Advertisement

ಐತಿಹಾಸಿಕ ಎಂದು ಬಣ್ಣನೆ

06:00 AM Dec 18, 2018 | |

ಹೊಸದಿಲ್ಲಿ: 1984ರ ಸಿಕ್ಖ್ ವಿರೋಧಿ ದಂಗೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕ ಸಜ್ಜನ್‌ಕುಮಾರ್‌ ಮತ್ತು ಇತರೆ ಐವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ದಿಲ್ಲಿ ಹೈಕೋರ್ಟ್‌ ನೀಡಿದ ತೀರ್ಪನ್ನು ಬಿಜೆಪಿ ಮತ್ತು ಶಿರೋಮಣಿ ಅಕಾಲಿ ದಳ ಸ್ವಾಗತಿಸಿವೆ. ಇದೊಂದು ಐತಿಹಾಸಿಕ ತೀರ್ಪು ಎಂದು ಬಣ್ಣಿಸಿವೆ. ಆದರೆ, ಕಾಂಗ್ರೆಸ್‌ ನಾಯಕ ಅಭಿಷೇಕ್‌ ಮನು ಸಿಂಘ್ವಿ ಪ್ರತಿಕ್ರಿಯೆ ನೀಡಿದ್ದು, ಈ ತೀರ್ಪನ್ನು ರಾಜಕೀಯಗೊಳಿಸಬಾರದು ಎಂದಿದ್ದಾರೆ.

Advertisement

ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಅವರು, ನೇರವಾಗಿ ಮಧ್ಯಪ್ರದೇಶದ ನೂತನ ಸಿಎಂ ಕಮಲ್‌ನಾಥ್‌ರನ್ನೇ ಗುರಿಯಾಗಿಸಿ ಕೊಂಡು ಕಾಂಗ್ರೆಸ್‌ ಅನ್ನು ಟೀಕಿಸಿದ್ದಾರೆ. ಸಿಕ್ಖರ ಪ್ರಕಾರ, ಕಮಲ್‌ನಾಥ್‌ ಕೂಡ ತಮ್ಮ ಸಮುದಾಯದವರ ವಿರುದ್ಧ ಹಿಂಸಾಚಾರ ನಡೆಸಿದ ದೋಷಿ. ವಿಚಿತ್ರವೆಂದರೆ, ಈ ತೀರ್ಪು ಬಂದ ದಿನವೇ ಕಮಲ್‌ನಾಥ್‌ ಮಧ್ಯಪ್ರದೇಶ ಸಿಎಂ ಹುದ್ದೆ ಅಲಂಕರಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. 

ಇದಕ್ಕೆ ತಿರುಗೇಟು ನೀಡಿರುವ ಕಮಲ್‌ನಾಥ್‌, ನಾನು ಹಿಂದೆಯೂ ಬೇರೆ ಬೇರೆ ಹುದ್ದೆಗಳ ಸ್ವೀಕಾರದ ವೇಳೆ ಪ್ರಮಾಣ ವಚನ ಸ್ವೀಕರಿಸಿದ್ದೇನೆ. ಆಗ ಯಾರೂ ಈ ರೀತಿ ಆರೋಪ ಮಾಡಿರಲಿಲ್ಲ. ಅಲ್ಲದೆ ನನ್ನ ವಿರುದ್ಧ ಪ್ರಕರಣ ವಾಗಲಿ, ಎಫ್ಐಆರ್‌ ಆಗಲಿ ದಾಖಲಾಗಿಲ್ಲ ಎಂದಿದ್ದಾರೆ. 

ಇದೊಂದು ಕಾನೂನು ಪ್ರಕ್ರಿಯೆ. ಇದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಅಲ್ಲದೆ ಸಜ್ಜನ್‌ಕುಮಾರ್‌ ಕಾಂಗ್ರೆಸ್‌ನ ಯಾವುದೇ ಹುದ್ದೆ ಅಲಂಕರಿಸಿಲ್ಲ ಎಂದು ಕಪಿಲ್‌ ಸಿಬಲ್‌ ಹೇಳಿದ್ದಾರೆ. ಸೋಹ್ರಾ ಬುದ್ದೀನ್‌ ಎನ್‌ಕೌಂಟರ್‌ ಮತ್ತು ನ್ಯಾಯಾ ಧೀಶ ಲೋಯಾ ಕೇಸನ್ನು ಮುಚ್ಚಿ ಹಾಕ ಲಿಲ್ಲವೇ ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ. 

