Advertisement

ಖಾಸಗಿ ಆಸ್ಪತ್ರೆಯ ಆಯಾಗೆ ಕೋವಿಡ್-19 ದೃಢ: ಕಲಬುರಗಿಯಲ್ಲಿ ಸೋಂಕಿತರ 11ಕ್ಕೆ ಏರಿಕೆ

09:14 AM Apr 12, 2020 | keerthan |

ಕಲಬುರಗಿ: ನಗರದ ಖಾಸಗಿ ಆಸ್ಪತ್ರೆಯಲ್ಲಿ ಆಯಾ ಕೆಲಸ ಮಾಡುತ್ತಿದ್ದ 38 ವರ್ಷದ ಮಹಿಳೆಗೆ ಕೋವಿಡ್-19 ಸೋಂಕು ದೃಢ ಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

Advertisement

ಏ.8ರಂದು ಕೋವಿಡ್-19 ಸೋಂಕಿನಿಂದ ಮೃತಪಟ್ಟ ಹಣ್ಣಿನ ವ್ಯಾಪಾರಿ ಚಿಕಿತ್ಸೆ ಪಡೆದಿದ್ದ ಬಹಮನಿ ಆಸ್ಪತ್ರೆಯಲ್ಲಿ‌ ಈಕೆ ಕೆಲಸ ಮಾಡುತ್ತಿದ್ದಳು.‌ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ್ದರಿಂದ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಮೇಲೆ ನಿಗಾ ವಹಿಸಿತ್ತು. ಇದೀಗ ಆಯಾ ಕೆಲಸ ಮಾಡುತ್ತಿದ್ದ ಮಹಿಳೆಗೆ ಸೋಂಕು ಕಾಣಿಸಿಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಿಸಿಎಂ ಗೋವಿಂದ ಕಾರಜೋಳ ಮಾಹಿತಿ ನೀಡಿದರು.

ಹಣ್ಣಿನ ವ್ಯಾಪಾರಿ ಅನಾರೋಗ್ಯ ಹಿನ್ನೆಲೆಯಲ್ಲಿ ಬಹಮನಿ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ, ಕೋವಿಡ್-19 ರೋಗದ ಲಕ್ಷಣಗಳು ಕಂಡುಬಂದರೂ‌ ಚಿಕಿತ್ಸೆ ‌ನೀಡಿದ್ದರು.‌  ಆತನ ಆರೋಗ್ಯ ಸಂಪೂರ್ಣ ಹದಗೆಟ್ಟ ನಂತರ ಆಸ್ಪತ್ರೆಯವರು‌ ಜಿಲ್ಲಾಡಳಿತ ಗಮನಕ್ಕೆ ತಂದಿದ್ದರು.‌

ಹೀಗಾಗಿ ಈಗಾಗಲೇ ಆಸ್ಪತ್ರೆಗೆ ಜಿಲ್ಲಾಡಳಿತ ಬೀಗ ಹಾಕಿ, ಆಸ್ಪತ್ರೆ ಆಡಳಿತ ಮಂಡಳಿ ಹಾಗೂ ವೈದ್ಯರ ವಿರುದ್ದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next