Advertisement

ಸರ್ಕಾರದಿಂದ ಹಿಂದೂ ವಿರೋಧಿ ನೀತಿ

01:56 PM Oct 12, 2017 | Team Udayavani |

ದೊಡ್ಡಬಳ್ಳಾಪುರ: ರಸ್ತೆ ಸುರಕ್ಷತಾ ದಿನ ಕಾರ್ಯಕ್ರಮ ರಾಜ್ಯ ಸರ್ಕಾರ ಹಿಂದೂ ವಿರೋಧಿ ಧೋರಣೆ ಹಾಗೂ ಹಿಂದೂ ಮುಖಂಡರ ಬಂಧನ ಖಂಡಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿ ರಘುನಾಥ್‌, ಆರ್‌ಎಸ್‌ಎಸ್‌ ಕಾರ್ಯಕರ್ತ ಯಶವಂತ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಉದ್ದೇಶ ಪೂರ್ವಕವಾಗಿ ಅನಾವಶ್ಯಕವಾಗಿ ಬಹು ಸಂಖ್ಯಾತ ಹಿಂದೂಗಳ ಸಾಮಾಜಿಕ ಧಾರ್ಮಿಕ ಚಟುವಟಿಕೆಗಳಿಗೆ ಅಡ್ಡಿ ಮಾಡುತ್ತಿದೆ. ಅಲ್ಲದೇ ಅಮಾಯಕ, ನಿರಪರಾಧಿ ಹಿಂದೂ
ಸಾಮಾಜಿಕ ಕಾರ್ಯಕರ್ತರನ್ನು ಹಿಂಸಿಸುವ ಕಿರುಕುಳ ನೀಡುವ ಅವರ ಮೇಲೆ ದಬ್ಟಾಳಿಕೆ ದೌರ್ಜನ್ಯ ಎಸಗುವ ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿದೆ ಎಂದು ಆರೋಪಿಸಿದರು.

ಹಿಂದೂಗಳ ಹಕ್ಕು ಕಸಿಯುವ ಯತ್ನ: ಕರಾವಳಿ ಜಿಲ್ಲೆಗಳಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರಿ, ಯಾವುದೇ ಹಿಂದೂ ಹಬ್ಬ ಹರಿದಿನಗಳು, ಸಾರ್ವಜನಿಕ ಸಭೆ ಸಮಾರಂಭಗಳು, ಪ್ರತಿಭಟನೆ ಚಳವಳಿ ನಡೆಸದಂತೆ ಅನಾವಶ್ಯಕ ನಿರ್ಬಂಧ ಹೇರಲಾಗಿದೆ. ಇದರಿಂದ ಮುಖಂಡರು ಅದರಲ್ಲಿ ಭಾಗವಹಿಸದಂತೆ ತಡೆಯುವುದು, ಆ ಮೂಲಕ ಹಿಂದೂಗಳ ಹಕ್ಕನ್ನು ಕಸಿಯುವುದು. ಸಾತಂತ್ರ್ಯ ದಮನನಿಸುವ ನಿರಂತರ ಯತ್ನಗಳು ನಡೆದಿರುತ್ತದೆ ಎಂದು ದೂರಿದರು.

ತುರ್ತು ಪರಿಸ್ಥಿತಿ ನಾಚಿಸುವ ದಬ್ಟಾಳಿಕೆ: ರಾಜ್ಯದಲ್ಲಿ ನಡೆದಿರುವ ಹಿಂದೂ ಸಾಮಾಜಿಕ ಕಾರ್ಯಕರ್ತರ ಹತ್ಯೆ, ಹಿಂದೂ ಸಾಮಾಜಿಕ ಚಳವಳಿ ಹತ್ತಿಕ್ಕುವ ಸರ್ಕಾರದ ಕ್ರಮ ಖಂಡಿಸಿ, ಭಾರತೀಯ ಯುವ ಮೋರ್ಚಾ ಸಂಘಟಿಸಿದ ಮಂಗಳೂರು ಚಲೋ ಇಡೀ ರಾಜ್ಯದಲ್ಲಿ ಕಾನೂನು ಬಾಹಿರವಾಗಿ ತೆಡೆದು ಮಂಗಳೂರಿನಲ್ಲಿ ಅದರ ಸಮಾರೋಪ ಸಮಾರಂಭ ನಡೆಯದಂತೆ ನಿರ್ಬಂಧ ಹೇರಿ ತುರ್ತು ಪರಿಸ್ಥಿತಿ ನಾಚಿಸುವ ದಬ್ಟಾಳಿಕೆ ನಡೆಸಿ ಪ್ರಜಾತಂತ್ರದ ಕಗ್ಗೊಲೆಗೈದು ಜನತೆ ಸ್ವಾತಂತ್ರ್ಯ ಹತ್ತಿಕ್ಕಿ ಪೋಲೀಸ್‌ ರಾಜ್ಯ ಉಂಟುಮಾಡಿದ್ದಾರೆ ಎಂದು ಹೇಳಿದರು.

