Advertisement

Kannada Cinema; ‘ಯಾವ ಜನ್ಮದ ಗೆಳತಿ…’: ಕಾಟೇರನ ಡ್ಯುಯೆಟ್ ಹಾಡು ಬಂತು

10:51 AM Dec 12, 2023 | Team Udayavani |

ನಟ ದರ್ಶನ್‌ ಅಭಿನಯದ “ಕಾಟೇರ’ ಸಿನಿಮಾದ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಇದೇ ಡಿಸೆಂಬರ್‌ 29ಕ್ಕೆ ಥಿಯೇಟರ್‌ನಲ್ಲಿ “ಕಾಟೇರ’ನ ದರ್ಶನಕ್ಕೆ ಸಕಲ ತಯಾರಿ ನಡೆದಿದೆ. ಮತ್ತೂಂದೆಡೆ “ಕಾಟೇರ’ ಸಿನಿಮಾದ ಪ್ರಚಾರ ಕಾರ್ಯಗಳನ್ನು ಭರದಿಂದ ನಡೆಸುತ್ತಿರುವ ಚಿತ್ರತಂಡ, ಇದೀಗ ಸಿನಿಮಾದ ಡ್ಯುಯೆಟ್‌ ಹಾಡೊಂದನ್ನು ಬಿಡುಗಡೆ ಮಾಡಿದೆ.

Advertisement

ಸೋಶಿಯಲ್‌ ಮೀಡಿಯಾದಲ್ಲಿ ಬಿಡುಗಡೆಯಾಗಿರುವ “ಯಾವ ಜನ್ಮದ ಗೆಳತಿ… ನನ್ನ ಗೆಳತಿ, ನನ್ನ ಜೀವದ ಒಡತಿ’ ಎಂಬ ಈ ಗೀತೆಗೆ ವಿ. ನಾಗೇಂದ್ರ ಪ್ರಸಾದ್‌ ಸಾಹಿತ್ಯವಿದ್ದು, ಹೇಮಂತ್‌ ಕುಮಾರ್‌ ಮತ್ತು ರಕ್ಷಿತಾ ಸುರೇಶ್‌ ಧ್ವನಿಯಾಗಿದ್ದಾರೆ. ಈ ಹಾಡಿನಲ್ಲಿ ನಟ ದರ್ಶನ್‌ ಮತ್ತು ನಾಯಕಿ ಆರಾಧನಾ ಜೋಡಿಯಾಗಿ ಹೆಜ್ಜೆ ಹಾಕಿದ್ದು ವಿ. ಹರಿಕೃಷ್ಣ ಸಂಗೀತ ಸಂಯೋಜನೆಯಲ್ಲಿ ಈ ಗೀತೆ ಮೂಡಿ ಬಂದಿದೆ.

70ರ ದಶಕದ ಹಿನ್ನೆಲೆಯ ಕತಾಹಂದರ ಹೊಂದಿರುವ “ಕಾಟೇರ’ ಸಿನಿಮಾಕ್ಕೆ ತರುಣ್‌ ಸುಧೀರ್‌ ನಿರ್ದೇಶನವಿದ್ದು, “ರಾಕ್‌ಲೈನ್‌ ಎಂಟರ್‌ಟೈನ್ಮೆಂಟ್ಸ್‌’ ಬ್ಯಾನರ್‌ನಲ್ಲಿ ರಾಕ್‌ಲೈನ್‌ ವೆಂಕಟೇಶ್‌ ಈ ಸಿನಿಮಾಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ನಟಿ ಮಾಲಾಶ್ರೀ ಪುತ್ರಿ ಆರಾಧನಾ ಮೊದಲ ಬಾರಿಗೆ “ಕಾಟೇರ’ ಸಿನಿಮಾದ ಮೂಲಕ ನಾಯಕ ನಟಿಯಾಗಿ ಸ್ಯಾಂಡಲ್‌ವುಡ್‌ಗೆ ಪರಿಚಯವಾಗುತ್ತಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next