Advertisement

ಜಿಲ್ಲೆಯಲ್ಲಿ ಕೋವಿಡ್‌ 19ಗೆ ಮತ್ತೊಂದು ಬಲಿ?

07:20 AM Jun 28, 2020 | Lakshmi GovindaRaj |

ಮಾಗಡಿ: ಪಟ್ಟಣದ ಗಾಣಿಗರ ಬೀದಿ ಮುಸ್ಲಿಮ್‌ ಮಹಿಳೆ (40) ಶನಿವಾರ ಕೋವಿಡ್‌ 19 ಸೋಂಕಿಗೆ ಬಲಿಯಾಗಿದ್ದಾರೆ. ಈಗಾಗಲೇ ಮಾಗಡಿಯಲ್ಲಿ ಒಟ್ಟು 4 ಮಂದಿ ಕೋವಿಡ್‌ 19ಗೆ ಬಲಿಯಾಗಿದ್ದು, ಮತ್ತಿಬ್ಬರ ಪಾಸಿಟಿವ್‌ ಪ್ರಕರಣ ಪತ್ತೆಯಾಗಿದ್ದು, ಜಿಲ್ಲಾ ಕೋವಿಡ್‌-19 ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ತಾಲೂಕು ಆಡಳಿತ ಬುಲೆಟಿನ್‌ನಲ್ಲಿ ಪ್ರಕಟಣೆಯಾಗಿಲ್ಲ.

Advertisement

ಪಟ್ಟಣದಲ್ಲಿ ಲಾಕ್‌ಡೌನ್‌ ಮುಂದುವರಿದಿದ್ದು, ಜನರು ಸ್ವಯಂ ಪ್ರೇರಿತರಾಗಿ ಲಾಕ್‌ಡೌನ್‌ಗೆ  ಸಹಕರಿಸುತ್ತಿದ್ದಾರೆ. ಆದರೂ ಕೋವಿಡ್‌ 19 ಶಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಿಂದ ಜನರು ಭೀತಿ ಒಳಗಾಗಿದ್ದಾರೆ. ಪಟ್ಟಣದ ತಿರು ಮಲೆ ಚೌಡೇಶ್ವರಿ ಬೀದಿ, ವೆಂಕಟಪ್ಪಗಲ್ಲಿ, ರಾಜ್‌ಕುಮಾರ್‌ ರಸ್ತೆ ಇತರೆಡೆ  ಈಗಾಗಲೇ ಪುರಸಭೆ ಅಧಿಕಾರಿಗಳು ಸಿಬ್ಬಂದಿ ಸೀಲ್‌ ಡೌನ್‌ ಮಾಡಿ, ಜೊತೆಗೆ ಕೋವಿಡ್‌ 19 ಗ್ರಾಮೀಣ ಪ್ರದೇಶಕ್ಕೂ ವ್ಯಾಪಿ ಸಿದ್ದು, ಗುಡೇಮಾರನಹಳ್ಳಿ, ಗೊರೂರು ಕುದೂರು ಗ್ರಾಮಗಳು ಸೀಲ್‌ಡೌನ್‌ ಆಗಿದೆ.

ಪಟ್ಟಣದ ವೆಂಕಟಪ್ಪಗಲ್ಲಿ, ರಾಜ್‌ಕುಮಾರ್‌ ರಸ್ತೆ, ಗಾಣಿಗರ ಬೀದಿ ಹಾಗೂ ಹಾಲಶೆಟ್ಟಿ ಹಳ್ಳಿ ಗ್ರಾಮದ ವ್ಯಕ್ತಿ ಕೋವಿಡ್‌ 19ಗೆ ಬಲಿಯಾಗಿದ್ದ ಹಿನ್ನೆಲೆಯಲ್ಲಿ ಪ್ರಾಥಮಿಕ ಸಂಪರ್ಕದಲ್ಲಿರುವ ಸುಮಾರು 70 ಮಂದಿಯನ್ನು ಈಗಾಗಲೇ ಹುಲಿಕಟ್ಟೆಯಲ್ಲಿ ಕ್ವಾರಂಟೈನ್‌  ಮಾಡಲಾಗಿದೆ. ಕ್ವಾರಂಟೈನ್‌ನಲ್ಲಿರುವವರ ಗಂಟಲು ದ್ರವ ಸಂಗ್ರಹದಲ್ಲಿ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ಸಮರೋಪಾದಿಯಲ್ಲಿ ಕಾರ್ಯೋನ್ಮುಖರಾಗಿದ್ದಾರೆ.

ಆರೋಗ್ಯ ಸಹಾಯಕರಿಗೆ ಬೇಕಿದೆ ಸಹಕಾರ: ಕೋವಿಡ್‌ 19 ವಿರುದ್ಧ ಹೋರಾಡುತ್ತಿ ರುವ ಆರೋಗ್ಯ ಸಹಾಯಕರಿಗೆ ಎಲ್ಲರೂ ಸಹಕಾರ ನೀಡಬೇಕು. ಜನರ ಆರೋಗ್ಯದ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿರುವ ಅವ ರೊಂದಿಗೆ ಸೌಜನ್ಯದಿಂದ ವರ್ತಿಸಿ ಎಲ್ಲರ ಸಹಕಾರವಿದ್ದರೆ ಮಾತ್ರ ಕೋವಿಡ್‌ 19 ನಿಯಂತ್ರಿ ಸಲು ಸಾಧ್ಯ. ಜಿಲ್ಲಾಡಳಿತ ಕೋವಿಡ್‌ 19 ಸೋಂಕಿತರ ಆರೋಗ್ಯ ಸುಧಾರಣೆ ಹಾಗೂ ಅವರಿಗೆ ಬೇಕಾದ ಸೌಕರ್ಯಗಳನ್ನು ಒದಗಿಸಲು ತಾಲೂಕು ಆಡಳಿತಕ್ಕೆ  ಮಾರ್ಗ ದರ್ಶನ ನೀಡಬೇಕೆಂದು ಹಾಗು ವಿವಿಧ ಸಂಘಟನೆಗಳು ನಾಗರಿಕರು ಒತ್ತಾಯಿಸಿದ್ದಾರೆ.

ಜನರಲ್ಲಿ ಹೆಚ್ಚಿದ ಆತಂಕ: ತಾಲೂಕಿನಲ್ಲಿ ದಿನೆ ದಿನೇ ಹೆಚ್ಚುತ್ತಿರುವ ಪ್ರಕರಣಗಳಿಂದಾಗಿ ತಾಲೂಕಿನ ಜನರಲ್ಲಿ ಆತಂಕ ಹೆಚ್ಚಾಗಿದೆ. ಹೀಗಾಗಿ ಜನರು ತಾವಾಗಿಯೇ ಹೆಚ್ಚು ಸುರ ಕ್ಷತೆ ಕ್ರಮ ಹಾಗೂ ಜಾಗೃತರಾಗುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next