Advertisement

ಮುಂಬಯಿಗೆ ಇನ್ನೊಂದು ವಿಮಾನ

12:01 AM Jan 17, 2020 | mahesh |

ಮಂಗಳೂರು: ಮಂಗಳೂರು – ಮುಂಬಯಿ ನಡುವೆ ನೇರ ಸಂಪರ್ಕ ಕಲ್ಪಿಸುವ ಸ್ಪೈಸ್‌ ಜೆಟ್‌ನ ಎರಡನೇ ವಿಮಾನ ಸೇವೆಯು ಫೆ. 10ರಿಂದ ಮಂಗಳೂರು ವಿಮಾನ ನಿಲ್ದಾಣ ದಿಂದ ಆರಂಭವಾಗಲಿದೆ.ಬೆಳಗ್ಗೆ 8.55ಕ್ಕೆ ಮುಂಬಯಿ ಯಿಂದ ಹೊರಡುವ ಈ ವಿಮಾನ 10.35ಕ್ಕೆ ಮಂಗಳೂರಿಗೆ ಬರಲಿದೆ. ಪೂರ್ವಾಹ್ನ 11.05ಕ್ಕೆ ಮಂಗಳೂರಿ ನಿಂದ ಮತ್ತೆ ಹೊರಟು 12.40ಕ್ಕೆ ಮುಂಬಯಿ ತಲುಪಲಿದೆ. ಸ್ಪೈಸ್‌ ಜೆಟ್‌ನ ಇನ್ನೊಂದು ವಿಮಾನ ಈಗಾಗಲೇ ಮಂಗಳೂರು- ಮುಂಬಯಿ ಮಧ್ಯೆ ಸಂಚರಿಸುತ್ತಿದೆ.

Advertisement

ಮಂಗಳೂರಿನಿಂದ ಮುಂಬಯಿಗೆ ಇಂಡಿಗೋದ ಎರಡು ವಿಮಾನಗಳು, ಏರ್‌ ಇಂಡಿಯಾದ ಒಂದು ಹಾಗೂ ಸ್ಪೈಸ್‌ಜೆಟ್‌ನ ಒಂದು ವಿಮಾನ ಸಂಚರಿಸುತ್ತಿದ್ದು, ಬೆಳಗ್ಗಿನ ಸಮಯ ದಲ್ಲಿ ಇನ್ನೊಂದು ವಿಮಾನ ಸೇವೆ ಬೇಕು ಎಂಬ ಬೇಡಿಕೆ ಪ್ರಯಾಣಿಕರಿಂದ ವ್ಯಕ್ತವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next