ಮಂಗಳೂರು: ಮಂಗಳೂರು ಮತ್ತು ಬೆಂಗಳೂರು ನಡುವೆ ಇನ್ನೊಂದು ವಿಮಾನಯಾನ ಸೇವೆಯನ್ನು “ಇಂಡಿಗೋ’ ಎಪ್ರಿಲ್‌ನಿಂದ ಆರಂಭಿಸಲಿದೆ.
ಭಾರತದ ಆನ್-ಟೈಮ್ ಪರ್ಫಾರ್ಮರ್ ಇಂಡಿಗೊ, ತನ್ನ ಗ್ರಾಹಕ ಅನುಭವವನ್ನು ತನ್ನ ಜಾಲಕ್ಕೆ 14 ಹೊಸ ವಿಮಾನಗಳನ್ನು ಸೇರ್ಪಡೆ ಮಾಡುತ್ತಿದ್ದು, ಅದರಲ್ಲಿ ಮಂಗಳೂರು- ಬೆಂಗಳೂರು ಮಾರ್ಗವೂ ಸೇರಿದೆ.
ಹೊಸ ವಿಮಾನ ಬೆಳಗ್ಗೆ 7.30ಕ್ಕೆ ಬೆಂಗಳೂರಿನಿಂದ ಹೊರಟು 8.40ಕ್ಕೆ ಮಂಗಳೂರು ತಲುಪಲಿದೆ. ಬಳಿಕ 9.30ಕ್ಕೆ ಮಂಗಳೂರಿನಿಂದ ಹೊರಟು 10.30ಕ್ಕೆ ಬೆಂಗಳೂರು ತಲುಪಲಿದೆ.
ಇಂಡಿಗೋ ಚೆನ್ನೈ-ರಾ¿åಪುರ, ಹೈದರಾಬಾದ್-ಗೋರಖ್‌ಪುರ ಮತ್ತು ಕೋಲ್ಕತಾ-ಗೋರಖ್‌ಪುರಗಳ ನಡುವೆ ತನ್ನ ಮೊದಲ ವಿಮಾನವನ್ನು ಆರಂಭಿಸಲಿದೆ. ಪ್ರಸ್ತುತ ಚೆನ್ನೈ-ತಿರುವನಂತಪುರ, ಬೆಂಗಳೂರು-ಉದಯಪುರ ಮತ್ತು ಬೆಂಗಳೂರು-ಚೆನ್ನೈ ಮಾರ್ಗಗಳಿಗೆ ಹೆಚ್ಚು ವಿಮಾನಗಳ ಸೇರ್ಪಡೆ ಮಾಡಲಿದೆ. ಎಲ್ಲ ಹೊಸ ಸೇವೆಗಳು ಎಪ್ರಿಲ್‌ನಿಂದ ಪ್ರಾರಂಭಗೊಳ್ಳುತ್ತವೆ.
ತಮ್ಮ ಪ್ರಯಾಣವನ್ನು ಯೋಜಿಸಲು ಬಯಸುವ ಗ್ರಾಹಕರು ಅಧಿಕೃತ ವೆಬ್‌ಸೈಟ್
www.goindigo.in ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು ಪ್ರಕಟನೆ ತಿಳಿಸಿದೆ.