Advertisement

ಮಾದಕ ವಸ್ತು ಮಾರಾಟದಲ್ಲೇ ಮತ್ತದೇ ನೈಜೀರಿಯಾ ಪ್ರಜೆ ಸೆರೆ

11:33 AM Apr 29, 2017 | |

ಬೆಂಗಳೂರು: ರೈಲಿನಲ್ಲಿ ಅಕ್ರಮವಾಗಿ ಕೊಕೇನ್‌ ಸಾಗಣೆ ಮಾಡುತ್ತಿದ್ದ ನೈಜೀಧಿರಿಯಾ ಪ್ರಜೆಯೊಬ್ಬನನ್ನು ಕೇಂದ್ರ ಮಾದಕ ವಸ್ತು ನಿಯಂತ್ರಣ ದಳದ (ಎನ್‌ಸಿಬಿ) ಅಧಿಕಾರಿಗಳು ಗುರುಧಿವಾರ ಬಂಧಿಸಿ, ಒಂದು ಕೋಟಿ ಮೌಲ್ಯದ ಕೊಕೇನ್‌ ವಶಪಡಿಸಿಧಿಕೊಂಡಿದ್ದಾರೆ.

Advertisement

ಲಾರಿ ಒಯೆಕಚ್ಚಿ (35)ನೈಜೀರಿಯಾ ಪ್ರಜೆ ಬಂಧಿತ. ಆರೋಪಿ ಬೆಂಗಳೂರು ರಾಜಧಾನಿ “ಎಕ್ಸ್‌ಪ್ರೆಸ್‌’ ರೈಲಿನಲ್ಲಿ ನಗರಕ್ಕೆ ಬರುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಸಿಕಂದರಾಧಿಬಾದ್‌ ರೈಲ್ವೆ ನಿಲ್ದಾಣದಲ್ಲಿ ತಡೆದು ತಪಾಸಣೆ ನಡೆಸಿದಾಗ ಆತನ ಬಳಿ 1 ಕೋಟಿ ಮೌಲ್ಯದ 200 ಗ್ರಾಂ ಕೊಕೇನ್‌ ಪತ್ತೆಯಾಯಿತು.

ವಿದೇಶಗಳಿಂದ ಕೊಕೇನ್‌ ತರಿಸಿಕೊಳ್ಳುತ್ತಿದ್ದ ಆರೋಪಿ ಬೆಂಗಳೂರು, ಹೈದರಾಬಾದ್‌, ಮುಂಬೈ ನಲ್ಲಿರುವ ಕೆಲ ಮಾರಾಟಧಿಗಾರರಿಗೆ ಪೂರೈಕೆ ಮಾಡುತ್ತಿದ್ದ  ಎಂದು ಕೇಂದ್ರ ಮಾದಕ ವಸ್ತು ನಿಯಂತ್ರಣ ದಳದ ನಿರ್ದೇಶಕ ಸುನೀಲ್‌ ಸಿನ್ಹಾ ತಿಳಿಸಿದ್ದಾರೆ. 
 

Advertisement

Udayavani is now on Telegram. Click here to join our channel and stay updated with the latest news.

Next