ಚೆನ್ನೈ : ತಮಿಳು ನಾಡಿನ ತೂತುಕುಡಿಯಲ್ಲಿ ಇಂದು ಬುಧವಾರ ಮಧ್ಯಾಹ್ನ ಮತ್ತೆ ಭುಗಿಲೆದ್ದ ಹಿಂಸಾತ್ಮಕ ಪ್ರತಿಭಟನಯೆನ್ನು ನಿಯಂತ್ರಿಸಲು ಪೊಲೀಸರು ಮತ್ತೆ ಫೈರಿಂಗ್ ನಡೆಸಿದ್ದು ಇದಕ್ಕೆ ಒಬ್ಬ ಬಲಿಯಾಗಿ ಇನ್ನಿಬ್ಬರು ಗಾಯಗೊಂಡಿದ್ದಾರೆ.
ತೂತುಕುಡಿಯಲ್ಲಿನ ವೇದಾಂತ ಕಂಪೆನಿಯ ಸ್ಟರ್‌ಲೈಟ್ ಕೈಗಾರಿಕಾ ಘಟಕವನ್ನು ಪರಿಸರ ಸಂರಕ್ಷಣೆಗಾಗಿ ಮುಚ್ಚಬೇಕೆಂಬ ಪ್ರತಿಭಟನೆ ಕಳೆದ ಮೂರು ತಿಂಗಳಿಂದ ನಡೆಯುತ್ತಿದ್ದು ನಿನ್ನೆ ಮಂಗಳವಾರ ಭುಗಿಲೆದ್ದ ಹಿಂಸಾತ್ಮಕ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಗೋಲಿಬಾರ್ ನಡೆಸಿದಾಗ 11 ಮಂದಿ ಬಲಿಯಾಗಿ ಇನ್ನೂಅನೇಕ ಜನರು ಗಾಯಗೊಂಡಿದ್ದರು.
ಪ್ರತಿಭಟನಕಾರರ ಮೇಲೆ ಸೆಲ್ಫ್ ಲೋಡಿಂಗ್ ಅಸಾಲ್ಟ್ ರೈಫಲ್ ಬಳಸಿಕೊಂಡು ಫೈರಿಂಗ್ ನಡೆಸಿ 11 ಜೀವಗಳನ್ನು ಬಲಿ ಪಡೆದ ಪೊಲೀಸರು ಅಮಾಯಕರ ವಿರುದ್ಧ ಅತಿಯಾದ ಬಲಪ್ರಯೋಗಿಸಿದುದಕ್ಕೆ ವ್ಯಾಪಕ ಟೀಕೆ, ಖಂಡನೆಗೆ ಗುರಿಯಾಗಿದ್ದರು.
ಇಂದು ಮಧ್ಯಾಹ್ನದ ಹಿಂಸಾತ್ಮಕ ಪ್ರತಿಭಟನೆಯ ವೇಳೆ ಪೊಲೀಸ್ ಗುಂಡಿಗೆ ಬಲಿಯಾದ ವ್ಯಕ್ತಿಯು ಪ್ರತಿಭಟನಕಾರರಲ್ಲಿ ಓರ್ವನಾಗಿದ್ದನೇ ಇಲ್ಲವೇ ಎಂಬುದು ಖಚಿತವಾಗಿಲ್ಲ.
ಈ ನಡುವೆ ಮಧುರೆಯಲ್ಲಿನ ಮದ್ರಾಸ್ ಹೈಕೋರ್ಟ್ ಪೀಠ, ತೂತುಕುಡಿಯಲ್ಲಿ ಸ್ಟರ್‌ಲೈಟ್ ಕಾಪರ್ smelter ಘಟಕದ ನಿರ್ಮಾಣ ಕಾರ್ಯಕ್ಕೆ ತಡೆಯಾಜ್ಞೆ ನೀಡಿದೆ.