Advertisement

ನಜೀಬ್‌ ಅಹ್ಮದ್‌ ಬಳಿಕ ಮತ್ತೋರ್ವ JNU ವಿದ್ಯಾರ್ಥಿ ನಾಪತ್ತೆ

03:46 PM Jan 10, 2018 | udayavani editorial |

ಹೊಸದಿಲ್ಲಿ : ನಜೀಬ್‌ ಅಹ್ಮದ್‌ ಬಳಿಕ ಜವಾಹರ್‌ಲಾಲ್‌ ನೆಹರೂ ವಿಶ್ವವಿದ್ಯಾಲಯದ (JNU) ಮತ್ತೋರ್ವ ವಿದ್ಯಾರ್ಥಿ ಮುಕುಲ್‌ ಜೈನ್‌ (ಗಾಜಿಯಾಬಾದ್‌ ನಿವಾಸಿ) ಕಳೆದ ಸೋಮವಾರದಿಂದ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.

Advertisement

ಮುಕುಲ್‌ ದಿನನಿತ್ಯ ಗಾಜಿಯಾಬಾದ್‌ನಿಂದ ಜೆಎನ್‌ಯು ಗೆ ಪ್ರಯಾಣಿಸುತ್ತಿದ್ದ; ಸೋಮವಾರ ಕಾಲೇಜಿಗೆ ಹೋದವ ಮರಳಿ ಮನೆಗೆ ಬಂದಿಲ್ಲ. ಹಾಗಾಗಿ ಆತನ ಮನೆಯವರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. 

ಮುಕುಲ್‌ ಮನೆಯವರು ಜೆಎನ್‌ಯು ಅಧಿಕಾರಿಗಳಿಗೆ ನಾಪತ್ತೆ ವಿಷಯವನ್ನು ತಿಳಿಸಿ ಅಲ್ಲಿನ ಸಿಸಿಟಿವಿ ಚಿತ್ರಿಕೆಗಳನ್ನು ಪರಿಶೀಲಿಸಿದ್ದಾರೆ.

ಸಿಸಿಟಿವಿ ಚಿತ್ರಿಕೆಯಲ್ಲಿ ಮುಕಲ್‌ ಸೋಮವಾರ ಮಧ್ಯಾಹ್ನ 12.30ರ ಹೊತ್ತಿಗೆ ಜೆಎನ್‌ಯು ಪೂರ್ವ ದ್ವಾರದಿಂದ ಹೊರ ಹೋಗುತ್ತಿರುವುದು ಕಂಡುಬಂದಿದೆ. ಮುಕುಲ್‌ ಹೆತ್ತವರು ಆತ ನಾಪತ್ತೆಯಾಗಿರುವ ಬಗ್ಗೆ ದಿಲ್ಲಿಯ ವಸಂತ ಕುಂಜ್‌ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ. 

2016ರ ಜನವರಿ 15ರಂದು ಜೆಎನ್‌ಯು ಮಹೀ-ಮಾಂಡ್ವಿ ಹಾಸ್ಟೆಲ್‌ನಿಂದ ನಜೀಬ್‌ ನಾಪತ್ತೆಯಾಗಿದ್ದ. ನಾಪತ್ತೆಯಾಗುವ ಮುನ್ನ ಆತನಿಗೆ ಎಬಿವಿಪಿ ಗೆ ಸೇರಿದ ವಿದ್ಯಾರ್ಥಿಗಳೊಂದಿಗೆ ಜಗಳವಾಗಿತ್ತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next