Advertisement

ಮತ್ತೂಂದು ಗಡುವು ಮೀರುತ್ತಿದೆ ಪಂಪ್‌ವೆಲ್‌ ಮೇಲ್ಸೇತುವೆ

11:15 PM May 15, 2019 | Team Udayavani |

ಮಹಾನಗರ: ಈ ಬಾರಿಯಾದರೂ ಗಡುವು ಮೀರದೆ ಮೇ ಅಂತ್ಯದೊಳಗೆ ಪಂಪ್‌ವೆಲ್‌ ಮೇಲ್ಸೇ ತುವೆ ಪೂರ್ಣಗೊಂಡು ಸಾರ್ವಜನಿಕರ ಸುಗಮ ಸಂಚಾರಕ್ಕೆ ತೆರವಾಗುತ್ತದೆ ಎಂದು ಅಂದುಕೊಂಡಿದ್ದ ನಗರದ ಮಂದಿಗೆ ನಿರಾಸೆ ಕಾದಿದೆ!

Advertisement

ಪಂಪ್‌ವೆಲ್‌ನಲ್ಲಿ ಸದ್ಯ ನಡೆಯು ತ್ತಿರುವ ಮೇಲ್ಸೇತುವೆ ಕಾಮಗಾರಿ ನೋಡಿದರೆ ಇನ್ನೆರಡು ತಿಂಗಳಾದರೂ ಪೂರ್ಣಗೊಳ್ಳುವುದು ಅನುಮಾನ. ಇನ್ನು ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭಗೊಳ್ಳಲಿದ್ದು, ಆದ್ದರಿಂದ ಬಳಿಕವೇ ಕಾಮಗಾರಿ ಪೂರ್ಣಗೊಳ್ಳುವ ಲಕ್ಷಣ ಕಂಡುಬರುತ್ತಿದೆ.

ಸಾಕಷ್ಟು ಟೀಕೆ, ಅಪಹಾಸ್ಯಕ್ಕೆ ಗುರಿಯಾ ಗಿರುವ ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿ ಗಡುವಿನೊಳಗೆ ಪೂರ್ಣಗೊ ಳಿಸದಿದ್ದರೆ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್‌ ಕೇಸು ಹಾಕುವುದಾಗಿ ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಈ ಹಿಂದೆ ನಡೆದ ಅಧಿಕಾರಿಗಳ ಸಭೆಯಲ್ಲಿ ಗುಡುಗಿದ್ದರು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಏನೇ ಕಸರತ್ತು ನಡೆದರೂ, ಗಡುವಿನೊಳಗೆ ಕಾಮಗಾರಿ ಪೂರ್ಣವಾಗದು.

ಬೆರಳೆಣಿಕೆಯಷ್ಟು ಕಾರ್ಮಿಕರು
ಪಂಪ್‌ವೆಲ್‌ ಮೇಲ್ಸೇತುವೆಯು ಒಟ್ಟು 600 ಮೀಟರ್‌ ಉದ್ದ ಮತ್ತು 20 ಮೀಟರ್‌ ವಿಸ್ತೀರ್ಣ ಹೊಂದಿರಲಿದ್ದು, ಪಂಪ್‌ವೆಲ್‌ನಲ್ಲಿ ಸದ್ಯ ಕೇವಲ ಬೆರಳೆಣಿಕೆಯಷ್ಟು ಮಂದಿ ಕಾರ್ಮಿಕರು ಕಾಮಗಾರಿಯಲ್ಲಿ ನಿರತರಾಗಿದ್ದಾರೆ. ಪಂಪ್‌ವೆಲ್‌ ಮೇಲ್ಸೇತುವೆಯ ಗರ್ಡರ್‌ನ ಮೇಲ್ಭಾಗದ 75 ಮೀಟರ್‌ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಫ್ಲೆ  ç ಓವರ್‌ನ ಎಕ್ಕೂರು ಕಡೆಯಿಂದ ಪಂಪ್‌ವೆಲ್‌ವರೆಗಿನ ಆರ್‌ಇ ವಾಲ್‌ ಜೋಡಣೆ ಕಾರ್ಯ ಎರಡು ತಿಂಗಳ ಹಿಂದೇಯೇ ಆರಂಭವಾಗಿತ್ತು.

