Advertisement

ಮತ್ತೂಬ್ಬಳು ಕಾಜಲ್‌, ಮತ್ತೂಂದು ಪ್ರತಿಮೆ !

06:27 PM Dec 26, 2019 | mahesh |

ಟಾಲಿವುಡ್‌, ಕಾಲಿವುಡ್‌ನಿಂದ, ಬಾಲಿವುಡ್‌ವರೆಗೂ ಸಿನಿಪ್ರಿಯರಿಗೆ ಪರಿಚಿತವಾಗಿರುವ ಮಗಧೀರ ಖ್ಯಾತಿಯ ಕಾಜಲ್‌ ಅಗರ್‌ವಾಲ್‌ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಾರೆ. ಸರಿಸುಮಾರು ಒಂದು ದಶಕಗಳ ಕಾಲ ದಕ್ಷಿಣ ಭಾರತದ ಬಹುತೇಕ ಸ್ಟಾರ್‌ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡು, ಬಳಿಕ ಬಾಲಿವುಡ್‌ ಅಂಗಳಕ್ಕೂ ಅಡಿಯಿಟ್ಟಿದ್ದ ಕಾಜಲ್‌ ಅಗರ್‌ವಾಲ್‌ ಅವರ ಮೇಣದ ಪ್ರತಿಮೆ ಸಿಂಗಾಪುರದಲ್ಲಿರುವ ಪ್ರತಿಷ್ಠಿತ ಮೇಡಮ್‌ ಟುಸ್ಸಾಡ್ಸ್‌ನಲ್ಲಿ ಅನಾವರಣವಾಗಲಿದೆಯಂತೆ.

Advertisement

ಹೌದು, ಚಿತ್ರರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿದವರು ಮತ್ತು ಕೆಲವೇ ಕೆಲವು ಜನಪ್ರಿಯ ಕಲಾವಿದರ ಮೇಣದ ಪ್ರತಿಮೆಯನ್ನು ಮೇಡಮ್‌ ಟುಸ್ಸಾಡ್ಸ್‌ನಲ್ಲಿ ನಿರ್ಮಿಸಿ ಅವರಿಗೆ ಗೌರವ ನೀಡಲಾಗುತ್ತದೆ. ಪ್ರತಿವರ್ಷ ಈ ಮ್ಯೂಸಿಯಂಗೆ ಭೇಟಿ ನೀಡುವ ಲಕ್ಷಾಂತರ ಪ್ರವಾಸಿಗರು ಕೂಡ ಈ ಪ್ರತಿಮೆಗಳನ್ನು ನೋಡಲು ಕಾತುರರಾಗಿರುತ್ತಾರೆ.

ಈಗ ಇಂಥದ್ದೊಂದು ಗೌರವಕ್ಕೆ ಪಾತ್ರವಾಗುತ್ತಿರುವ ಸ್ಟಾರ್ ಪಟ್ಟಿಯಲ್ಲಿ ಕಾಜಲ್‌ ಅಗರ್‌ವಾಲ್‌ ಹೆಸರೂ ಸೇರ್ಪಡೆಯಾಗುತ್ತಿದೆ. ಈಗಾಗಲೇ ಮ್ಯೂಸಿ ಯಂನ ಶಿಲ್ಪಕಲಾ ವಿಭಾಗದ ಕಲಾವಿದರ ತಂಡ ಈ ಸಂಬಂಧ ಕಾಜಲ್‌ ಅವರನ್ನು ಭೇಟಿ ಮಾಡಿ ಅವರ ಎತ್ತರ, ತೂಕ, ಸ್ಕಿನ್‌ಟೋನ್‌, ಐ ಕಲರ್‌, ಕೂದಲಿನ ಸಾಂದ್ರತೆ ಮತ್ತಿತರ ವಿವರಗಳನ್ನು ಪಡೆದುಕೊಂಡು ಹೋಗಿದ್ದು, ಕೆಲ ದಿನಗಳ ಹಿಂದಷ್ಟೇ ಮೇಣದ ಪ್ರತಿಮೆ ನಿರ್ಮಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಮೂಲಗಳ ಪ್ರಕಾರ 2020ರ ಫೆಬ್ರವರಿ 5ಕ್ಕೆ ಮೇಡಮ್‌ ಟುಸ್ಸಾಡ್ಸ್‌ನಲ್ಲಿ ಕಾಜಲ್‌ ಅಗರ್‌ವಾಲ್‌ ಮೇಣದ ಪ್ರತಿಮೆ ಅನಾವರಣವಾಗಲಿದೆ ಎನ್ನಲಾಗುತ್ತಿದೆ.

ಈ ಬಗ್ಗೆ ಮಾತನಾಡುವ ಕಾಜಲ್‌ ಅಗರ್‌ವಾಲ್‌, “ನಾನು ಚಿಕ್ಕವಳಿದ್ದಾಗ ಮೇಡಮ್‌ ಟುಸ್ಸಾಡ್ಸ್‌ಗೆ ಭೇಟಿ ನೀಡಿದ್ದಾಗ ಅಲ್ಲಿದ್ದ ಕಲಾವಿದರ ಪ್ರತಿಮೆಗಳನ್ನು ನೋಡಿ ಬೆರಗಾಗಿದ್ದೆ. ಈಗ ಅದೇ ಸ್ಥಳದಲ್ಲಿ ನನ್ನ ಪ್ರತಿಮೆ ನಿರ್ಮಾಣವಾಗುತ್ತಿರುವುದು ಖುಷಿ ಕೊಟ್ಟಿದೆ’ ಎಂದಿದ್ದಾರೆ.

ಈಗಾಗಲೇ ಮೇಡಮ್‌ ಟುಸ್ಸಾಡ್ಸ್‌ನಲ್ಲಿ ಭಾರತದ ಪ್ರಖ್ಯಾತ ಸ್ಟಾರ್ಗಳಾದ ಅಮಿತಾಬ್‌ ಬಚ್ಚನ್‌, ಶ್ರೀದೇವಿ, ಐಶ್ವರ್ಯಾ ರೈ, ಅನುಷ್ಕಾ ಶರ್ಮ ಮೊದಲಾದ ಅನೇಕರ ಪ್ರತಿಮೆಗಳಿದ್ದು, ಈಗ ದಕ್ಷಿಣ ಭಾರತದ ಚಿತ್ರರಂಗದಲ್ಲೆ ಹೆಚ್ಚು ಗುರುತಿಸಿಕೊಂಡಿರುವ ಕಾಜಲ್‌ ಅಗರ್‌ವಾಲ್‌ ಪ್ರತಿಮೆ ಈ ಮ್ಯೂಸಿಯಂನಲ್ಲಿ ಹೊಸದಾಗಿ ಸೇರ್ಪಡೆಯಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next