ವಿಜಯಪುರ: ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ನಿಗದಿ ಮಾಡಿದ್ದಕ್ಕಿಂತ ಶೇ. 70 ಚಿಕಿತ್ಸಾ ವೆಚ್ಚದ ರಿಯಾಯ್ತಿ ನೀಡಿದ್ದ ಬಿಎಲ್‌ಡಿಇ ಸಂಸ್ಥೆ ಅಧ್ಯಕ್ಷ ಎಂ.ಬಿ. ಪಾಟೀಲ, ಇದೀಗ ಮತ್ತೂಂದು ಮಾನವೀಯ ಹೆಜ್ಜೆ ಇರಿಸಿದ್ದಾರೆ.
ಬುಧವಾರ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮೃತರ ಕುಟುಂಬ ಸದಸ್ಯರಿಗೆ ಪರಿಹಾರದ ಚೆಕ್ ವಿತರಿಸಿ ಮಾತನಾಡಿದ ಬಿಎಲ್‌ಡಿಇ ಸಂಸ್ಥೆ ಅಧ್ಯಕ್ಷರೂ ಆಗಿರುವ ಮಾಜಿ ಸಚಿವ ಡಾ| ಎಂ.ಬಿ. ಪಾಟೀಲ, ತಮ್ಮ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದ 16 ಸಿಬ್ಬಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಮೃತರ ಕುಟುಂಬಕ್ಕೆ ಆಸರೆಯಾಗಲು ಸಂಸ್ಥೆಯಿಂದ ತಲಾ 1 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಅಲ್ಲದೇ ಮೃತರ ಕುಟುಂಬದ ಒಬ್ಬರಿಗೆ ಅವರ ಶೈಕ್ಷಣಿಕ ಅರ್ಹತೆಗೆ ಸಕ್ಕಂತೆ ಉದ್ಯೋಗ ನೀಡುವ ಭರವಸೆ ನೀಡಿದರು.
ಕೋವಿಡ್ ಮಹಾ ಸಾಂಕ್ರಾಮಿಕ ರೋಗಕ್ಕೆ ಬಿಎಲ್‌ಡಿಇ ಡೀಮ್ಡ್ ವಿಶ್ವ ವಿದ್ಯಾಲಯ ಉಪ ಕುಲಪತಿ ಡಾ| ಎಂ.ಎಸ್. ಬಿರಾದಾರ, ವೈದ್ಯ ಡಾ| ಆರ್.ಎಂ. ಪೋಟೆಕರ, ಟೆಕ್ನಿಷಿಯನಗಳಾದ ರುದ್ರಗೌಡ ಪಾಟೀಲ, ಜಗದೀಶ ಬಡಿಗೇರ, ಅಟೆಂಡರ್‌ಗಳಾದ ಸುರೇಂದ್ರ ಭಾವಿಮನಿ, ಆಡಳಿತ ಕಚೇರಿ ಎಫ್ ಡಿಸಿ ಪ್ರಕಾಶ ಖ್ಯಾಡದ, ಜೆಎಸ್ಸೆಸ್ ಕಾಲೇಜಿನ ಎಸ್‌ಡಿಸಿ ತನುಜಾ ಪಾಟೀಲ, ಎಸ್.ಎಸ್. ಮಾಧ್ಯಮಿಕ “ಎ’ ಶಾಲೆ ಶಿಕ್ಷಕ ಪ್ರಕಾಶ ತೊರವಿ, ತಿಕೋಟಾ ನ್ಯೂ ಆರ್ಟ್ಸ್ ಕಾಲೇಜು ಉಪನ್ಯಾಸಕ ಡಾ| ಎಂ.ಬಿ. ಸಿಂಗೆ ಹಾಗೂ ಎಸ್‌ಡಿಸಿ ಇರ್ಫಾನ್ ಜಮಖಂಡಿ, ಜಮಖಂಡಿ ಪಪೂ ಕಾಲೇಜಿನ ಉಪನ್ಯಾಸಕ ರಮೇಶ ಬಿರಾದಾರ, ಲಚ್ಯಾಣ ಎಸ್.ಎಸ್. ಅಗ್ರಿ ಸ್ಕೂಲ್ ಶಿಕ್ಷಕ ಸಿದ್ದಪ್ಪ ಇಂಗಳೇಶ್ವರ, ಎಂಜಿನಿಯರಿಂಗ್ ಕಾಲೇಜಿನ ಜವಾನ ಶ್ರೀಶೈಲ ನಾವಿ, ನಗರದ ಎಸ್. ಎಸ್.ಎಂ ಪಾಲಿಟೆಕ್ನಿಕ್ ಕಾಲೇಜಿನ ವೆಲ್ಡರ್ ಗೊವಿಂದಪ್ಪ ಹಾದಿಮನಿ ಸೇರಿ ಸಂಸ್ಥೆಯ 16 ಜನರು ನಮ್ಮನ್ನ ಅಗಲಿರುವುದಿ ದುಃಖಕರ ಸಂಗತಿ ಎಂದು ಸಂತಾಪ ವ್ಯಕ್ತಪಡಿಸಿದರು.
ಸಾಂಕ್ರಾಮಿಕ ಮಹಾ ರೋಗಕ್ಕೆ ಬಲಿಯಾದ ಸಂಸ್ಥೆಯ ನೌಕರರ ಕುಟುಂಬಕ್ಕೆ ಕಷ್ಟ ಕಾಲದಲ್ಲಿ ಆರ್ಥಿಕ ನೆರವು ನೀಡುವುದು. ಅವರ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಸಹಯ ಮಾಡುವುದು ಸೇರಿದಂತೆ ಅಗತ್ಯ ಸಹಾಯ ಮಾಡುವುದು ನಮ್ಮ ಹೊಣೆ ಹಾಗೂ ಕರ್ತವ್ಯ ಎಂದರು. ಬಿಎಲ್‌ಡಿಸಿ ಡೀಮ್ಡ್ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ| ಆರ್.ಎಸ್. ಮುಧೋಳ, ಬಿ.ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ| ಅರವಿಂದ ಪಾಟೀಲ, ಆಡಳಿತಾ ಧಿಕಾರಿಗಳಾದ ಡಾ| ರಾಘವೇಂದ್ರ ಕುಲಕರ್ಣಿ, ಕೆ.ಜಿ. ಪೂಜೇರಿ, ಐ.ಎಸ್. ಕಾಳಪ್ಪನವರ, ಮುಖ್ಯ ಹಣಕಾಸು ಅಧಿ ಕಾರಿ ದೇವೇಂದ್ರ ಅಗರವಾಲ, ಡಾ| ಎಂ.ಎಸ್. ಮದಭಾವಿ, ಪ್ರಚಾರಾ ಧಿಕಾರಿ ಡಾ| ಮಹಾಂತೇಶ ಬಿರಾದಾರ ಸೇರಿದಂತೆ ಮೃತರ ಕುಟುಂಬ ವರ್ಗದವರು ಇದ್ದರು.