Advertisement

VTU ನಿಂದ ಆನ್ಸರ್‌, ಕಿರು ಪದವಿ

11:39 PM Nov 15, 2023 | Team Udayavani |

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ತನ್ನ ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ಉದ್ದಿಮೆಗಳ ಕೌಶಲ ಬೇಡಿಕೆಗೆ ಅನುಗುಣವಾದ ಆನರ್, ಕಿರು ಪದವಿ ಮತ್ತು ಪ್ರಮಾಣಪತ್ರ ಕಾರ್ಯಕ್ರಮಗಳನ್ನು ಆರಂಭಿಸಿದೆ.ಈ ಬಗ್ಗೆ ಬೆಂಗಳೂರಿನ ವಿಟಿಯು ಪ್ರಾದೇಶಿಕ ಕಚೇರಿಯಲ್ಲಿ ವಿವಿಧ ಸಂಸ್ಥೆಗಳ ಜತೆಗಿನ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಲಪತಿ ಪ್ರೊ| ಎಸ್‌. ವಿದ್ಯಾಶಂಕರ್‌, ವಿಟಿಯು ವಿದ್ಯಾರ್ಥಿಗಳನ್ನು ಕೌಶಲಭರಿತರನ್ನಾಗಿಸುವುದು ಮತ್ತು ಉದ್ದಿಮೆಯ ಇಂದಿನ ಅಗತ್ಯಕ್ಕೆ ಅನುಗುಣವಾದ ಕಲಿಕೆಯನ್ನು ನೀಡುವ ದೃಷ್ಟಿಯಿಂದ ಹತ್ತು ಉದ್ದಿಮೆಗಳ ಜತೆ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ತಿಳಿಸಿದರು. ಉದ್ದಿಮೆಗಳು ನಮ್ಮ ಆನ್‌ಲೈನ್‌ ವೇದಿಕೆಯನ್ನು ಬಳಸಿಕೊಂಡು ತಮ್ಮ ಉದ್ಯಮದ ಅಗತ್ಯಕ್ಕೆ ಅನುಗುಣ ವಾಗಿ ಕೋರ್ಸ್‌ಗಳ ಪಠ್ಯ ರೂಪಿಸಿ ಬೋಧಕ ಸಿಬಂದಿಯನ್ನು ನೀಡಲಿವೆ.

Advertisement

ಆದರೆ ಪರೀಕ್ಷೆ ಮತ್ತು ಮೌಲ್ಯಮಾಪನವನ್ನು ವಿಟಿಯು ನಡೆಸಲಿದೆ. ಆಸಕ್ತರು ವಿಟಿಯು ವೆಬ್‌ಸೈಟ್‌ //online.vtu.ac.in ನಲ್ಲಿ ನೋಂದಣಿ ಮಾಡಿಕೊಳ್ಳಬಹುದು ಎಂದು ಪ್ರೊ| ವಿದ್ಯಾಶಂಕರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next