Advertisement
ಸುದ್ದಿಸಂಸ್ಥೆ ಎಎನ್‌ಐ ಜತೆಗೆ ಮಾತನಾಡುವ ವೇಳೆ ಸಿಕ್ಖ್ ವಿರೋಧಿ ದಂಗೆಯನ್ನು ಪ್ರಸ್ತಾವಿಸುತ್ತಾ, ‘1984ರಲ್ಲಿ ನರಮೇಧ ನಡೆದಿದ್ದು ಹೌದು, ಏನೀಗ’ ಎಂದು ಪ್ರಶ್ನಿಸುವ ಮೂಲಕ ವ್ಯಾಪಕ ಆಕ್ರೋಶಕ್ಕೆ ಪಿತ್ರೋಡಾ ಕಾರಣರಾಗಿದ್ದಾರೆ. ಈ ಹೇಳಿಕೆಯನ್ನೇ ಇಟ್ಟುಕೊಂಡು ಪ್ರಧಾನಿ ಮೋದಿ ಸಹಿತ ಬಿಜೆಪಿಯ ನಾಯಕರು ಕಾಂಗ್ರೆಸ್ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದರೆ, ಅಕಾಲಿ ದಳದ ನಾಯಕರಾದ ಸುಖ್‌ಬೀರ್ ಸಿಂಗ್ ಬಾದಲ್, ಹರ್‌ಸಿಮ್ರತ್ ಕೌರ್ ಮತ್ತಿತರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಯಾಮ್ ಪಿತ್ರೋಡಾ ಅವರ ಹೇಳಿಕೆಯು ಕಾಂಗ್ರೆಸ್‌ನ ಮನಃಸ್ಥಿತಿ ಮತ್ತು ದರ್ಪವನ್ನು ತೋರಿಸಿದೆ. ಇದನ್ನು ನಿರ್ದಿಷ್ಟ ನಾಯಕನ ಹೇಳಿಕೆ ಎಂದು ಪರಿಗಣಿಸಲಾಗದು. ಕಾಂಗ್ರೆಸ್ ಹಲವು ವರ್ಷಗಳಿಂದ ಇಂಥದ್ದನ್ನು ಮಾಡುತ್ತಲೇ ಬಂದಿದೆ.
– ನರೇಂದ್ರ ಮೋದಿ, ಪ್ರಧಾನಿ
ಸತ್ಯವನ್ನು ತಿರುಚಿ ಹೇಳುವುದು ಬಿಜೆಪಿಯ ಅಭ್ಯಾಸ. ನಾನು ಹಿಂದಿಯಲ್ಲಿ ಬಳಸಿದ ಮೂರು ಪದಗಳನ್ನು ಬಿಜೆಪಿ ತಿರುಚಿ, ಸರಕಾರದ ವೈಫಲ್ಯಗಳನ್ನು ಮುಚ್ಚಿಡಲು ಯತ್ನಿಸುತ್ತಿದೆ. ಆದರೆ, ಕೊನೆಗೆ ಗೆಲ್ಲುವುದು ಸತ್ಯವೇ.
– ಸ್ಯಾಮ್ ಪಿತ್ರೋಡಾ, ಕಾಂಗ್ರೆಸ್ ನಾಯಕ