ಚೆನ್ನೈ : ರಕ್ತದಲ್ಲಿ ಕಡಿಮೆ ಹಿಮೋಗ್ಲಾಬಿನ್ ಇರುವ ಕಾರಣಕ್ಕೆ ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ರಕ್ತ ಮರಪೂರಣ ಚಿಕಿತ್ಸೆಗೆ ಒಳಪಟ್ಟ ತನಗೆ ಎಚ್‌ಐವಿ ಸೋಂಕು ತಗಲಿದೆ ಎಂದು ತಮಿಳು ನಾಡಿನ ಮಹಿಳೆ ಹೇಳಿಕೊಂಡಿದ್ದು ಇದರೊಂದಿಗೆ ರಾಜ್ಯದಲ್ಲಿ ಎರಡನೇ ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣ ಬೆಳಕಿಗೆ ಬಂದಿದೆ.
ಆದರೆ ಮಹಿಳೆ ಚಿಕಿತ್ಸೆ ಪಡೆದುಕೊಂಡಿರುವ ಸರಕಾರಿ ಆಸ್ಪತ್ರೆ ಆಕೆಯ ಆರೋಪವನ್ನು ತಿರಸ್ಕರಿಸಿದೆ.
ತಮಿಳು ಟಿವಿ ಚ್ಯಾನಲ್ ಜತೆಗೆ ಇಂದು ಶುಕ್ರವಾರ ಮಾತನಾಡಿದ 20ರ ಹರೆಯದ ಮಹಿಳೆಯು, ಈ ವರ್ಷ ಎಪ್ರಿಲ್‌ನಲ್ಲಿ ಗರ್ಭವತಿಯಾಗಿದ್ದ ತಾನು ರಕ್ತ ಮರುಪೂರಣ ಪಡೆದಾಗ ತನಗೆ ಎಚ್‌ಐವಿ ಸೋಂಕು ತಗಲಿತೆಂದು ಹೇಳಿದ್ದಾಳೆ.
ಎರಡು ದಿನಗಳ ಹಿಂದಷ್ಟೇ ತಮಿಳು ನಾಡಿನ ವಿರೂಧನಗರದಲ್ಲಿ 24 ವರ್ಷ ಪ್ರಾಯ ಗರ್ಭಿಣಿಗೆ ರಕ್ತ ಮರುಪೂರಣ ಮಾಡುವ ಸಂದರ್ಭದಲ್ಲಿ ಆಕೆಗೆ ಎಚ್‌ಐವಿ ತಗುಲಿರುವುದು ಪತ್ತೆಯಾಗಿತ್ತು.
ರಕ್ತ ಮರುಪೂರಣಕ್ಕೆ ಮುನ್ನ ರಕ್ತವನ್ನು ಎಚ್‌ಐವಿಗಾಗಿ ಸ್ಕ್ರೀನ್ ಮಾಡದಿರುವ ನಿರ್ಲಕ್ಷ್ಯವನ್ನು ರಕ್ತ ಬ್ಯಾಂಕ್ ಸಿಬಂದಿಗಳು ತೋರಿರುವ ಕಾರಣಕ್ಕೆ ತಮಿಳು ನಾಡು ಸರಕಾರ ರಾಜ್ಯದಲ್ಲಿನ ಎಲ್ಲ ರಕ್ತ ಬ್ಯಾಂಕ್‌ಗಳಲ್ಲಿ ರಕ್ತದ ಸ್ಟಾಕನ್ನು ಕೂಲಂಕಷ ಪರೀಕ್ಷೆಗೆ ಒಳಪಡಿಸಲು ಆದೇಶಿಸಿತ್ತು.
ವಿರೂಧನಗರಕ್ಕೆ ಸಮೀಪದ ಸಟ್ಟೂರಿನ ಸರಕಾರಿ ಆಸ್ಪತ್ರೆಯ ರಕ್ತ ಬ್ಯಾಂಕಿನ ಮೂವರು ಲ್ಯಾಬ್ ಟೆಕ್ನೀಶಿಯನ್‌ಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಆರೋಗ್ಯ ಸಚಿವ ಸಿ ವಿಜಯಭಾಸ್ಕರ್ ಇಂದು ಬುಧವಾರ ತಿಳಿಸಿದ್ದರು.