Advertisement

ಚೆನ್ನೈ:ಕೋರ್ಟ್ ಆದೇಶ ಧಿಕ್ಕರಿಸಿ CAA ವಿರುದ್ಧ ಬೃಹತ್ ಪ್ರತಿಭಟನೆ,ವಿಧಾನಸಭೆ ಮುತ್ತಿಗೆ ಯತ್ನ

08:44 AM Feb 20, 2020 | Nagendra Trasi |

ಚೆನ್ನೈ: ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ವಿರೋಧಿಸಿ ಸಾವಿರಾರು ಮಂದಿ ಚೆನ್ನೈನ ವಾಲ್ಲಾಜಾ ರಸ್ತೆಯ ಮೂಲಕ ತೆರಳಿ ತಮಿಳುನಾಡು ವಿಧಾನಸಭೆಗೆ ಮುತ್ತಿಗೆ ಹಾಕಲು ತೆರಳುತ್ತಿದ್ದಾರೆ.

Advertisement

ತಮಿಳುನಾಡು ವಿಧಾನಸಭೆಗೆ ಮುಸ್ಲಿಂ ಸಂಘಟನೆಗಳು ಜಾಥಾ ನಡೆಸಿ ಮುತ್ತಿಗೆ ಹಾಕಬಾರದು ಎಂದು ಮದ್ರಾಸ್ ಹೈಕೋರ್ಟ್ ಮಂಗಳವಾರ ಆದೇಶ ನೀಡಿತ್ತು. ಆದರೆ ಆದೇಶವನ್ನು ಲೆಕ್ಕಿಸದೇ ಪ್ರತಿಭಟನಾಕಾರರು ತಮಿಳುನಾಡು ವಿಧಾನಸಭೆಯಲ್ಲಿ ಸಿಎಎ, ಎನ್ ಆರ್ ಸಿ ಮತ್ತು ಎನ್ ಪಿಆರ್ ವಿರುದ್ಧ ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ಕೈಗೊಂಡಿರುವುದಾಗಿ ವರದಿ ತಿಳಿಸಿದೆ.

ಮುಂಜಾಗ್ರತಾ ಕ್ರಮವಾಗಿ ತಮಿಳುನಾಡು ಸೆಕ್ರೆಟರಿಯೇಟ್ ಬಳಿ ಸಾವಿರಾರು ಪೊಲೀಸರನ್ನು ನಿಯೋಜಿಸಲಾಗಿದೆ. ಪ್ರತಿಭಟನಾಕಾರರು ವಿಧಾನಸಭೆ ಆವರಣ ಪ್ರವೇಶಿಸದಂತೆ ತಡೆಯಲು ಬ್ಯಾರಿಕೇಡ್ ಗಳನ್ನು ಹಾಕಲಾಗಿದೆ ಎಂದು ವರದಿ ವಿವರಿಸಿದೆ.

ಕಳೆದ ಎರಡು ತಿಂಗಳಿನಿಂದ ತಮಿಳುನಾಡಿನ ವಿವಿಧೆಡೆ ಪ್ರತಿಭಟನೆ ನಡೆಯುತ್ತಿದೆ. ಚೆನ್ನೈನ ಹಳೇ ವಾಶರ್ ಮೆನ್ ಪೇಟ್ ಬಳಿ ಫೆ.14ರಿಂದ ಪ್ರತಿಭಟನೆ ನಡೆಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದು ಚೆನ್ನೈನ ಶಹೀನ್ ಬಾಗ್ ಎಂದು ಕರೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next