Advertisement

ಹಣಕ್ಕಾಗಿ ಇನ್ನೊಂದು ಕೊಲೆ ಮಾಡಿದ್ದರು

12:03 PM Apr 07, 2017 | |

ಬೆಂಗಳೂರು: ಸೋದರಿಯ ಮೇಲೆ ಕಣ್ಣು ಹಾಕಿದ್ದ ಸ್ನೇಹಿತನ ಕೊಂದ ಆರೋಪದಲ್ಲಿ ಇತ್ತೀಚೆಗಷ್ಟೇ ಬಂಧನಕ್ಕೊಳಗಾಗಿದ್ದ ಕೆಂಗೇರಿ ಸಮೀಪದ ಶ್ರೀನಿವಾಸಪುರ ಕಾಲೋನಿಯ ಪ್ರತಾಪ್‌ ಮತ್ತು ಮಾದೇಶ ಎಂಬುವವರು ಈ ಹಿಂದೆ ಮತ್ತೂಂದು ಕೊಲೆ ಮಾಡಿರುವುದು ಬಯಲಾಗಿದೆ. 

Advertisement

ಆರೋಪಿಗಳು ಮಾ.30ರಂದು ಕೆಂಗೇರಿ ಸಮೀಪದ ಶ್ರೀನಿವಾಸಪುರ ಕಾಲೋನಿಯ ರಾಜಕಾಲುವೆ ಬಳಿ ಪುಟ್ಟಸ್ವಾಮಿ ಎಂಬಾತನನ್ನು ಕೊಲೆಗೈದಿದ್ದರು. ಪ್ರತಾಪನ ಸೋದರಿಯ ಮೇಲೆ ಪುಟ್ಟಸ್ವಾಮಿ ಕಣ್ಣು ಹಾಕಿದ್ದ, ಮದುವೆ ಮಾಡಿಕೊಡುವಂತೆ ಪೀಡಿಸುತ್ತಿದ್ದ. ಆದ್ದರಿಂದ ಈ ಕೊಲೆ ನಡೆದಿತ್ತು.

ಪ್ರಕರಣದಲ್ಲಿ ಪ್ರತಾಪ್‌ ಮತ್ತು ಮಾದೇಶನನ್ನು ಬಂಧಿಸಲಾಗಿತ್ತ. ಆದರೆ, ಈ ಕೊಲೆಗೂ ಮುನ್ನ ಆರೋಪಿಗಳು ತಮ್ಮ ಮತ್ತೂಬ್ಬ ಸ್ನೇಹಿತ ಶಿವಕುಮಾರನನ್ನು ಹಣಕ್ಕಾಗಿ ಕೊಂದಿದ್ದರು. ತನಿಖೆ ವೇಳೆ ಈ ಕೊಲೆ ಪ್ರಸಂಗವನ್ನು ಆರೋಪಿಗಳು ಬಾಯಿ ಬಿಟ್ಟಿದ್ದಾರೆ. 

ಕಾಣೆಯಾಗಿದ್ದವನ ಪೋಸ್ಟರ್‌ ಹಿರಿಯುತ್ತಿದ್ದ ಆರೋಪಿಗಳು: ಮಾರ್ಚ್‌ 16ರಂದು ಕಾನ್‌ಕಾರ್ಡ್‌ ರಸ್ತೆಯ ಚರಂಡಿಯಲ್ಲಿ ವ್ಯಕ್ತಿಯೊಬ್ಬನ ದೇಹ ಪತ್ತೆಯಾಗಿತ್ತು. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೃತದೇಹ ಕೊಳೆತ ಸ್ಥಿತಿಯಲ್ಲಿದ್ದಿದ್ದರಿಂದ ಗುರುತು ಪತ್ತೆಯಾಗಿರಲಿಲ್ಲ. ಆದರೆ, ಆ ವ್ಯಕ್ತಿ ಕೈ ಮೇಲೆ ಮಾಲಾ ಎಂಬ ಹಚ್ಚೆ ಇತ್ತು.

ಇದೇ ಗುರುತು ಇಟ್ಟುಕೊಂಡು ಪೊಲೀಸರು ಶ್ರೀನಿವಾಸಪುರ ಕಾಲೋನಿಯಲ್ಲಿ ವ್ಯಕ್ತಿಯ ಪತ್ತೆಗೆ ಪೋಸ್ಟರ್‌ಗಳನ್ನು ಅಂಟಿಸಿದ್ದರು. ಪೋಸ್ಟರ್‌ಗಳನ್ನು ನೋಡಿದ್ದ ಪ್ರತಾಪ್‌ ಹಾಗೂ ಮಾದೇಶ್‌ ಅವುಗಳನ್ನು ಹರಿದು ಹಾಕುತ್ತಿದ್ದರು. ಇವರ ಅನುಮಾನಾಸ್ಪದ ವರ್ತನೆ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. 

Advertisement

ಈ ನಡುವೇ ಪುಟ್ಟಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರತಾಪ್‌ ಹಾಗೂ ಮಾದೇಶ್‌ನನ್ನು ಬಂಧಿಸಿದ್ದ ಪೊಲೀಸರು, ಪೋಸ್ಟರ್‌ ಹರಿಯುತ್ತಿದ್ದುದ್ದು ಏಕೆ ಎಂದು ಇಬ್ಬರನ್ನೂ ಪ್ರಶ್ನಿಸಿದ್ದಾರೆ. ಆಗ ಈ ಮತ್ತೂಂದು ಕೊಲೆ ಪ್ರಕರಣ ಬಯಲಾಗಿದೆ. 

ಮಾದೇಶ ಹಾಗೂ ಪ್ರತಾಪ್‌ ಇಬ್ಬರೂ ತಮ್ಮ ಸ್ನೇಹಿತ, ಸಿನಿಮಾ ಲೈಟ್‌ ಬಾಯ್‌ ಆಗಿದ್ದ ಶಿವಕುಮಾರ್‌ನನ್ನು ಮಾರ್ಚ್‌ 12ರಂದು  ಕಾನ್‌ಕಾರ್ಡ್‌ ರಸ್ತೆಯ ಬಳಿ ಕರೆಸಿಕೊಂಡಿದ್ದರು. ಮಾತನಾಡುತ್ತಿರುವಾಗಲೇ ಶಿವಕುಮಾರ್‌ನ ಕುತ್ತಿಗೆಗೆ ಸೀರೆ ಬಿಗಿದು ಕೊಲೆ ಮಾಡಿ, ಆತನ ಜೇಬಿನಲ್ಲಿದ್ದ ಕೇವಲ 2000 ಸಾವಿರ ರೂ ದೋಚಿ, ಶವವನ್ನು ಕಾಲುವೆಯಲ್ಲಿ ಎಸೆದು ಪರಾರಿಯಾಗಿದ್ದರು. ಮನೆಗೆ ತೆರಳಿದ್ದ ಪ್ರತಾಪ್‌, ಶಿವಕುಮಾ ರನನ್ನು ಕೊಲೆ ಮಾಡಿದ್ದಾಗಿ ತನ್ನ ತಂದೆ ರಾಜುಗೆ ತಿಳಿಸಿದ್ದ. 

ಶಿವಕುಮಾರನ ಬಳಿ ಭಾರೀ ಹಣವಿದೆ ಎಂದು ಭಾವಿಸಿ ಆತನನ್ನು ಕೊಲೆಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಕೊಲೆಗೆ ಪ್ರತಾಪ್‌ ತಂದೆ ರಾಜು ಕೂಡ ಸಹಕಾರ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ, ರಾಜು ಅವರನ್ನು ಬಂಧಿಸಲಾಯಿತು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next