ಒಡಿಶಾ : ಒಡಿಶಾದಲ್ಲಿ ಮತ್ತೋರ್ವ ರಷ್ಯನ್ ಪ್ರಜೆ ನಿಗೂಢವಾಗಿ ಸಾವನ್ನಪಿರುವುದು ಬೆಳಕಿಗೆ ಬಂದಿದೆ. ಇದರೊಂದಿಗೆ ಕಳೆದ ಹದಿನೈದು ದಿನದಲ್ಲಿ ಮೂವರು ರಷ್ಯನ್ ಪ್ರಜೆಗಳು ನಿಗೂಢವಾಗಿ ಸಾವನ್ನಪ್ಪಿದಂತಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಒಡಿಶಾದ ಹೋಟೆಲ್ ಒಂದರಲ್ಲಿ ಇಬ್ಬರು ರಷ್ಯನ್ ಪ್ರಜೆಗಳು ಸಾವನ್ನಪ್ಪಿದ್ದರು ಅದಾದ ಬಳಿಕ ಇದೀಗ ಜಗತ್‌ಸಿಂಗ್‌ಪುರ ಜಿಲ್ಲೆಯ ಪಾರಾದೀಪ್ ಬಂದರಿನ ಲಂಗರು ಹಾಕುವ ಹಡಗಿನಲ್ಲಿ ರಷ್ಯಾದ ಪ್ರಜೆ ಶವವಾಗಿ ಪತ್ತೆಯಾಗಿದ್ದಾನೆ.
ಮೃತ ವ್ಯಕ್ತಿಯನ್ನುಇದೆ ಹಡಗಿನ ಮುಖ್ಯ ಇಂಜಿನಿಯರ್ ಮಿಲಿಯಾಕೋವ್ ಸೆರ್ಗೆ ಎಂದು ಗುರುತಿಸಲಾಗಿದೆ, ಈ ಹಡಗಿನಲ್ಲಿ ಭಾರತೀಯರು ಮತ್ತು ರಷ್ಯಾದ ಪ್ರಜೆಗಳು ಸೇರಿದಂತೆ 23 ಸದಸ್ಯರ ಸಿಬ್ಬಂದಿ ಇದ್ದರು ಎನ್ನಲಾಗಿದೆ.
ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ, ಪರದೀಪ್ ಬಂದರು ಅಧಿಕಾರಿಗಳು ಪ್ರಕರಣದ ಕುರಿತು ತನಿಖೆ ಆರಂಭಿಸಿದ್ದಾರೆ.
ಇದಕ್ಕೂ ಮೊದಲು, ರಷ್ಯಾದ ಶಾಸಕ ಮತ್ತು ಉದ್ಯಮಿ ಪಾವೆಲ್ ಆಂಟೊವ್ ಡಿಸೆಂಬರ್ 24 ರಂದು ಒಡಿಶಾದ ರಾಯಗಡದ ಹೋಟೆಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಸರಣಿ ಸಾವಿನ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದು ಇನ್ನಷ್ಟೇ ನಿಖರ ಕಾರಣ ತಿಳಿದುಬರಬೇಕಾಗಿದೆ.
ಇದನ್ನೂ ಓದಿ: ಉದ್ಘಾಟನೆಗೊಂಡು ನಾಲ್ಕೇ ದಿನಕ್ಕೆ ವಂದೇ ಭಾರತ್ ರೈಲಿಗೆ ಕಲ್ಲೆಸೆತ, ತನಿಖೆಗೆ ಬಿಜೆಪಿ ಒತ್ತಾಯ