ಮಣಿಪಾಲ: ಕೋವಿಡ್-19 ಮಣಿಸಲು ಸೂಕ್ತವಾದ ಔಷಧ ಪತ್ತೆ ಮಾಡುವ ಕಾರ್ಯ ವಿಶ್ವದಾದ್ಯಂತ ಸಾಗುತ್ತಿದೆ. ಹಲವು ಪ್ರಯೋಗಗಳು ಆರಂಭಿಕ ಹಂತದಲ್ಲಿ ಯಶಸ್ವಿಯಾಗಿದ್ದರೂ, ಮುಂದಿನ ಹಂತಗಳಲ್ಲಿ ವಿಫಲವಾಗುವ ಮೂಲಕ ಔಷಧ ರೂಪುಗೊಳ್ಳುವ ಬಗ್ಗೆಯೇ ಅನುಮಾನ ವ್ಯಕ್ತವಾಗುತ್ತಿದೆ. ಆದರೆ ಇದೀಗ ಭರವಸೆ ಮೂಡಿಸುವಂತಹ ಸುದ್ದಿಯೊಂದು ಹೊರ ಬಿದ್ದಿದ್ದು, ಇಸ್ರೇಲ್ ಮತ್ತು ನೆದರ್‌ಲೆಂಡ್‌ನ ಪ್ರತ್ಯೇಕ ಸಂಶೋಧಕರ ತಂಡ ಸೋಂಕನ್ನು ಮಟ್ಟಹಾಕುವ ಆ್ಯಂಟಿಬಾಡಿಯೊಂದನ್ನು ಕಂಡುಹಿಡಿದಿದ್ದಾರೆ ಎಂದು ಹೇಳಲಾಗುತ್ತಿದೆ.
ಒಂದೆಡೆ ಡಚ್ ನೇತೃತ್ವದ ವಿಜ್ಞಾನಿಗಳ ತಂಡ ನಡೆಸಿದ ಪ್ರಾಯೋಗಿಕ ಸೋಂಕು ಮಾದರಿ ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ ಎಂದಿದ್ದು, ಮತ್ತೂಂದೆಡೆ ಇಸ್ರೇಲ್ ಸಹ ರಾಜ್ಯ-ಸಂಶೋಧನಾ ಕೇಂದ್ರ ಕೋವಿಡ್-19 ಸೋಂಕನ್ನು ತಡೆಗಟ್ಟುವ ಆ್ಯಂಟಿಬಾಡಿಯನ್ನು ಅಭಿವೃದ್ಧಿಪಡಿಸಿದ್ದಾರೆ ಎಂಬ ಮಾಹಿತಿ ಹಂಚಿಕೊಂಡಿದೆೆ.
ನೆದರ್‌ಲೆಂಡ್ ಪ್ರಯೋಗಾಲಯದಲ್ಲಿ ಲ್ಯಾಬ್‌ಮಟ್ಟದಲ್ಲಿ ರೂಪಿಸಲಾದ ಆ್ಯಂಟಿಬಾಡಿಯೊಂದು ಕೋವಿಡ್-19 ವೈರಾಣುವನ್ನು ಮಣಿಸುವಲ್ಲಿ ಯಶಸ್ವಿಯಾಗಿದೆ. ಇದರಿಂದಾಗಿ ತತ್‌ಕ್ಷಣವೇ ಅಲ್ಲದಿದ್ದರೂ ಶೀಘ್ರದಲ್ಲೇ ಸೋಂಕಿಗೆ ಔಷಧ ಪತ್ತೆಯಾಗುವ ಆಶಾಭಾವವಂತೂ ಮೂಡಿದೆ.
ದೇಶದ ಯುಟ್ರಚೆಟ್ ವಿಶ್ವವಿದ್ಯಾಲಯದ ಬೆರೆಂಡ್ ಜಾನ್‌ಬಾಷ್ ಮತ್ತು ಅವರ ಸಹೋದ್ಯೋಗಿಗಳು ಸೇರಿದಂತೆ, ಎರಾಸ್ಮಸ್ ಔಷಧಾಲಯ ಕೇಂದ್ರ ಮತ್ತು ಜೈವಿಕ ಔಷಧೀಯ ಕಂಪನಿ ಹಾರ್ಬರ್‌ಬಯೋಮೆಡ್ (ಎಚ್‌ಬಿಎಂ) ವಿಜ್ಞಾನಿಗಳು ಈ ಸಂಶೋಧನೆಯಲ್ಲಿ ನಿರತರಾಗಿದ್ದು, ಮಾನವಿಕ ಆ್ಯಂಟಿಬಾಡಿಯನ್ನು ಸಂಪೂರ್ಣವಾಗಿ ಕಂಡುಹಿ ಡಿಯುವುದರ ಮೊದಲ ಹಂತ ಇದು ಎಂದಿದೆ.
ಪ್ರಯೋಗಾಲಯದಲ್ಲಿ ಈ ಆ್ಯಂಟಿಬಾಡಿ ಸೋಂಕನ್ನು ಮಣಿಸಿದೆ. ಹಾಗೆಂದು ತತ್‌ಕ್ಷಣವೇ ಈ ಮದ್ದನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ. ಇನ್ನೂ ಪ್ರಾಣಿಗಳು ಮತ್ತು ಮನುಷ್ಯರ ಮೇಲೆ ಪ್ರಯೋಗಿಸಿದ ಮೇಲಷ್ಟೇ, ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡಲು ಸಾಧ್ಯ ಎಂದು ನೇಚರ್ ಕಮ್ಯುನಿ ಕೇಷನ್ ಎಂಬ ಜರ್ನಲ್‌ನಲ್ಲಿ ತಿಳಿಸಲಾಗಿದೆ.