Advertisement

ಕಾಂಗ್ರೆಸ್‌ ಶಾಸಕರಿಗೆ ಆಡಳಿತ ವಿರೋಧಿ ಭೀತಿ!

06:45 AM Apr 13, 2018 | Team Udayavani |

ಬೆಂಗಳೂರು : ಮೇ 12 ರಂದು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ರಾಜ್ಯದಲ್ಲಿ ಮತ್ತೆ  ಆಡಳಿತಕ್ಕೆ ಬರುವ ಆತ್ಮವಿಶ್ವಾಸ ಹೊಂದಿರುವ  ಕಾಂಗ್ರೆಸ್‌ಗೆ, ಪಕ್ಷದ ಶಾಸಕರ ವಿರುದ್ಧ ಆಡಳಿತ ವಿರೋಧಿ ಅಲೆ ಇರುವುದು ಹಿರಿಯ ಮುಖಂಡರಲ್ಲಿ ಆತಂಕ ಮೂಡಿಸಿದೆ.

Advertisement

ಪಕ್ಷವೇ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ  ಸುಮಾರು 50 ರಿಂದ 60ರಷ್ಟು ಶಾಸಕರ ವಿರುದ್ಧ ಆಡಳಿತ ವಿರೋಧಿ ಅಲೆ ಉಂಟಾಗಿರುವುದು ಕಂಡುಬಂದಿದೆ.ಶಾಸಕರು ಮಾತ್ರವಲ್ಲ ಕೆಲವು ಕಡೆ ಸಚಿವರ ವಿರುದ್ಧವೂ ಅತೃಪ್ತಿ ಇರುವುದು ಗೊತ್ತಾಗಿದೆ.

ಸಾಮಾನ್ಯವಾಗಿ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇರುತ್ತದೆ. ಆದರೆ ಸಮೀಕ್ಷೆ ಯಲ್ಲಿ ಸರ್ಕಾರದ ವಿರುದ್ದ ಯಾವುದೇ ಆಡಳಿತ ವಿರೋಧಿ ಅಲೆ ವ್ಯಕ್ತವಾಗಿಲ್ಲದಿರುವುದು ನೆಮ್ಮದಿ ತಂದರೆ, ಹಲವಾರು ಶಾಸಕರ ವಿರುದ್ಧ ಕ್ಷೇತ್ರದ ಮತದಾರರಲ್ಲಿ ಅಸಮಾಧಾನ ಇರುವುದು ಚಿಂಗತೆಗೀಡು ಮಾಡಿದೆ.

ಐದು ವರ್ಷ ಆಡಳಿತ  ಪಕ್ಷದ ಸರ್ಕಾರವಿದ್ದೂ  ಕ್ಷೇತ್ರದ ಅಭಿವೃದ್ಧಿ ಮಾಡದ , ಸರ್ಕಾರದ ಯೋಜನೆಗಳನ್ನ ಜನತೆಗೆ ತಲುಪಿಸದ,
ಭ್ರಷ್ಟಾಚಾರ ಮತ್ತು ಕಳಂಕ ಆರೋಪ ಹೊತ್ತಿರುವ ಶಾಸಕರಿಗೆ ಈ ಬಾರಿ ಟಿಕೆಟ್‌ ನೀಡದೇ ಇರುವ ಬಗ್ಗೆ ಪಕ್ಷ ಗಂಭಿರವಾಗಿ ಚಿಂತನೆ ನಡೆಸುತ್ತಿದೆ.

ದೆಹಲಿಯಲ್ಲಿ ನಡೆದ ಅಭ್ಯರ್ಥಿಗಳ ಆಯ್ಕೆ ಕುರಿತ ಸಭೆಯಲ್ಲಿಯೂ ಸಹ ತೀವ್ರವಾದ ಆಡಳಿತ ವಿರೋಧಿ ಅಲೆಯಿರುವ  ಸುಮಾರು 15 ರಿಂದ 20 ಹಾಲಿ ಶಾಸಕರಿಗೆ ಟಿಕೆಟ್‌ ಕೊಡದಿರುವ ಬಗ್ಗೆ ಸುದೀರ್ಘ‌ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.

Advertisement

ಕಾಂಗ್ರೆಸ್‌ ಪಕ್ಷ ಮತ್ತೆ ಅಧಿಕಾರಕ್ಕೆ ಬರಲು ಒಂದೊಂದು ಸೀಟು ಸಹ ಬಹಳ ಮುಖ್ಯವಾಗಿದ್ದರಿಂದ ಶಾಸಕರಿಗೆ, ಅಳೆದೂ ತೂಗಿ  ಅವರ ಗೆಲ್ಲುವ ಸಾಮರ್ಥಯ, ಜನಬೆಂಬಲ, ಜಾತಿ ಲೆಕ್ಕಾಚಾರ, ಪ್ರತಿಪಕ್ಷಗಳ ಅಭ್ಯರ್ಥಿ ಪೂರ್ವಾಪರ ಗಮನಿಸಿ ಟಿಕೆಟ್‌ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಮೂರರಿಂದ ನಾಲ್ಕು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಲ್ಲಿ ತಲಾ ಎರಡು, ಚಿತ್ರದುರ್ಗದಲ್ಲಿ ಮೂರು, ದಾವಣಗೆರೆಯಲ್ಲಿ ಮೂರು, ಹಾವೇರಿಯಲ್ಲಿ 3, ಕಲುºರ್ಗಿಯಲ್ಲಿ 3, ಬಿಜಾಪುರದಲ್ಲಿ 2, ಬಾದಾಮಿಯಲ್ಲಿ 3, ಬಳ್ಳಾರಿಯಲ್ಲಿ 3, ಗದಗನಲ್ಲಿ 2 ಧಾರವಾಡದಲ್ಲಿ 2,ಬೆಳಗಾವಿಯಲ್ಲಿ 2, ಉತ್ತರಕನ್ನಡದಲ್ಲಿ 2, ಕರಾವಳಿ ಜಿಲ್ಲೆಗಳಲ್ಲಿ ಮೂರರಿಂದ ನಾಲ್ಕು, ಚಾಮರಾಜನಗರದಲ್ಲಿ 2, ಮೈಸೂರುನಲ್ಲಿ 2 ಹೀಗೆ ಹಲವು ಜಿಲ್ಲೆಗಳಲ್ಲಿ ಆಡಳಿತ ಪಕ್ಷದ ಶಾಸಕರ ವಿರುದ್ಧ ಆಡಳಿತ ವಿರೋಧಿ ಅಲೆ ಇದೆಯೆಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next