ಇದರಲ್ಲಿವೆ ಎನ್ನಲಾಗಿದೆ. ಅವು ಋತುಸ್ರಾವ ಬಂಧ ವಯಸ್ಸಿನ ಮಹಿಳೆಯರಲ್ಲಿ ಕಲಿಕೆ ಮತ್ತು ಸ್ಮರಣ ಶಕ್ತಿ ಕೌಶಲಗಳನ್ನು ಉತ್ತಮಪಡಿಸುತ್ತವೆ ಹಾಗೂ ಹೃದ್ರೋಗ, ಮಧುಮೇಹ, ಕಾವಾಸಾಕಿ ಕಾಯಿಲೆಯನ್ನು ತಡೆಯುತ್ತವೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ವಿವಿಧ ಕಾಯಿಲೆಗಳ ಮೇಲೆ ಸೋಯ್‌ ಐಸೊಫ್ಲೇವನ್‌ಗಳ ವಿವಿಧ ಪರಿಣಾಮಗಳನ್ನು ಅಧ್ಯಯನ ಮಾಡಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next