ವಾಲ್‌ಗ‌ಳ ಜೋಡಣೆ
ಮೇಲ್ಸೇತುವೆ ಸಮಾನಾಂತರ ರಸ್ತೆಯ ಎರಡೂ ಕಡೆ ಆರ್‌ಇ ವಾಲ್‌ ಜೋಡಣೆ ಪ್ರಕ್ರಿಯೆ ಸಾಗುತ್ತಿದ್ದು, ಒಂದು ಕ್ರೈನ್‌ ಮೂಲಕ ವಾಲ್‌ಗ‌ಳನ್ನು ಜೋಡಣೆ ಮಾಡಲಾಗುತ್ತಿದೆ. ಎಕ್ಕೂರು ಕಡೆಯಿಂದ ಫ್ಲೆ çಓವರ್‌ಗೆ ಸಮಾನಾಂತರವಾಗಿ ಮಣ್ಣು ಹಾಕುವ ಕೆಲಸ ನಡೆಯಬೇಕಿದ್ದು, ಕಾಮಗಾರಿ ಇನ್ನೂ ಬಾಕಿ ಇದೆ. ಪಂಪ್‌ವೆಲ್‌ನಿಂದ ಕಂಕನಾಡಿಗೆ ತೆರಳುವ ರಸ್ತೆ ಬಳಿ ಸಣ್ಣ ಕಾಲುವೆಯೊಂದಿದ್ದು, ಇದರ ಕಾಮಗಾರಿ ಪ್ರಗತಿಯಲ್ಲಿದೆ.

Advertisement

ನವಯುಗ ಸಂಸ್ಥೆಗೆ ಆ್ಯಕ್ಸಿಸ್‌ ಬ್ಯಾಂಕ್‌ ನಿಂದ ಕಂತುಗಳ ಮೂಲಕ ಹಣ ಬಿಡುಗಡೆಯಾಗಲಿದೆ. ಒಟ್ಟಾರೆಯಾಗಿ 55 ಕೋಟಿ ರೂ. ಸಾಲ ನೀಡುವುದಾಗಿ ಬ್ಯಾಂಕ್‌ ಹೇಳಿದ್ದರೂ ಒಂದೇ ಕಂತಿನಲ್ಲಿ ಹಣ ಬಿಡುಗಡೆಗೊಂಡಿಲ್ಲ. ಕಂತು ಪ್ರಕಾರ ಹಣ ಬಿಡುಗಡೆಯಾದರೆ, ಕಾಮ ಗಾರಿಯ ವೇಗ ಕಡಿಮೆಯಾಗುತ್ತಿದೆ.

ಕಾಮಗಾರಿ ಪ್ರಾರಂಭವಾಗಿ ಎಂಟು ವರ್ಷ
ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿಗೆ 2010ರಲ್ಲಿ ಚಾಲನೆ ನೀಡಲಾಗಿತ್ತು. ಮೊದಲ ಆರು ವರ್ಷದಲ್ಲಿ ಕುಂಠುತ್ತಾ ಸಾಗಿದ ಕಾಮಗಾರಿಗೆ ಮೂರು ವರ್ಷಗಳ ಹಿಂದೆ ವೇಗ ದೊರೆಯಿತು. 2018ರ ಮಳೆಗಾಲದಲ್ಲಿ ಕಾಮಗಾರಿ ಮತ್ತೆ ಆಮೆಗತಿಗೆ ತಿರುಗಿತು. ಕಾಮಗಾರಿ ಪೂರ್ಣಗೊಳ್ಳಲು ಸಂಸದರು ಈಗಾಗಲೇ ಅನೇಕ ಗಡುವು ನೀಡಿದ್ದರೂ ಇನ್ನೂ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next