Advertisement

ಉಡುಪಿಯಲ್ಲಿ ಮತ್ತೊಂದು ಕೋವಿಡ್ ಪ್ರಕರಣ: ರಾಜ್ಯದಲ್ಲಿಂದು 143 ಮಂದಿ ಸೋಂಕಿತರು

05:58 PM May 21, 2020 | keerthan |

ಉಡುಪಿ: ಕೋವಿಡ್-19 ಸೋಂಕು ಇಂದು ಉಡುಪಿಯಲ್ಲಿ ಮತ್ತೋರ್ವನ ದೇಹ ಹೊಕ್ಕಿರುವುದು ದೃಢವಾಗಿದೆ. ಅಂತಾರಾಷ್ಟ್ರೀಯ ಪ್ರಯಾಣದ ಹಿನ್ನಲೆಯುಳ್ಳ ವ್ಯಕ್ತಿಗೆ ಕೋವಿಡ್-19 ಸೋಂಕು ದೃಢವಾಗಿದೆ. ರಾಜ್ಯದಲ್ಲಿ ಇಂದು ಒಟ್ಟು 143 ಜನರಿಗೆ ಕೋವಿಡ್-19 ಸೋಂಕು ತಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ವರದಿಯಲ್ಲಿ ಉಲ್ಲೇಖಿಸಿದೆ.

Advertisement

ಇಂದು ಮಧ್ಯಾಹ್ನದ ವರದಿಯಲ್ಲಿ 116 ಜನರಿಗೆ ಕೋವಿಡ್-19 ಸೋಂಕು ಇರುವ ಬಗ್ಗೆ ವರದಿಯಾಗಿತ್ತು. ನಂತರ ಮಂಡ್ಯದಲ್ಲಿ 18 ಪ್ರಕರಣ,  ರಾಯಚೂರಿನಲ್ಲಿ ಐದು, ಕೋಲಾರದಲ್ಲಿ ಎರಡು, ಬೆಂಗಳೂರು ನಗರ ಮತ್ತು ಉಡುಪಿಯಲ್ಲಿ ತಲಾ ಒಂದು ಪ್ರಕರಣ ದೃಢವಾಗಿದೆ.

27 ಹೊಸ ಪ್ರಕರಣಗಳಲ್ಲಿ 22 ಪ್ರಕರಣಗಳು ಮಹಾರಾಷ್ಟ್ರದಿಂದ ಬಂದ ಪ್ರಯಾಣಿಕರಾಗಿದ್ದಾರೆ. ಕೋಲಾರದ ಓರ್ವ ತಮಿಳುನಾಡಿನಿಂದ ಬಂದಿದ್ದರೆ, ಮೂವರಿಗೆ ಸೋಂಕಿತ ಸಂಪರ್ಕದಿಂದ ಸೋಂಕು ತಾಗಿದೆ. ಉಡುಪಿಯ ವ್ಯಕ್ತಿ ಯುಎಇನಿಂದ ಬಂದವರಾಗಿದ್ದಾರೆ.

ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 1605ಕ್ಕೆ ಎರಿಕೆಯಾಗಿದೆ. ಇದರಲ್ಲಿ 571 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 41 ಮಂದಿ ಸೋಂಕಿನ ಕಾರಣದಿಂದ ಮೃತಪಟ್ಟಿದ್ದು, ಓರ್ವ ಸೋಂಕಿತ ಕೋವಿಡ್  ಅಲ್ಲದ ಕಾರಣದಿಂದ ಮರಣ ಹೊಂದಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next