Advertisement
ಅಲ್ಟರ್ನೇಟಿವ್ ಮೀಡಿಯಾ ಸೆಂಟರ್ ಸಹಭಾಗಿತ್ವದಲ್ಲಿ ಸ್ಟ್ರೀಟ್ ಅವಾರ್ಡ್ ಫೆಸ್ಟಿವಲ್ ಅನ್ನು ಲೊಯೊಲಾ ಕಾಲೇಜು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದ ಅಡಿಯಲ್ಲಿ ಚಿತ್ರಕಲೆ ಪ್ರದರ್ಶನವನ್ನೂ ಹಮ್ಮಿಕೊಳ್ಳಲಾಗಿತ್ತು. ಒಂದೇ ಸೂರಿನಡಿಯಲ್ಲಿ ಹಲವು ವಿಧದ ಕಲಾ ರೂಪಗಳ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಆಕ್ಮೆ ವಿಶ್ವ ದಾಖಲೆಯನ್ನು ಮೀರಿಸುವ ಉದ್ದೇಶದಿಂದ ಈ ಚಿತ್ರಕಲೆ ಹಮ್ಮಿಕೊಳ್ಳಲಾಗಿತ್ತು. ಈ ಪ್ರದರ್ಶನದಲ್ಲಿ ಜಾತಿ ಆಧಾರಿತ ಸಂಘರ್ಷಗಳು, ಲೈಂಗಿಕ ದೌರ್ಜನ್ಯ, ದಲಿತರ ಮೇಲೆ ದೌರ್ಜನ್ಯ ಸೇರಿದಂತೆ ಹಲವು ವಿಷಯಗಳ ಕುರಿತು ಕಲಾಕೃತಿಗಳು ಪ್ರದರ್ಶನಗೊಂಡಿವೆ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಮೀಟೂ ಚಳವಳಿಯಲ್ಲಿ ಭಾರತ ಮಾತೆ ಕೂಡ ಸಂತ್ರಸ್ತೆ ಎಂಬಂತೆ ಚಿತ್ರಿಸಿರುವುದು ಆಕ್ಷೇಪಕ್ಕೆ ಕಾರಣವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಹಿಂದೂ ಪರ ಸಂಘಟನೆಗಳು ಈ ಚಿತ್ರಗಳು ಆಕ್ಷೇಪಾರ್ಹವಾಗಿದ್ದು, ಇದು ಪ್ರಧಾನಿ, ಆರೆಸ್ಸೆಸ್ ಹಾಗೂ ಇತರ ಹಿಂದೂ ಸಂಘಟನೆಗಳನ್ನು ಅವಹೇಳನ ಉದ್ದೇಶವಾಗಿಸಿಕೊಂಡಿದೆ ಎಂದಿವೆ.
Advertisement
ಲೊಯೊಲಾ ಕಾಲೇಜಿನಲ್ಲಿ ಆಕ್ಷೇಪಾರ್ಹ ಕಲಾಕೃತಿ
02:13 AM Jan 22, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.