Advertisement
ಈ ಬಾರಿ ಮೌಲ್ಯ ಮಾಪನ ಪ್ರಕ್ರಿಯೆನಿರ್ವಹಣೆ ಜವಾಬ್ದಾರಿಯನ್ನು ವಿ.ವಿ. ಆ್ಯಟ್ರಿಸ್ ಟೆಕ್ನಾಲಜೀಸ್ ಸಂಸ್ಥೆಗೆ ಹೊರಗುತ್ತಿಗೆ ವಹಿಸಿದೆ. ಆದರೆ ಸಮನ್ವಯದ ಕೊರತೆಯಿಂದಾಗಿ ಆ ಸಂಸ್ಥೆಯು ಮೌಲ್ಯಮಾಪನ ಪ್ರಕ್ರಿಯೆಯನ್ನು ಸರಿಯಾಗಿ ನಿರ್ವಹಣೆ ಮಾಡದೆ, ವಿದ್ಯಾರ್ಥಿಗಳ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ ಎನ್ನುವುದು ಎಬಿವಿಪಿ ಆರೋಪ.
ಮೌಲ್ಯಮಾಪನ ಕೇಂದ್ರಗಳಿಗೆ ಉತ್ತರ ಪತ್ರಿಕೆ ಸಕಾಲದಲ್ಲಿ ತಲುಪದ ಕಾರಣ ಮೌಲ್ಯಮಾಪಕರಿಗೆ ಕೆಲಸ
ವಿಲ್ಲದಂತಾಗಿದೆ. ಕೆಲವು ಉತ್ತರ ಪತ್ರಿಕೆಗಳು ಶೇ. 10ರಷ್ಟು ಮಾತ್ರ ಮೌಲ್ಯ ಮಾಪನ ಕೇಂದ್ರಕ್ಕೆ ತಲುಪಿದ್ದು, ಕೆಲವೇ ಸಮಯದೊಳಗೆ ಮೌಲ್ಯಮಾಪನ ಮುಗಿಯುತ್ತಿತ್ತು. ಆ ಬಳಿಕ ಯಾವುದೇ ಕೆಲಸ ಇಲ್ಲದ್ದರಿಂದಾಗಿ ಒಂದೆರಡು ದಿನ ರಜೆ ನೀಡಬೇಕಾದ ಪರಿಸ್ಥಿತಿ ಬಂದೊದಗಿದೆ. ಈ ಕಾರಣಕ್ಕೆ ಕೆಲವು ಮೌಲ್ಯಮಾಪಕರು ಧರಣಿ ಕುಳಿತ ಘಟನೆಯೂ ನಡೆದಿದೆ. ಪರೀಕ್ಷಾ ಕೇಂದ್ರಗಳಲ್ಲೇ ಬಾಕಿ!
ಇನ್ನೂ ಕೆಲವು ಉತ್ತರ ಪತ್ರಿಕೆಗಳು ಪರೀಕ್ಷಾ ಕೇಂದ್ರಗಳಲ್ಲೇ ಬಾಕಿಯಾ ಗಿವೆ. ಉತ್ತರ ಪತ್ರಿಕೆಗಳು ಕೋಡಿಂಗ್, ಡಿ-ಕೋಡಿಂಗ್ ಆಗದೇ ಮೌಲ್ಯ ಮಾಪನಕ್ಕೆ ಹೋಗುತ್ತಿವೆ ಎಂದು ಎಬಿವಿಪಿ ಜಿಲ್ಲಾ ಸಂಚಾಲಕ ಸಂದೇಶ ರೈ ತಿಳಿಸಿದ್ದಾರೆ.
Related Articles
ಉತ್ತರ ಪತ್ರಿಕೆಗಳ ಡೇಟಾ ಎಂಟ್ರಿ ಮೂಲಕ ಕಂಪ್ಯೂಟರೀಕರಣ ಮಾಡುವ ಪ್ರಕ್ರಿಯೆಯೂ ಈ ಬಾರಿ ನಡೆದಿಲ್ಲ. ಡೇಟಾ ಎಂಟ್ರಿ ಸಿಬಂದಿಗೆ ವಿ.ವಿ. ಕಳೆದ ವರ್ಷದ ಸಂಬಳವನ್ನು ಸರಿಯಾಗಿ ನೀಡದಿರುವುದು ಕಾರಣವಾಗಿದೆ. ಸಂಬಳ ನೀಡದೆ ಕೆಲಸ ಮಾಡುವುದಿಲ್ಲ ವೆಂದು ಡೇಟಾ ಎಂಟ್ರಿ ಸಿಬಂದಿ ತಿಳಿಸಿ ದ್ದಾರೆ. ವಿವಿಯ ಈ ಅವ್ಯವಸ್ಥೆಯಿಂದಾಗಿ ವಿದ್ಯಾರ್ಥಿಗಳು ತೊಂದರೆಯಲ್ಲಿ ಸಿಲುಕುವಂತಾಗಿದೆ. ಮೌಲ್ಯಮಾಪನ ತಡವಾದರೆ ಫಲಿತಾಂಶ ವಿಳಂಬವಾಗು ತ್ತದೆ. ಇದರಿಂದ ಪಾಠಗಳು ಬಾಕಿಯಾಗಿ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸಬೇಕಾಗುತ್ತದೆ.
Advertisement
ಹೊರಗುತ್ತಿಗೆ ಸಂಸ್ಥೆ ಬ್ಲ್ಯಾಕ್ ಲಿಸ್ಟ್ಗೆಹೊರಗುತ್ತಿಗೆ ವಹಿಸಿಕೊಂಡ ಸಂಸ್ಥೆಯು ಸರಿಯಾಗಿ ಕಾರ್ಯನಿರ್ವಹಣೆ ಮಾಡದ ಕಾರಣ ಮೌಲ್ಯಮಾಪನ ಪ್ರಕ್ರಿಯೆ ತಡವಾಗುತ್ತಿದೆ. ಈ ಬಾರಿ ಆ ಸಂಸ್ಥೆಗೆ ಹೊರಗುತ್ತಿಗೆ ನೀಡಿರುವುದರಿಂದ ಏನೂ ಮಾಡಲಾಗುವುದಿಲ್ಲ. ಮುಂದಿನ ಮೇ ತಿಂಗಳಿನಲ್ಲಿ ನಡೆಯುವ ಪರೀಕ್ಷೆಯ ವೇಳೆ ಈಗಿನ ಸಂಸ್ಥೆಯನ್ನು ಕೈ ಬಿಟ್ಟು ಬೇರೆ ಸಂಸ್ಥೆಗೆ ನೀಡಲಾಗುವುದು. ಈಗಿನ ಸಂಸ್ಥೆ ಸರಿಯಾಗಿ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಅದನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು.
-ಡಾ| ಪಿ.ಎಸ್. ಎಡಪಡಿತ್ತಾಯ, ಉಪಕುಲಪತಿ, ಮಂಗಳೂರು ವಿ.ವಿ.