Advertisement

“ಹಿಂದೂ ವಿರೋಧಿ ಕಾಂಗ್ರೆಸ್‌ ಸರಕಾರ ಕಿತ್ತೂಗೆಯಿರಿ’

07:55 AM May 11, 2018 | |

ಮಲ್ಪೆ: ಹಿಂದೂ ಧರ್ಮ ವಿರೋಧಿ ಕಾಂಗ್ರೆಸ್‌ ಸರಕಾರವನ್ನು ಬುಡದಿಂದ ಕಿತ್ತುಹಾಕುವ ಅನಿವಾರ್ಯತೆ ಇಂದು ಕರ್ನಾಟಕದ ಜನತೆಗೆ ಬಂದಿದೆ ಎಂದು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಸೂರ್ಯ ಹೇಳಿದರು.

Advertisement

ಉಡುಪಿ ನಗರ ಬಿಜೆಪಿ ವತಿಯಿಂದ ಮಲ್ಪೆಯಲ್ಲಿ  ವಡಭಾಂಡೇಶ್ವರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತ ನಾಡಿದ ಅವರು  ಕಳೆದ 5 ವರ್ಷಗಳಲ್ಲಿ ಸಿದ್ದರಾಮಯ್ಯ ಎಂಬ ಕರ್ನಾಟಕಕ್ಕೆ ಅಂಟಿರುವ ಶಾಪದ ಪರಿಣಾಮವಾಗಿ ಇಂದು ಭ್ರಷ್ಟಾಚಾರ ಬ್ರಹ್ಮಾಂಡ ಮಟ್ಟದಲ್ಲಿ ಬೆಳೆಯಿತು. ಬೇರೆ ಬೇರೆ ಅವ್ಯವಹಾರಗಳು ಅವಕಾಶಗಳು ದೊರೆತವು. . ಕರಾವಳಿ ಭಾಗದಲ್ಲಿ  ಹಿಂದೂ ಧರ್ಮದ ಪರವಾಗಿ ಮಾತನಾಡುವ, ಅಭಿಪ್ರಾಯವನ್ನು ವ್ಯಕ್ತ ಪಡಿಸುವ ಹಿಂದು ವ್ಯಕ್ತಿಗಳನ್ನು ಹುಡುಕಿ ಹುಡುಕಿ ಕ್ಷುಲ್ಲಕ ಕಾರಣಗಳಿಗೆ ಪ್ರಕರಣ ದಾಖಲಿಸುವ, ಸರಣಿ ಹತ್ಯೆಗಳನ್ನು ನಡೆಸುವ ಕೆಲಸಗಳು ನಡೆಯಿತು. ಸಾಲು ಸಾಲು ಹಿಂದೂಗಳ ಹತ್ಯೆಗಳು ನಡೆದರೂ ಸುಮ್ಮನಿರುವ ಇಂತಹ ಹೊಣೆಗೇಡಿ ಸರಕಾರವನ್ನು ಕಿತ್ತೂಗೆಯಬೇಕು ಎಂದರು.

ಪ್ರಜಾಪ್ರಭುತ್ವದಲ್ಲಿ ಅಭ್ಯರ್ಥಿಯ ಭವಿಷ್ಯ ಅಲ್ಲ ಸಮಾಜದ ಭವಿಷ್ಯ ನಿರ್ಧಾರವಾಗಬೇಕು. 4 ವರ್ಷದ ಹಿಂದೆ ಭಾರತ ಸ್ಥಿತಿ ಹೇಗಿತ್ತು, 2014ರಲ್ಲಿ ನೀವೆಲ್ಲ ಒಂದು ಒಳ್ಳೆಯ ನಿರ್ಧಾರ ಮಾಡಿ ನರೇಂದ್ರ ಮೋದಿಗೆ ಕೊಟ್ಟ ಒಂದು ಮತದಿಂದಾಗಿ ಇಂದು ಪಾಕಿಸ್ಥಾನ ಸರ್ಜಿಕಲ್‌ ಸ್ಟೈಕ್‌ ನಂತರ ಭಾರತದ ತಂಟೆಗೆ ಬಾರದಂತಾಯಿತು.  ಚೀನಾ ದೇಶ ಭಾರತದ ಪ್ರಧಾನಿಯನ್ನು ಔತಣಕೂಟಕ್ಕೆ ಕರೆದು ಗೌರವವನ್ನು ಸೂಚಿಸುವಂತಾಯಿತು. ಅಂತರಾಷೀrÅಯ ಮಟ್ಟದ ಯೋಗ ದಿನಾಚರಣೆ ಆಚರಿಸು ವಂತಾಗಿದೆ. ಕರ್ನಾಟಕದಲ್ಲೂ ಇಂತಹ ಬದಲಾವಣೆಯಲ್ಲಿ ನಾವು ತರಬೇಕಾಗಿದೆ. ಹೊಸ ಕರ್ನಾಟಕವನ್ನು ನಿರ್ಮಾಣ ಮಾಡಬೇಕಾಗಿದೆ ಎಂದರು.

ಬಿಜೆಪಿ ಅಭ್ಯರ್ಥಿ ಕೆ. ರಘುಪತಿ ಭಟ್‌, ನಾಯಕರುಗಳಾದ ಕೆ. ಜಯಪ್ರಕಾಶ್‌ ಹೆಗ್ಡೆ, ಮಟ್ಟಾರು ರತ್ನಾಕರ ಹೆಗ್ಡೆ, ಯಶ್‌ಪಾಲ್‌ ಎ. ಸುವರ್ಣ, ಶ್ಯಾಮಲ ಕುಂದರ್‌, ಸಂಧ್ಯಾ ರಮೇಶ್‌, ಪ್ರಭಾಕರ ಪೂಜಾರಿ, ಶ್ರೀಶ ನಾಯಕ್‌, ವಿಜಯ ಕುಂದರ್‌, ರಾಘವೇಂದ್ರ ಕಿಣಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next