ನವದೆಹಲಿ/ಡೊಮಿನಿಕಾ: ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಡೊಮಿನಿಕಾದಲ್ಲಿ ಬಂಧಿಸಲ್ಪಟ್ಟ ನಂತರ ಆತನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಆ್ಯಂಟಿಗುವಾ ಪ್ರಧಾನಿ ಗಾಸ್ಟನ್ ಬ್ರೌನ್ ಸೂಚಿಸಿದ ಬೆನ್ನಲ್ಲೇ ಡೊಮಿನಿಕಾದಿಂದ ಚೋಕ್ಸಿಯನ್ನು ರಾಜತಾಂತ್ರಿಕ ಮಾತುಕತೆ ಭಾರತಕ್ಕೆ ಕರೆತರಲು ಸಿದ್ಧತೆ ನಡೆಸಿರುವುದಾಗಿ ಮೂಲಗಳು ಗುರುವಾರ(ಮೇ 27) ತಿಳಿಸಿದೆ.
ಇದನ್ನೂ ಓದಿ:Carnivak-Cov; ಮನುಷ್ಯರ ನಂತರ ಈಗ ರಷ್ಯಾದಲ್ಲಿ ಪ್ರಾಣಿಗಳಿಗೂ ಕೋವಿಡ್ ಲಸಿಕೆ ನೀಡಲು ಆರಂಭ!
ಪುಟ್ಟ ಕೆರಿಬಿಯನ್ ದ್ವೀಪ ಪ್ರದೇಶವಾದ ಡೊಮಿನಿಕಾದೊಂದಿಗೆ ಭಾರತ ಉತ್ತಮ ಸಂಬಂಧವನ್ನು ಹೊಂದಿದೆ ಎಂದು ಗೃಸಚಿವಾಲಯದ ಮೂಲಗಳು ತಿಳಿಸಿವೆ. ಕೇಂದ್ರ ಸರ್ಕಾರ ಇತ್ತೀಚೆಗೆ ಲಸಿಕೆ ಮೈತ್ರಿ ಯೋಜನೆಯ ಭಾಗವಾಗಿ ಡೊಮಿನಿಕಾಕ್ಕೆ ಒಂದು ಲಕ್ಷ ಕೋವಿಡ್ ಲಸಿಕೆಗಳನ್ನು ಉಚಿತವಾಗಿ ಕಳುಹಿಸಿರುವುದಾಗಿ ತಿಳಿಸಿದೆ.
ಮೆಹುಲ್ ಚೋಕ್ಸಿ ಕಾನೂನು ಬಾಹಿರವಾಗಿ ಡೊಮಿನಿಕಾವನ್ನು ಪ್ರವೇಶಿಸಿದ್ದು, ಇದರಿಂದ ಭಾರತಕ್ಕೆ ಗಡಿಪಾರು ಮಾಡಲು ತುಂಬಾ ಸುಲಭವಾಗಿದೆ ಎಂದು ಮೂಲಗಳು ವಿವರಿಸಿದೆ. ಉದ್ಯಮಿ ಚೋಕ್ಸಿಯನ್ನು ಡೊಮಿನಿಕಾದಿಂದ ನೇರವಾಗಿ ಭಾರತಕ್ಕೆ ವಾಪಸ್ ಕಳುಹಿಸಿ ಎಂದು ಆ್ಯಂಟಿಗುವಾ ಪ್ರಧಾನಿ ಗ್ಯಾಸ್ಟನ್ ಸೂಚನೆ ನೀಡಿರುವುದಾಗಿ ವರದಿ ತಿಳಿಸಿದೆ.
2017ರಲ್ಲಿ ಚೋಕ್ಸಿ ಆ್ಯಂಟಿಗುವಾ ಮತ್ತು ಬಾರ್ಬುಡಾದ ಪೌರತ್ವ ಪಡೆದು 2018ರಿಂದ ಅಲ್ಲೇ ವಾಸ್ತವ್ಯ ಹೂಡಿದ್ದ. ಆದರೆ ಡೊಮಿನಿಕಾದ ಪೌರತ್ವ ಮೆಹುಲ್ ಚೋಕ್ಸಿ ಪಡೆಯದ ಪರಿಣಾಮ ನೇರವಾಗಿ ಭಾರತಕ್ಕೆ ಹಸ್ತಾಂತರಿಸಲು ಸಾಧ್ಯವಾಗುತ್ತದೆ ಎಂದು ಮೂಲಗಳು ತಿಳಿಸಿವೆ.