ತಪ್ಪಿಲ್ಲದ್ದಿದ್ದರೂ ಕೇಸ್‌ ದಾಖಲು: ಕಲ್ಲಡ್ಕ ಪ್ರಭಾಕರ ಭಟ್ಟರ ವಿರುದ್ಧ ಆಧಾರವಿಲ್ಲದ ಅರೋಪ ಹೊರಿಸಿ ಮೊಕದ್ದಮೆ
ದಾಖಲಿಸಿದ್ದಾರೆ. ಆರ್‌ಎಸ್‌ಎಸ್‌ ಕಾರ್ಯಕರ್ತ ಬಂಟ್ವಾಳದ ಶರತ್‌ ಮಡಿವಾಳರ ಕೊಲೆ ಹಿನ್ನೆಲೆಯಲ್ಲಿ ಅಂತಿಮ ಯಾತ್ರೆ
ಸಂದರ್ಭದಲ್ಲಿ ಅಹಿತಕರ ಘಟನೆ ನಡೆದಿದ್ದು, ಪುತ್ತೂರಿನಲ್ಲಿ ಜಗದೀಶ್‌ ಕಾರಂತರವರು ಭಾಷಣವೊಂದರಲ್ಲಿ ಯಾವುದೇ ತಪ್ಪಿಲ್ಲದಿದ್ದರೂ, ಗೃಹಮಂತ್ರಿಗಳು ಅನಾವಶ್ಯಕ ವಾಗಿ ಮಧ್ಯಪ್ರವೇಶ ಮಾಡಿ ಸಾರ್ವಜನಿಕವಾಗಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ ದೂರು ದಾಖಲಾಗುವಂತೆ ಮಾಡಿರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಹಿಂದೂಗಳಿಗೆ ನ್ಯಾಯ ಒದಗಿಸಿ: ಹಿಂದೂಗಳ ಸ್ವಾತಂತ್ರ್ಯ ಹರಣ ಮಾಡುವ, ಸರ್ಕಾರ ಹಾಗೂ ನಿರ್ದಿಷ್ಟ ಅಧಿಕಾರಿಗಳ
ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಬಹುಸಂಖ್ಯಾತ ಹಿಂದೂಗಳಿಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದರು. ಈ ದಿಸೆಯಲ್ಲಿ ಹಿಂದೂ ಸಾಮಾಜಿಕ ಕಾರ್ಯಕರ್ತರ ಮೇಲೆ ನಡೆದಿರುವ ಸರ್ಕಾರಿ ಪ್ರಾಯೋಜಿತ ದಬ್ಟಾಳಿಕೆ, ದೌರ್ಜನ್ಯ, ಹಾಗೂ ಕಿರುಕುಳ ಕುರಿತು ಕ್ರಮ ಕೈಗೊಳ್ಳುವುದು. ಹಿಂದೂ ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳನ್ನು ಹತ್ತಿಕ್ಕುವ ರಾಜ್ಯ ಸರ್ಕಾರದ ಕೆಲವು ಅಧಿಕಾರಿಗಳ ಅತಿರೇಕದ ವರ್ತನೆ ಕುರಿತು ತನಿಖೆ ಹಾಗೂ ಕ್ರಮ ಕ್ಯಗೊಳ್ಳಲು. ಮುಸ್ಲಿಂ ಮೂಲಭೂತವಾದಿಗಳ ರಾಷ್ಟ್ರ ವಿರೋಧಿ, ಹಿಂದೂ ವಿರೋಧಿ ಕೃತ್ಯಗಳನ್ನು ಮೆಟ್ಟಿ ನಿಲ್ಲುವ ದಿಟ್ಟ ಕ್ರಮಕ್ಕಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ನಗರ ಅಧ್ಯಕ್ಷ ಕೆ.ಎಚ್‌.ರಂಗರಾಜು, ಜಿಲ್ಲಾ ಉಪಾಧ್ಯಕ್ಷ ಗೋಪಿ, ಬಜರಂಗ ದಳದ ನರೇಶ್‌, ಬಿಜೆಪಿ ಮುಖಂಡರಾದ ರಾಂಕಿಟ್ಟಿ, ಕಮಲಮ್ಮ, ಯಶೋಧಾ ಮತ್ತಿತರರು ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next