Advertisement
ನರಗುಂದ ಹಾಗೂ ರೋಣ ತಾಲೂಕಿನಲ್ಲಿ ಮಲಪ್ರಭಾ ನವಿಲುತೀರ್ಥ ಜಲಾಶಯದ ಹೊರ ಹರಿವಿನ ನೆರೆಯಿಂದ ಹಾನಿಗೊಳಗಾಗಿರುವುದನ್ನು ವೀಕ್ಷಿಸಿದ ಬಳಿಕ ಕೊಣ್ಣೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳೆ ಹಾನಿ ಕುರಿತಂತೆ ಮತ್ತೂಂದು ಕೇಂದ್ರ ತಂಡ ಸಮೀಕ್ಷೆಗೆ ಬರಲಿದೆ ಎಂದರು.
Related Articles
Advertisement
ಮಳೆ ಕೊರತೆಯಿಂದಾಗಿ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತವೆಂದು ರಾಜ್ಯ ಸರ್ಕಾರ ಘೋಷಿಸಿತ್ತು. ಆದರೆ, ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಭಾರಿ ಮಳೆಯಿಂದ ನವಿಲುತೀರ್ಥ ಜಲಾಶಯದಿಂದ 70 ಸಾವಿರ ದಿಂದ 1.20 ಲಕ್ಷ ಕ್ಯೂಸೆಕ್ ನೀರನ್ನು ಎರಡು ದಿನಗಳ ಕಾಲ ಹರಿಸಿದ್ದರಿಂದ ನರಗುಂದ ತಾಲೂಕಿನ ಕೊಣ್ಣೂರ, ಲಖಮಾಪುರ, ಬೂದಿಹಾಳ, ಶಿರೋಳ, ಕುರ್ಲಗೇರಿ, ಮೂಗನೂರ, ಬನಹಟ್ಟಿ, ಸುರಕೋಡ, ಹದಲಿ, ಗಂಗಾಪುರ, ಖಾನಾಪುರ, ವಾಸನ, ಬೆಳ್ಳೇರಿ, ರೋಣ ತಾಲೂಕಿನ ಹೊಳೆ ಆಲೂರು, ಕುರುವಿನಕೊಪ್ಪ, ಮೆಣಸಗಿ, ಅಮರಗೋಳ, ಹೊಳೆಮಣ್ಣೂರ, ಬಸರಕೋಡ, ಬಿ.ಎಸ್.ಬೆಲೇರಿ, ಬೋಪಳಾಪುರ, ಗಾಡಗೋಳಿ, ಯಾವಗಲ್ಲ, ಕರಮಡಿ, ಅಸೂಟಿ ಗ್ರಾಮಗಳು ಹಾಗೂ ಶಿರಹಟ್ಟಿಯ 8 ಗ್ರಾಮಗಳು ತುಂಗಭದ್ರಾ ಪ್ರವಾಹದಿಂದ ಜಲಾವೃತಗೊಂಡು ಅಪಾರ ಹಾನಿ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಕೇಂದ್ರ ತಂಡಕ್ಕೆ ಮಾಹಿತಿ ನೀಡಿದರು.
ಜಿಲ್ಲಾಡಳಿತ ಹವಾಮಾನ ಎಚ್ಚರಿಕೆ ಆಧರಿಸಿ, ಮುಂಚಿತವಾಗಿ ಗ್ರಾಮಗಳ ಜನ, ಜಾನುವಾರುಗಳ ಸ್ಥಳಾಂತರಕ್ಕೆ ಕ್ರಮ, ಮುನ್ನೆಚ್ಚರಿಕೆ ನೀಡಲಾಗಿತ್ತು. ಆದರೆ, ನಿರೀಕ್ಷೆಗಿಂತ ಹೆಚ್ಚು ಹೊರ ಹರಿವು ಹಾಗೂ ಬೆಣ್ಣಿಹಳ್ಳದಿಂದ ಪ್ರವಾಹ ಉಂಟಾಗಿತ್ತು. ತಕ್ಷಣ ಗ್ರಾಮಸ್ಥರನ್ನು ಸ್ಥಳಾಂತರಕ್ಕೆ ಕೈಕೊಂಡ ಕ್ರಮ, ಮನೆಗಳ ಕುಸಿತ, ರಸ್ತೆ, ಸೇತುವೆ, ಶಾಲಾ ಸರ್ಕಾರಿ ಕಟ್ಟಡಗಳು ಸೇರಿದಂತೆ ಮೂಲಭೂತ ಸೌಕರ್ಯಗಳ, ಬೆಳೆಹಾನಿ ಕುರಿತಂತೆ ಜಿಲ್ಲೆಯ ನರಗುಂದ, ರೋಣ, ಶಿರಹಟ್ಟಿ ಹಾಗೂ ಮುಂಡರಗಿ ತಾಲೂಕಿನಲ್ಲಿ ಆದ ಹಾನಿ ವಿವರವನ್ನು ಛಾಯಾಚಿತ್ರಗಳ ಮೂಲಕ ಕೇಂದ್ರ ಅಧ್ಯಯನ ತಂಡಕ್ಕೆ ಮನವರಿಕೆ ಮಾಡಿಕೊಡಲಾಯಿತು.
ಜಿ.ಪಂ. ಅಧ್ಯಕ್ಷ ಎಸ್.ಪಿ. ಬಳಿಗಾರ, ಸಂಸದ ಪಿ.ಸಿ. ಗದ್ದಿಗೌಡರ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಜಿ.ಪಂ. ಸದಸ್ಯರಾದ ರಾಜುಗೌಡ ಕೆಂಚನಗೌಡ್ರ ಪಡಿಯಪ್ಪ ಪೂಜಾರ, ಜನಪ್ರತಿನಿಧಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.