Advertisement

ಬಾಲಕನೊಂದಿಗೆ ಬಲವಂತದ ಗುದ ಸಂಭೋಗ: ಯುಪಿ ಕಾನ್‌ಸ್ಟೆಬಲ್‌ ಸಸ್ಪೆಂಡ್‌

12:04 PM Oct 03, 2018 | udayavani editorial |

ಲಕ್ನೋ : ಉತ್ತರ ಪ್ರದೇಶ ಪೊಲೀಸರ ಪ್ರತಿಷ್ಠೆ, ಘನತೆ, ಗೌರವ ಮಣ್ಣುಪಾಲಾಗಿರುವ ಇನ್ನೊಂದು ಘಟನೆ ಇದೀಗ ಬಯಲಾಗಿದೆ. ಉತ್ತರ ಪ್ರದೇಶ ಪೊಲೀಸ್‌ ಕಾನ್‌ಸ್ಟೆಬಲ್‌ ಒಬ್ಟಾತ ಪೊಲೀಸ್‌ ಠಾಣೆಯೊಳಗೆ ಕಳೆದ ಅನೇಕ ದಿನಗಳಿಂದ ಅಪ್ರಾಪ್ತ ವಯಸ್ಸಿನ ಬಾಲಕನೊಂದಿಗೆ ಬಲವಂತದಿಂದ ಗುದ ಸಂಭೋಗ ನಡೆಸುತ್ತಿದ್ದ  ಅತ್ಯಮಾನಷ ಮತ್ತು ನಿರ್ಲಜ್ಜ ಪ್ರಕರಣ ಬೆಳಕಿಗೆ ಬಂದಿದೆ. 

Advertisement

ಈ ಕಾರಣಕ್ಕಾಗಿ ಹತ್ರಾದಲ್ಲಿ ಯುಪಿ 100 ಸೇವೆಗೆ ನಿಯೋಜಿಸಲ್ಪಟ್ಟಿದ್ದ 45ರ ಹರೆಯದ ಆರೋಪಿ, ಪೊಲೀಸ್‌ ಕಾನ್‌ಸ್ಟೆಬಲ್‌ ಸಂಜೇಶ್‌ ಯಾದವ್‌ ನನ್ನು ಅಮಾನತು ಮಾಡಲಾಗಿದೆ. 

ಕೆಲ ದಿನಗಳ ಹಿಂದಷ್ಟೆ ಆ್ಯಪಲ್‌ ಕಂಪೆನಿಯ ಸೇಲ್ಸ್‌ ಮ್ಯಾನೇಜರ್‌ ಓರ್ವರನ್ನು ಅನಗತ್ಯವಾಗಿ ಗುಂಡಿಕ್ಕಿ ಕೊಂದಿದ್ದ  ಉತ್ತರ ಪ್ರದೇಶ ಪೊಲೀಸರು ದೇಶಾದ್ಯಂತ ಟೀಕೆ, ಖಂಡನೆಗೆ ಗುರಿಯಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next