Advertisement

ಉತ್ತರಾಖಂಡದಲ್ಲಿ ಭಾರೀ ಹಿಮ ಸ್ಪೋಟ : ಹೆಚ್ಚದ ಆತಂಕ

10:08 AM Apr 24, 2021 | Team Udayavani |

ಚಮೋಲಿ (ಉತ್ತರಾಖಂಡ್) : ಉತ್ತರಾಖಂಡ್​ ನಲ್ಲಿ ಮತ್ತೆ ಹಿಮ ಸ್ಪೋಟವಾಗಿದೆ. ಇಲ್ಲಿನ  ಚಮೋಲಿ ಜಿಲ್ಲೆಯಲ್ಲಿ ಈ ಹಿಂದೆ ಹಿಮ ಸ್ಫೋಟವಾಗಿ ಭಾರೀ ಅನಾಹುತ ಉಂಟಾಗಿತ್ತು. ಈ ಘಟನೆಯನ್ನು ಮರೆಯುವ ಮುನ್ನವೇ ಮತ್ತೆ ಇದೇ ಪ್ರದೇಶದ ನೀತಿ ಕಣಿವೆಯಲ್ಲಿ ಹಿಮಬಂಡೆ ಸ್ಫೋಟವಾಗಿದೆ ಎಂದು ಉತ್ತರಾಖಂಡ ಸಿಎಂ ತೀರತ್​ ಸಿಂಗ್ ರಾವತ್​ ಮಾಹಿತಿ ನೀಡಿದ್ದಾರೆ.

Advertisement

ಚಮೋಲಿ ಜಿಲ್ಲೆಯ ಭಾರತ-ಚೀನಾ ಗಡಿ ಭಾಗದ ನೀತಿ ಕಣಿವೆಯ ಸುಮ್ನಾದಲ್ಲಿ ಸದ್ಯ ಹಿಮಸ್ಪೋಟವಾಗಿದ್ದು ಅಲರ್ಟ್​ ಹೊರಡಿಸಿರುವಿದಾಗಿ ಅಲ್ಲದೆ ಜಿಲ್ಲಾಡಳಿತ ಮತ್ತು ಬಿಆರ್​ಓ (Border Roads Organisation) ಜೊತೆ ನಿರಂತರ ಸಂಪರ್ಕದಲ್ಲಿರುವುದಾಗಿ ರಾವತ್​ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಎನ್ ​ಟಿಪಿಸಿ ಹಾಗೂ ಇತರೆ ಯೋಜನೆಗಳ ಕಾಮಗಾರಿಯನ್ನ ರಾತ್ರಿ ನಿಲ್ಲಿಸುವಂತೆ ಹೇಳಲಾಗಿದೆ. ಕೇಂದ್ರ ಗೃಹಸಚಿವ ಅಮಿತ್ ಶಾ, ಹಿಮಬಂಡೆ ಸ್ಫೋಟದ ಬಗ್ಗೆ ಕೂಡಲೇ ಮಾಹಿತಿ ಪಡೆದು ರಾಜ್ಯಕ್ಕೆ ಸಂಪೂರ್ಣ ನೆರವು ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ.

ಈ ಹಿಂದೆ ಅಂದ್ರೆ ಕಳೆದ ಫೆಬ್ರವರಿಯಲ್ಲಿ ಚಮೋಲಿ ಜಿಲ್ಲೆಯ ಜೋಷಿಮಠದ ಬಳಿ ಹಿಮನದಿ ಸ್ಫೋಟವಾಗಿದ್ದು, ಭಾರೀ ಪ್ರವಾಹ ಉಂಟಾಗಿತ್ತು. ಸುಮಾರು 50 ಜನ ಸಾವನ್ನಪ್ಪಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next