Advertisement

ರೈತರನ್ನು ಕಂಗಾಲು ಮಾಡಿದ ಅಂತರಗಂಗೆ : ಶಾಶ್ವತ ಪರಿಹಾರಕ್ಕಾಗಿ ಹೂಳೆತ್ತುವಂತೆ ಆಗ್ರಹ

07:15 PM Jul 17, 2021 | Team Udayavani |

ತೆಕ್ಕಟ್ಟೆ : ಕೆದೂರು ಗ್ರಾ.ಪಂ. ವ್ಯಾಪ್ತಿಯ ಹಲ್ತೂರು, ಉಳ್ತೂರು ಭಾಗಗಳಲ್ಲಿ ನೂರಾರು ಎಕರೆ ಕೃಷಿ ಭೂಮಿಯನ್ನು ಅಂತರಗಂಗೆ ಆವರಿಸಿರುವ ಪರಿಣಾಮ ಕೃಷಿಕರು ಕಂಗಾಲಾಗಿದ್ದಾರೆ.

Advertisement

ನಿರಂತರ ಮಳೆಯಿಂದಾಗಿ ಅಂತರಗಂಗೆ ಉಳ್ತೂರಿನ ಹಲ್ತೂರು ಕಿರು ಸೇತುವೆ ಬಳಿ ಅಪಾರ ಪ್ರಮಾಣದಲ್ಲಿ ಶೇಖರಣೆಯಾಗಿದೆ. ಮಳೆ ಪ್ರಮಾಣ ಕಡಿಮೆಯಾದರೆ ಹೊಳೆಸಾಲು ಸಮೀಪದಲ್ಲಿರುವ ಕೃಷಿ ಭೂಮಿಗಳಿಗೆ ಆವರಿಸಿ ಕೃಷಿ ಚಟುವಟಿಕೆಗೆತೀವ್ರ ತೊಂದರೆಯಾಗಲಿದೆ.

ಏನಿದು ಅಂತರಗಂಗೆ?
ನೀರಿನ ಮೇಲ್ಪದರದಲ್ಲಿ ದಟ್ಟವಾಗಿ ಬೆಳೆಯುವ ಈ ಗಿಡ ಆಮ್ಲಜನಕ ಹಾಗೂ ಸೂರ್ಯನ ಬೆಳಕು ನೀರಿನ ಆಳಕ್ಕೆ ಇಳಿಯದಂತೆ ತಡೆಯುವ ಮೂಲಕ ನೀರಿನಲ್ಲಿರುವ ಮೀನುಗಳು ಹಾಗೂ ಇತರ ಜಲಚರಗಳ ಸಾವಿಗೆ ಪರೋಕ್ಷ ಕಾರಣವಾಗುತ್ತದೆ.

ಆವರಿಸುತ್ತಿದೆ ಅಂತರಗಂಗೆ: ಉಳ್ತೂರು, ಮಲ್ಯಾಡಿ, ಬೇಳೂರು ಗ್ರಾಮೀಣ ಭಾಗಗಳಲ್ಲಿ ಕಳೆದ ಮೂರು ವರ್ಷಗಳಿಂದ ಅಂತರಗಂಗೆಯ ಸಮಸ್ಯೆ ತುಸು ಕಡಿಮೆಯಾಗಿತ್ತು. ಆದರೆ ಈ ಬಾರಿ ಅಂತರಗಂಗೆ ತೇಲಿ ಬರುತ್ತಿದ್ದು ಎಲ್ಲೆಡೆ ವ್ಯಾಪಿಸಿ ಕೃಷಿ ನಾಶವಾಗುವ ಭೀತಿ ಹೆಚ್ಚಾಗಿದೆ.

ಹೊಳೆ ಸಾಲು ಹೂಳೆತ್ತಬೇಕು: ಹಲ್ತೂರು ಬೈಲು, ಉಳ್ತೂರು ಮೂಡುಬೆಟ್ಟಿನಲ್ಲಿ ಈಗಾಗಲೇ ಅಂತರಗಂಗೆ ಕೃಷಿಭೂಮಿಯನ್ನು ವ್ಯಾಪಿಸಿದೆ. ಹಲ್ತೂರಿನ ಹುಣ್ಸೆಕಟ್ಟೆಯಿಂದ ತೆಂಕಬೆಟ್ಟಿನ ಬಟ್ಟೆಕೆರೆ ಬೈಲಿನ ವರೆಗೆ ಹೊಳೆ ಸಾಲನ್ನು ಹೂಳೆತ್ತಬೇಕು. ಇದರಿಂದ ನೀರಿನ ಒಳ ಹರಿವು ಹೆಚ್ಚಾದಾಗ ಗ್ರಾಮದಲ್ಲಿ ಕೃಷಿಕರ ಪಾಲಿಗೆ ಕಂಟಕವಾಗಿದ್ದ ಅಂತರಗಂಗೆ ಸಮಸ್ಯೆಗೆ ಶಾಶ್ವತವಾದ ಪರಿಹಾರ ಕಂಡು ಕೊಳ್ಳಲು ಸಾಧ್ಯವಿದೆ ಎನ್ನುವುದು ಸ್ಥಳೀಯ ಕೃಷಿಕ ಪ್ರತಾಪ್‌ ಶೆಟ್ಟಿ ಉಳ್ತೂರು ಅವರ ಅಭಿಪ್ರಾಯ.

Advertisement

ಸುಲಭದಲ್ಲಿ ಸಾಯದು
ನೀರಿನಿಂದ ಹೊರತೆಗೆದು ದಂಡೆಗಳಲ್ಲಿ ಒಣಗಿಸಿ ಅನಂತರ ಕೆಲವೊಂದು ರಾಸಾಯನಿಕ ಸಿಂಪಡಣೆ ಅಥವಾ ಸುಟ್ಟಾಗ ಮಾತ್ರ ಶಾಶ್ವತವಾಗಿ ಅಂತರಗಂಗೆಯನ್ನು ನಾಶ ಮಾಡಲು ಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next