Advertisement

ಬಿಸಿ ವಾತಾವರಣಕ್ಕೆ ಹಿಮ ಕೆರೆಯೇ ಬರಿದು!

03:19 PM Jul 09, 2021 | Team Udayavani |

ನವದೆಹಲಿ: ಹೆಚ್ಚುತ್ತಿರುವ ಜಗತ್ತಿನ ತಾಪಮಾನದಿಂದಾಗಿ ಅಂಟಾರ್ಟಿಕಾದಲ್ಲಿನ ಹಿಮ ಹೆಚ್ಚಿನ ಪ್ರಮಾಣದಲ್ಲಿ ಕರಗುತ್ತಿದೆ ಎಂಬ ಆತಂಕ ವೈಜ್ಞಾನಿಕ ಸಮುದಾಯದ್ದು. ಆ ಆತಂಕ ನಿಜ ಎನ್ನುವಂಥ ಘಟನೆ ನಡೆದಿದೆ.

Advertisement

ಅಂಟಾರ್ಟಿಕಾದ ಪೂರ್ವ ಭಾಗದಲ್ಲಿ ಹಿಮ ಕರಗಿ ಉಂಟಾಗಿದ್ದ ಆ್ಯಮೆರಿ ಐಸ್‌ ಶೆಲ್ಫ್ ನಲ್ಲಿ ಸಂಗ್ರಹವಾಗಿ ನಿಂತಿದ್ದ 26 ಬಿಲಿಯನ್‌ ಕ್ಯೂಬಿಕ್‌ ಫೀಟ್‌ ನೀರಿನ ಪೈಕಿ 21 ಬಿಲಿಯನ್‌ ಹೆಚ್ಚುತ್ತಿರುವ ಬಿಸಿಗೆ ಆವಿಯಾಗಿದೆ. ಉಪಗ್ರಹಗಳಿಂದ ದೊರೆತಿರುವ ಫೋಟೋಗಳನ್ನು ಅಧ್ಯಯನ ನಡೆಸಿದಾಗ ಈ ಅಂಶ ಬೆಳಕಿಗೆ ಬಂದಿದೆ.

“ಜಿಯೋ ಫಿಸಿಕಲ್‌ ರಿಸರ್ಚ್‌ ಲೆಟರ್ಸ್‌’ ಎಂಬ ನಿಯತಕಾಲಿಕದಲ್ಲಿ ಈ ಬಗ್ಗೆ ಪ್ರಸ್ತಾಪಿಸ ಲಾಗಿದೆ. ಹಿಮ ಕರಗುವ ಅಂಶ ಮುಂದಿನ ದಿನಗಳಲ್ಲಿ ಹೆಚ್ಚಲಿದೆ. ಹೆಚ್ಚಿನ ಪ್ರಮಾಣದ ನೀರು ಆವಿಯಾದ ಬಳಿಕ ಆ್ಯಮೆರಿ ಐಸ್‌ ಶೆಲ್ಫ್ ಅಲ್ಲಿಯೇ ಕುಸಿದಿದೆ. 2019ರಲ್ಲಿಯೇ ಈ ಘಟನೆ ನಡೆದಿದೆ ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ.

ಆವಿಯಾದ ಬಳಿಕ 11 ಚಕಿಮೀ ವ್ಯಾಪ್ತಿಯಲ್ಲಿ ಹಿಮ ತುಂಡಾಗಿ ಇರುವ ಹೈರೆಸೊಲ್ಯೂಷನ್‌ ಫೋಟೋ ಗಳಿವೆ ಎಂದು ಈ ಬಗ್ಗೆ ಸಂಶೋಧನೆ ನಡೆಸಿದ ಟಾಸ್ಮಾನಿಯಾ ವಿವಿಯ ಭೂಗರ್ಭ ಶಾಸ್ತ್ರದ ಪ್ರಾಧ್ಯಾಪಕ ರೊನಾಲ್ಡ್‌ ವಾರ್ನರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next