Advertisement

ಟ್ರೋಲ್ ಗೂಂಡಾಗಿರಿ ವಿರುದ್ಧ ರೈ ಅಭಿಯಾನ; ಸಿಂಹ ಉತ್ತರವೇನು ಗೊತ್ತಾ?

01:26 PM Nov 23, 2017 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಧ್ವನಿ ಎತ್ತಿದರೆ ಸಾಕು ಬೆರಳು ಕಟ್ ಮಾಡುತ್ತೇವೆ ಎನ್ನುತ್ತಾರೆ, ನಟಿ ದೀಪಿಕಾ ತಲೆ ತೆಗೆಯುತ್ತೇವೆ ಎಂದು ಬೆದರಿಕೆ ಹಾಕುತ್ತಾರೆ, ನಮ್ಮ ಸಮಾಜ ಎಲ್ಲಿಗೆ ಬಂದಿದೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಕಳವಳ ವ್ಯಕ್ತಪಡಿಸಿದ್ದು, ಟ್ರೋಲ್ ಗೂಂಡಾಗಿರಿ ವಿರುದ್ಧ #ಜಸ್ಟ್ ಆಸ್ಕಿಂಗ್ ಅಭಿಯಾನ ನಡೆಸುವುದಾಗಿ ತಿಳಿಸಿದ್ದಾರೆ.

Advertisement

ಗುರುವಾರ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಟ್ವೀಟರ್, ಫೇಸ್ ಬುಕ್ ನಲ್ಲಿ ಟೀಕಿಸಿ ಫೋಸ್ಟ್ ಹಾಕಿದ್ದಕ್ಕೆ ಸಂಸದ ಪ್ರತಾಪ್ ಸಿಂಹ ಅವರಿಗೆ ತಮ್ಮ ವಕೀಲರ ಮೂಲಕ ಲೀಗಲ್ ನೋಟಿಸ್ ಜಾರಿಗೊಳಿಸಿರುವುದಾಗಿ ತಿಳಿಸಿದ್ದಾರೆ.

ಲೀಗಲ್ ನೋಟಿಸ್ ಗೆ ಉತ್ತರ ನೀಡದಿದ್ದರೆ, ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಪ್ರತಾಪ್ ಸಿಂಹ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಗಳ ಸ್ಕ್ರೀನ್ ಶಾಟ್ ಅನ್ನು ಲೀಗಲ್ ನೋಟಿಸ್ ನಲ್ಲಿ ಲಗತ್ತಿಸಲಾಗಿದೆ ಎಂದು ಹೇಳಿದರು.

ಮಗನ ಸಾವಿನ ದುಖದಲ್ಲಿ ಡ್ಯಾನ್ಸರ್ ಹಿಂದೆ ಓಡಿ ಹೋಗಿದ್ದಾನೆ ಎಂದು ಟೀಕಿಸುತ್ತಾರೆ, ಪುತ್ರ ಶೋಕ ಏನೆಂದು ನಿಮಗೆ ಗೊತ್ತಿಲ್ಲ ಪ್ರತಾಪ್ ಸಿಂಹ ಅವರೇ ಎಂದು ತಿರುಗೇಟು ನೀಡಿದ್ದಾರೆ. ಗೌರಿ ಲಂಕೇಶ್ ಸಾವಿಗೆ ಬಂದಾಗ ಯಾರ ಪಕ್ಕದಲ್ಲಿ ಮಲಗಿದ್ದಿ…ಹೀಗೆ ಅಸಹ್ಯವಾಗಿ ಟೀಕಿಸುವುದು ಯಾವ ಸಂಸ್ಕೃತಿ ಎಂದು ಪ್ರಶ್ನಿಸಿದ್ದಾರೆ.

ನನ್ನ ತಾಯಿಯ ಧರ್ಮದ ಬಗ್ಗೆ ಮಾತನಾಡುತ್ತಾರೆ.. ನಾನು ಯಾವುದಾದರು ಪ್ರಶ್ನೆ ಕೇಳಿದ್ರೆ ವೈಯಕ್ತಿಕವಾಗಿ ನಿಂದನೆ ಶುರು ಮಾಡುತ್ತಾರೆ. ಇದು ಟ್ರೋಲ್ ಗೂಂಡಾಗಿರಿ ಎಂದು ಆಕ್ರೋಶ ವ್ಯಕ್ತಪಡಿಸಿರುವ ರೈ, #Just Asking ಅಭಿಯಾನ ಪ್ರಾರಂಭಿಸುವುದಾಗಿ ಹೇಳಿದರು.

Advertisement

ಪ್ರತಾಪ್ ಸಿಂಹ ತಿರುಗೇಟು:

ಪ್ರಕಾಶ್ ರೈ ಅವರು ಬೆಂಗಳೂರಿನಲ್ಲಿ ಗುಡುಗಿದ ಬೆನ್ನಲ್ಲೇ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ಯಾರೋ ಮಾಡಿದ ಟ್ವೀಟ್ ಅನ್ನು ನಾನು ರೀ ಟ್ವೀಟ್ ಮಾಡಿದ್ದೇನೆ. ರೀ ಟ್ವೀಟ್ ಮಾಡಿದವರಿಗೆ ಲೀಗಲ್ ನೋಟಿಸ್ ಕೊಡೋದಲ್ಲ. ಲೇಖನ ಯಾರು ಬರೆದಿದ್ದಾರೆ ಅವರಿಗೆ ನೋಟಿಸ್ ಕೊಡಿ.  ನನ್ನ ವೈಯಕ್ತಿಕ ಅಭಿಪ್ರಾಯಗಳನ್ನು ಟ್ವೀಟ್ ಮಾಡಿಲ್ಲ. ಎಂಎಂ, ಗೌರಿ ಲಂಕೇಶ್ ಹತ್ಯೆ ಇರಬಹುದು, ಕಾನೂನು ಸುವ್ಯವಸ್ಥೆ ಕಾಪಾಡಬೇಕಾಗಿರುವುದು ರಾಜ್ಯ ಸರ್ಕಾರದ್ದು. ಹೀಗಾಗಿ ನೀವು ಪ್ರಧಾನಿ ಮೋದಿ ಅವರನ್ನು ಯಾಕೆ ಪ್ರಶ್ನೆ ಮಾಡುತ್ತೀರಿ ಎಂದು ಪ್ರಶ್ನಿಸಿದ್ದೆ. ಕಾವೇರಿ ವಿಚಾರದಲ್ಲಿ ರೈ ದ್ವಂದ್ವ ನಿಲುವು ಹೊಂದಿದ್ದಾರೆ. ಅದನ್ನು ನಾನು ಪ್ರಶ್ನಿಸಿದ್ದೆ. ನಾನು ಮಾಡಿರುವುದು ಗೂಂಡಾಗಿರಿ ಅಲ್ಲ, ಒಂದು ವೇಳೆ ಟ್ರೋಲ್ ಗೂಂಡಾಗಿರಿ ಅಂತ ಕರೆದರೆ ಅದು ಪ್ರಕಾಶ್ ರೈ ಅವರ ಬೌದ್ಧಿಕ ದಿವಾಳಿತನ ಎಂದೇ ಕರೆಯಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next