Advertisement
ಬೆಂಗಳೂರಿನಲ್ಲಿ ಸಾರ್ವಜನಿಕರ ದಟ್ಟಣೆಯನ್ನು ನಿಯಂತ್ರಿಸಲು ಕಷ್ಟವಾಗಬಹುದೆಂದು ಜ. 8ರಂದು ನ್ಯಾಶನಲ್ ಕಾಲೇಜು ಮೈದಾನದಲ್ಲಿ ಅನ್ನಸಂತರ್ಪಣೆ ನಡೆಸಲು ಚಿಂತನೆ ನಡೆಸಲಾಗುತ್ತಿದೆ. ಬೆಂಗಳೂರಿನ ಎರಡೂ ದಿನಗಳ ಕಾರ್ಯಕ್ರಮಗಳಲ್ಲಿ ನೂತನ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಪಾಲ್ಗೊಳ್ಳಲು ಅನುಕೂಲವಾಗುವಂತೆ ಮತ್ತು ಶ್ರೀ ವಿಶ್ವೇಶತೀರ್ಥರು ಹರಿಪಾದ ಸೇರಿದ ವೇಳೆ ಸಹಕರಿಸಿದವರು, ಸರಕಾರಿ ಆಡಳಿತದೊಂದಿಗೆ ಸಮಾಲೋಚನೆ ನಡೆಸಿ ಕಾರ್ಯಕ್ರಮ ಯೋಜಿಸಲಾಗುತ್ತಿದೆ.
ಉಡುಪಿ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ನೇತೃತ್ವದಲ್ಲಿ ಆರಾಧನೆ ನಡೆಯಲಿದೆ. ರಾಜಾಂಗಣದಲ್ಲಿ ಜ. 17ರ ವರೆಗೂ ಸಂಜೆ ನಡೆಯುವ ಮಹಾಭಾರತದ ಉಪನ್ಯಾಸಗಳನ್ನು ಅಗಲಿದ ಶ್ರೀಗಳಿಗೆ ಸಮರ್ಪಿಸಲಾಗುತ್ತಿದೆ. ಇದು ಡಿ. 30ರಿಂದ ಆರಂಭಗೊಂಡಿದೆ. ಉಡುಪಿ ಪೇಜಾವರ ಮಠದಲ್ಲಿ ಆರಾಧನೆಯವರೆಗೂ ಶ್ರೀಗಳ ಭಾವಚಿತ್ರವಿರಿಸಿ ಪ್ರಹ್ಲಾದ ಗುರುಕುಲದ ಮಕ್ಕಳು ಪ್ರಾರ್ಥನೆ ಸಲ್ಲಿಸುವರು. ಜ. 10ರಂದು ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಉಡುಪಿಗೆ ಬರಲಿದ್ದಾರೆ. ಭಕ್ತರ ಭೇಟಿ
ಪೂರ್ಣಪ್ರಜ್ಞ ವಿದ್ಯಾಪೀಠದ ಶ್ರೀಗಳ ವೃಂದಾವನ ಸನ್ನಿಧಿಗೆ ಮಂಗಳವಾರವೂ ಭೇಟಿ ಕೊಡುವ ಜನಸಂದಣಿ ಮುಂದುವರಿದಿದೆ. ಅಖಂಡ ಪಾರಾಯಣ, ಭಜನೆ, ಪಂಡಿತರ ವಾಖ್ಯಾರ್ಥಗಳು ಮುಂದುವರಿಯುತ್ತಿವೆ. ಮಂಗಳವಾರ ಅದಮಾರು ಮಠದ ಕಿರಿಯ ಶ್ರೀಪಾದರು, ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಮೊದಲಾದವರು ಭೇಟಿ ನೀಡಿದರು.