Advertisement

ಕಾಡಾನೆ ದಾಳಿಗೆ ಮತ್ತೂಬ್ಬ ರೈತ ಬಲಿ

07:55 AM Dec 18, 2017 | Team Udayavani |

ಚಿತ್ರದುರ್ಗ/ದಾವಣಗೆರೆ: ದಾಂಧಲೆ ನಡೆಸಿ 15ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ್ದ ಆನೆ ಶುಕ್ರವಾರ ಸಂಜೆ ಮತ್ತೂಬ್ಬ
ರೈತನನ್ನು ಬಲಿ ಪಡೆದಿದೆ. ಹೊಳಲ್ಕೆರೆ ತಾಲೂಕಿನ ತಾಳಿಕಟ್ಟೆಯ ಗಾಳೆಪ್ಪ (45) ದಾಳಿಗೆ ಬಲಿಯಾದವ. ಶುಕ್ರವಾರ ಕೂಲಿ ಕೆಲಸಕ್ಕೆ ಹೋಗಿದ್ದ ಇವರು ರಾತ್ರಿ ಮನೆಗೆ ವಾಪಸ್‌ ಬಂದಿರಲಿಲ್ಲ. ಗಾಬರಿಗೊಂಡ ಮನೆಯವರು ಗಾಳೆಪ್ಪ ಕೆಲಸಕ್ಕೆ ತೆರಳಿದ್ದ ಮೆಕ್ಕೆಜೋಳದ ಜಮೀನಿನ ಸುತ್ತಮುತ್ತ ಶನಿವಾರ ಬೆಳಗ್ಗೆ ಹುಡುಕಾಟ ನಡೆಸಿದಾಗ ಶವ ಪತ್ತೆಯಾಗಿದೆ. ಕಾಡಾನೆ ಕಾಲಿನಿಂದ ತುಳಿದು ಕೊಂದಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗ್ರಾಮಸ್ಥರು ದೌಡಾಯಿಸಿದರು.

Advertisement

ಶುಕ್ರವಾರ ದಾವಣಗೆರೆ ಜಿಲ್ಲೆ ಚನ್ನಗಿರಿಯ ಬೆಟ್ಟಕಡೂರಿನ ಮೂಲಕ ಹೊಳಲ್ಕೆರೆ ತಾಲೂಕಿನ ತಾಳಿಕಟ್ಟೆ ಗ್ರಾಮದ ಕಡೆ ಬಂದ
ಆನೆ ಹೊಲದಲ್ಲಿ ಓಡಾಡಿ ಬೆಳೆ ನಾಶಪಡಿಸಿದ್ದಲ್ಲದೆ, ಅದರ ಉಪಟಳದಿಂದ ಏಳು ಮಂದಿ ಗಂಭೀರ ಗಾಯಗೊಂಡು ಆಸ್ಪತ್ರೆ
ಸೇರಿದ್ದರು. ಮತ್ತೆ ಶುಕ್ರವಾರ ಸಂಜೆ ಮೆಕ್ಕೆಜೋಳದ ಹೊಲದಲ್ಲಿ ಪ್ರತ್ಯಕ್ಷವಾಗಿ ರೈತನನ್ನು ಕೊಂದು ಶವವನ್ನು ಪೊದೆಯಲ್ಲಿ ಎಸೆದು
ಹೋಗಿದೆ. ಹೀಗಾಗಿ ಶನಿವಾರ ಬೆಳಗ್ಗೆ ರೈತನ ಶವ ಪತ್ತೆಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಆಪರೇಷನ್‌ ಉಬ್ರಾಣಿ: ಈ ಕುರಿತು ಪ್ರತಿಕ್ರಿಯಿಸಿರುವ ಭದ್ರಾವತಿ ಡಿಎಫ್‌ಓ ಟಿ.ಬಾಲಚಂದ್ರ, ಆನೆಗಳನ್ನು ಸೆರೆಹಿಡಿದು,ಅರಣ್ಯ ಪ್ರದೇಶಕ್ಕೆ ಸಾಗಿಸಲು ಭಾನುವಾರ ಆಪರೇಷನ್‌ ಉಬ್ರಾಣಿ ಹೆಸರಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗುವುದು. 130 ಜನ ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ತಂಡ, 25 ಮಾವುತರು ಸೇರಿ ಕಾರ್ಯಾಚರಣೆ ನಡೆಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next