Advertisement

ಅಂಟಾರ್ಟಿಕಾ ಮಂಜು ಮಾಯ!

12:55 AM Jul 04, 2019 | mahesh |

ವಾಷಿಂಗ್ಟನ್‌: ಭೂಮಿಯ ದಕ್ಷಿಣ ಧೃವದ ಅಂಟಾರ್ಟಿಕಾ ಸಾಗರದಲ್ಲಿ 35 ವರ್ಷಗಳ ಕಾಲ ವೃದ್ಧಿಯಾಗಿದ್ದ ದೈತ್ಯ ಮಂಜುಗಡ್ಡೆಯು 2014ರಿಂದೀಚೆಗೆ ಏಕಾಏಕಿ ಕರಗುತ್ತಾ ಬಂದಿದ್ದು, 2017ರ ಹೊತ್ತಿಗೆ ಅಗಾಧ ಪ್ರಮಾಣದಲ್ಲಿ ಕರಗುವ ಮೂಲಕ ವಿಜ್ಞಾನಿಗಳಿಗೆ ಅಚ್ಚರಿ ತಂದಿದೆ ಎಂದು ಅಮೆರಿಕದ ‘ಪ್ರೊಸೀಡಿಂಗ್ಸ್‌ ಆಫ್ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌’ ಎಂಬ ಸಂಸ್ಥೆ ತಿಳಿಸಿದೆ.

Advertisement

ಅಂಟಾರ್ಟಿಕಾ ಸಮುದ್ರದ ಮಂಜುಗಡ್ಡೆಯು 1979ರಿಂದ 2014ರವರೆಗೆ ಸುಮಾರು 128 ಲಕ್ಷ ಚದುರ ಕಿ.ಮೀ.ಗಳವರೆಗೆ ವಿಸ್ತರಣೆಗೊಂಡಿತ್ತು. ಆದರೆ, 2014ರಿಂದ ಅದು ನಿಧಾನವಾಗಿ ಕರಗಲು ಶುರುವಾಗಿದ್ದು, 2017ರ ಹೊತ್ತಿಗೆ 21 ಲಕ್ಷ ಚದರ ಕಿ.ಮೀ.ಗಳಷ್ಟು ಕರಗಿ, 107 ಲಕ್ಷ ಚದರ ಕಿ.ಮೀ.ಗಳಿಗೆ ಇಳಿದಿದೆ. ಇದಕ್ಕೆ ಜಾಗತಿಕ ತಾಪಮಾನದ ಪರಿಣಾಮವೋ ಅಥವಾ ಬೇರೆ ಕಾರಣಗಳಿವೆಯೋ ಎಂಬ ಗೊಂದಲದಲ್ಲಿ ವಿಜ್ಞಾನಿಗಳು ಇದ್ದಾರೆಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆಯಾದ ನಾಸಾದ ಹವಾಮಾನ ತಜ್ಞ ಕ್ಲೇರ್‌ ಪಾರ್ಕಿನ್ಸನ್‌ ತಿಳಿಸಿದ್ದಾರೆ.

2014ರಲ್ಲಿ 40 ವರ್ಷಗಳಲ್ಲೇ ಅತಿ ಹೆಚ್ಚು ವಿಸ್ತಾರವಾಗಿದ್ದ ಸಾಗರದ ಮಂಜುಗಡ್ಡೆ, 2014ರಿಂದ 2017ರ ಅವಧಿಯಲ್ಲಿ 40 ವರ್ಷಗಳಲ್ಲೇ ಅತಿ ಇಳಿಕೆಯ ಮಟ್ಟಕ್ಕೆ ಕುಸಿದಿದೆ. ಫ್ರಾನ್ಸ್‌ ದೇಶದ ಸುಮಾರು ನಾಲ್ಕು ಪಟ್ಟು ಮಂಜುಗಡ್ಡೆ ಕರಗಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next