ತಿಂಗಳಲ್ಲೇ ಮೂರು ಯಶಸ್ವಿ ತೀರ್ಪು: 1984ರ ಸಿಕ್ಖ್ ವಿರೋಧಿ ದಂಗೆ ಪ್ರಕರಣ ಸಂಬಂಧ ದಿಲ್ಲಿ ಹೈಕೋರ್ಟ್‌ ತಿಂಗಳಲ್ಲಿ ಮೂರು ಕೇಸಿನಲ್ಲಿ ಶಿಕ್ಷೆ ವಿಧಿಸಿದೆ. ನ.28 ರಂದು ಇದೇ ದೆಹಲಿ ಹೈಕೋರ್ಟ್‌ 70 ಮಂದಿಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿ ಸಿದ್ದನ್ನು ಎತ್ತಿಹಿಡಿದಿತ್ತು. ವಿಚಾರಾಣಾ ಧೀನ ಕೋರ್ಟ್‌ 89 ಮಂದಿಯಲ್ಲಿ 70 ಮಂದಿಗೆ ಶಿಕ್ಷೆ ವಿಧಿಸಿದ್ದನ್ನು ಎತ್ತಿಹಿಡಿದಿತ್ತು. ಅಲ್ಲದೆ ನ.20 ರಂದು ಯಶ್‌ಪಾಲ್‌ ಸಿಂಗ್‌ಗೆ ಮರಣ ದಂಡನೆ ಮತ್ತು ಮತ್ತೂಬ್ಬ ಅಪ ರಾಧಿ ನರೇಶ್‌ ಸಾರಸ್ವತ್‌ಗೆ ಜೀವಾವಧಿ ಶಿಕ್ಷೆ ಯನ್ನೂ ಹೈಕೋರ್ಟ್‌ ವಿಧಿಸಿತ್ತು. ಇವೆಲ್ಲವೂ ಸಿಕ್ಖ್ ವಿರೋಧಿ ದಂಗೆಯ ಬೇರೆ ಬೇರೆ ಪ್ರಕರಣ ಗಳಾಗಿವೆ. 

