Advertisement

ಮತಾಂತರ ನಿಷೇಧ ಮಸೂದೆ ಮಂಡನೆಗೆ ಜಿಜ್ಞಾಸೆ

10:37 PM Dec 16, 2021 | Team Udayavani |

ಬೆಳಗಾವಿ: ವಿವಾದಿತ ಮತಾಂತರ ನಿಷೇಧ ಮಸೂದೆ ಮಂಡನೆ ವಿಚಾರದಲ್ಲಿ ಆಡಳಿತ ಪಕ್ಷದಲ್ಲಿ ಜಿಜ್ಞಾಸೆ ಮುಂದುವರಿದಿದ್ದು, ಕೆಲವು ಶಾಸಕರು ಇದೇ ಆಧಿವೇಶನದಲ್ಲಿ ಮಸೂದೆ ಮಂಡನೆಗೆ ಪಟ್ಟು ಹಿಡಿದಿದ್ದರೆ, ಕೆಲವು ಶಾಸಕರು ವಿಸ್ತೃತ ಚರ್ಚೆಯ ಅನಂತರ ಮಸೂದೆ ಮಂಡನೆ ಮಾಡುವಂತೆ ಸರಕಾರಕ್ಕೆ ಸಲಹೆ ನೀಡಿದ್ದಾರೆ.

Advertisement

ಗೃಹ ಇಲಾಖೆ ಮಸೂದೆ ಮಂಡನೆಗೆ ಸಿದ್ಧತೆ ಮಾಡಿಕೊಂಡಿದ್ದು, ಸೋಮವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ.

ಮೂಲ ಬಿಜೆಪಿ ಶಾಸಕರು ಹಾಗೂ ಸಂಘ ಪರಿವಾರದಿಂದ ಮತಾಂತರ ನಿಷೇಧ ಮಸೂದೆ ಬೆಳಗಾವಿ ಅಧಿವೇಶನದಲ್ಲೇ  ಮಂಡಿಸಿ ಅಂಗೀಕಾರ ಪಡೆಯುವಂತೆ ಒತ್ತಡ ಹೇರುತ್ತಿದ್ದಾರೆಂದು ತಿಳಿದು ಬಂದಿದೆ. ಅದಕ್ಕೆ  ಪೂರಕವಾಗಿ ಗೃಹ ಇಲಾಖೆ ಕರಡು ಪ್ರತಿ ಸಿದ್ಧಪಡಿಸಿಕೊಂಡಿದ್ದು, ಕಾನೂನು ಇಲಾಖೆಯ ಜತೆ ಸಮಾಲೋಚನೆಯನ್ನೂ ಮಾಡಿದೆ. ಆದರೆ, ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತರಾತುರಿಯಲ್ಲಿ ಮಸೂದೆ ಮಂಡನೆಗೆ ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪರಿಷತ್‌ನಲ್ಲಿ  ಮಂಡನೆ ಅನುಮಾನ?:

ಒಂದು ವೇಳೆ ಇದೇ ಅಧಿವೇಶನದಲ್ಲಿ ಮಸೂದೆ ಮಂಡನೆಗೆ ತೀರ್ಮಾನ ಮಾಡಿದರೂ, ವಿಧಾನಸಭೆಯಲ್ಲಿ ಮಾತ್ರ ಮಂಡನೆ ಮಾಡಿ ಅಂಗೀಕಾರ ಪಡೆಯುವ ಬಗ್ಗೆ  ಸರಕಾರದ ಹಂತದಲ್ಲಿ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

Advertisement

ಬಿಜೆಪಿಗೆ ವಿಧಾನಪರಿಷತ್‌ನಲ್ಲಿ ಬಹುಮತವಿರದ ಹಿನ್ನೆಲೆಯಲ್ಲಿ ಇದೇ ಅಧಿವೇಶನದಲ್ಲಿ ಮಸೂದೆ ಮಂಡಿಸಿದರೆ, ಜೆಡಿಎಸ್‌ ಹಾಗೂ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸುವುದರಿಂದ ಮಸೂದೆಗೆ ಹಿನ್ನಡೆಯಾಗುವ ಅತಂಕ ಆಡಳಿತ ಪಕ್ಷಕ್ಕೆ ಉಂಟಾಗಿದೆ ಎಂದು ತಿಳಿದು ಬಂದಿದೆ.

ಪ್ರಮುಖ ಅಂಶಗಳು :

  1. ಸಂವಿಧಾನದ ಪರಿಚ್ಛೇದ 26ರ ಅನ್ವಯದಂತೆ ಬಲವಂತದ ಮತಾಂತರ ಶಿಕ್ಷಾರ್ಹ ಅನ್ನುವ ಪರಿಚ್ಛೇದ ಪ್ರಕಾರವೇ ವಿಧೇಯಕ ಸಿದ್ಧ.
  2. ಯಾವುದೇ ವ್ಯಕ್ತಿ ಮತಾಂತರ ಹೊಂದಬೇಕಾದರೆ ಸಕ್ಷಮ ಪ್ರಾಧಿಕಾರವಾಗಿರುವ ಡಿಸಿ ಮುಂದೆ 2 ತಿಂಗಳು ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು.
  3. ಜಿಲ್ಲಾಧಿಕಾರಿಗಳ ಮುಂದೆ ಅರ್ಜಿ ಸಲ್ಲಿಸಿದ ವ್ಯಕ್ತಿ ತನ್ನ ಇಚ್ಛೆಗೆ ಅನುಗುಣವಾಗಿ ನೀಡಿರುವ ಅರ್ಜಿಯನ್ನು ಹಿಂಪಡೆಯಲು ಸ್ವತಂತ್ರನಾಗಿರುತ್ತಾರೆ.
  4. ಮತಾಂತರ ಆಗಲು ಬಯಸುವ ವ್ಯಕ್ತಿಯ ಖಾಸಗಿತನವನ್ನು ಕಾಪಾಡಲು ಮತ್ತು ಆತನ/ಆಕೆಯ ಧಾರ್ಮಿಕ ಹಕ್ಕನ್ನು ಕಾಪಾಡಲು ಮತಾಂತರ ಪ್ರಕ್ರಿಯೆಯನ್ನು ಗೌಪ್ಯವಾಗಿಡುವಂತಿಲ್ಲ.
  5. ಮತಾಂತರ ಪ್ರಕ್ರಿಯೆಯೊಳಗೆ ಯಾವುದೇ ವ್ಯಕ್ತಿಯನ್ನು ಬಲವಂತವಾಗಿ ತೊಡಗುವಂತೆ ಮಾಡಲು ಅವಕಾಶವಿಲ್ಲ.
  6. ಈ ಕಾಯ್ದೆ ಅಧಿನಿಯಮಗಳ ಪ್ರಕಾರ ಬಲವಂತದ ಮತಾಂತರ ಮಾಡುವ ಇಲ್ಲವೇ ಪ್ರಚೋದನೆ ನೀಡುವ ವ್ಯಕ್ತಿಯನ್ನು ಬಂಧಿಸಲು ಅವಕಾಶವಿದೆ.
Advertisement

Udayavani is now on Telegram. Click here to join our channel and stay updated with the latest news.

Next