Advertisement

2013ರಲ್ಲಿ ದೋಷಮುಕ್ತ: ನಾನಾವತಿ ಆಯೊಧೀಗದ ವರದಿ ನಂತರ 2010ರಲ್ಲಿ ಸಜ್ಜನ್‌ ಕುಮಾರ್‌ ಮತ್ತು ಇತರೆ ಆರು ಮಂದಿ ವಿರುದ್ಧ ವಿಚಾರಣಾಧೀನ ನ್ಯಾಯಾಲಯದಲ್ಲಿ ವಿಚಾರಣೆ ಶುರುವಾಗಿತ್ತು. ಆದರೆ, 2013ರಲ್ಲಿ ತೀರ್ಪು ಪ್ರಕಟಿಸಿದ್ದ ಕೋರ್ಟ್‌, ಸಜ್ಜನ್‌ಕುಮಾರ್‌ ಅವರನ್ನು ದೋಷ  ಮುಕ್ತ ಎಂದಿತ್ತು. ಆದರೆ, ಇತರೆ ಆರು ಮಂದಿಯನ್ನು ದೋಷಿಗಳು ಎಂದು ತೀರ್ಪು ನೀಡಿತ್ತು. ಇದರ ವಿರುದ್ಧ ಸಿಬಿಐ ಮೇಲ್ಮ ನವಿ ಸಲ್ಲಿಸಿದ್ದರಿಂದ ದಿಲ್ಲಿ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಎಸ್‌.ಮುರಳೀ ಧರ್‌ ಮತ್ತು ವಿನೋದ್‌ ಗೋಯಲ್‌ ಪೀಠ ವಿಚಾರಣೆ ನಡೆಸಿ ಈಗ ತೀರ್ಪು ನೀಡಿದೆ. ಜತೆಗೆ ಹತ್ಯೆ ವೇಳೆ ಪ್ರತ್ಯಕ್ಷದರ್ಶಿಗಳು ಮತ್ತು ಅವರ ಕುಟುಂಬ ಸದಸ್ಯರೇ ಆಗಿದ್ದ ಜಗದೀಶ್‌ ಕೌರ್‌, ಜಗ್‌ಶೀರ್‌ ಸಿಂಗ್‌ ಮತ್ತು ನಿರ್‌ಪ್ರೀತ್‌ ಕೌರ್‌ ಅವರ ಛಲಬಿಡದ ಹೋರಾಟದ ಬಗ್ಗೆಯೂ ದ್ವಿಸದಸ್ಯ ಪೀಠ ಶ್ಲಾಘನೆ ವ್ಯಕ್ತಪಡಿಸಿದೆ. ಘಟನೆಯ ಪ್ರತ್ಯಕ್ಷದರ್ಶಿ ಜಗದೀಶ್‌ ಕೌರ್‌ ಅವರ ಪತಿ, ಪುತ್ರ ಮತ್ತು ಮೂವರು ಸಂಬಂಧಿ ಗಳಾದ ಕೇಹರ್‌ ಸಿಂಗ್‌, ಗುಪೀìತ್‌ ಸಿಂಗ್‌, ರಘುವೀರ್‌ ಸಿಂಗ್‌, ನರೇಂ  ದರ್‌ ಪಾಲ್‌ ಸಿಂಗ್‌ ಮತ್ತು ಕುಲ ದೀಪ್‌ ಸಿಂಗ್‌ ಅವರನ್ನು 1984ರ ನ.2 ರಂದು ಹತ್ಯೆ ಮಾಡಲಾಗಿತ್ತು. ಈ ಎಲ್ಲಾ ಅಪ ರಾಧಿಗಳು ನಿರ್‌ಪ್ರೀತ್‌ ಅವರ ತಂದೆಯನ್ನು ಜೀವಂತ ವಾಗಿ ಸುಟ್ಟು, ಗುರುದ್ವಾರಕ್ಕೆ ಬೆಂಕಿ ಇಟ್ಟಿದ್ದರು. ಇದನ್ನ ಕಣ್ಣಾರೆ ಕಂಡಿದ್ದಾಗಿ ನಿರ್‌ ಪ್ರೀತ್‌ ಸಿಂಗ್‌ ಕೋರ್ಟ್‌ ಮುಂದೆ ಹೇಳಿಕೆ ನೀಡಿದ್ದರು. 

ಐತಿಹಾಸಿಕ ತೀರ್ಪು ನೀಡಿದ ಹೈಕೋರ್ಟ್‌ಗೆ ಆಭಾರಿಯಾಗಿ ದ್ದೇನೆ. ಇಂದು ಸಜ್ಜನ್‌ಕುಮಾರ್‌ಗೆ ಶಿಕ್ಷೆಯಾಗಿದೆ. ನಾಳೆ ಜಗದೀಶ್‌ ಟೈಟ್ಲರ್‌, ಮತ್ತೂಂದು ದಿನ ಕಮಲ್‌ನಾಥ್‌ಗೂ ಶಿಕ್ಷೆಯಾಗ ಬಹುದು. ಇಡೀ ಘಟನೆ ಸಂಬಂಧ ಗಾಂಧಿ ಕುಟುಂಬವಷ್ಟೇ ಉತ್ತರ ನೀಡಬೇಕು.
– ಹರ್‌ಸಿಮ್ರತ್‌ ಕೌರ್‌, ಕೇಂದ್ರ ಸಚಿವೆ

ಸ್ವತಂತ್ರ ಭಾರತದಲ್ಲಿನ ಕೋಮು ಸಂಘರ್ಷ ಘಟನೆಯಾಗಿದ್ದ ಸಿಖ್‌ ವಿರೋಧಿ ದಂಗೆ ಸಂಬಂಧ ಸಂತ್ರಸ್ತರಿಗೆ ಕಡೆಗೂ ನ್ಯಾಯ ಸಿಕ್ಕಿದೆ. ಆದರೆ, ಈ ದಂಗೆಯಲ್ಲಿ ಗಾಂಧಿ ಕುಟುಂಬವಾಗಲಿ, ಕಾಂಗ್ರೆಸ್‌ ಪಕ್ಷವಾಗಲಿ ಪಾಲ್ಗೊಂಡಿಲ್ಲ. 
– ಅಮರೀಂದರ್‌, ಪಂಜಾಬ್‌ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next