ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು,ಸೋಂಕಿತರ ಆರೈಕೆಗಾಗಿ ಆಯಾ ತಾಲೂಕು ಕೇಂದ್ರದಲ್ಲಿಯೇ ಕೋವಿಡ್ ಚಿಕಿತ್ಸೆಗೇ ಮೀಸಲಾದ ಆರೋಗ್ಯ ಕೇಂದ್ರಗಳನ್ನು (ಡೆಡಿ ಕೇಟೆಡ್ ಕೋವಿಡ್ ಹೆಲ್ತ್ ಸೆಂಟರ್) ಗಳನ್ನು ತೆರೆಯಲಾರಂಭಿಸಿದೆ.
ಮಂಗಳವಾರದಿಂದ ಗುಂಡ್ಲುಪೇಟೆ ತಾಲೂಕು ಕೇಂದ್ರದಲ್ಲಿ ನೂತನ ಕೇಂದ್ರ ಕಾರ್ಯಾರಂಭ ಮಾಡಲಾಗಿದೆ. ಜಿಲ್ಲಾ ಕೇಂದ್ರದಲ್ಲಿರುವ ಕೋವಿಡ್ ಆಸ್ಪತ್ರೆ ಮೇಲಿನ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಆಯಾ ಭಾಗಗಳಲ್ಲೇ ಕೋವಿಡ್ ಕೇರ್ ಸೌಲಭ್ಯ ಒದಗಿಸಲು ಜಿಲ್ಲಾಡಳಿತ ಪ್ರಕ್ರಿಯೆ ಆರಂಭಿಸಿದೆ. ಎರಡುವಾರಗಳ ಹಿಂದೆ ಸಂತೆಮರ ಹಳ್ಳಿ ಹೋಬಳಿ ಕೇಂದ್ರದಲ್ಲಿ ಕೋವಿಡ್ ಆರೋಗ್ಯ ಕೇಂದ್ರ ಆರಂಭಿಸಲಾಗಿತ್ತು. ಈಗ ಗುಂಡ್ಲುಪೇಟೆಯ ತಾಲೂಕು ಕೇಂದ್ರದಲ್ಲೇ 50 ಹಾಸಿಗೆಗಳ ಸಾಮರ್ಥ್ಯದ ಕೋವಿಡ್ ಕೇಂದ್ರ ತೆರೆಯಲಾಗಿದೆ.
5 ಐಸಿಯು: ಕೋವಿಡ್ ಸೋಂಕಿತರಾಗಿದ್ದುಗಂಭೀರ ಲಕ್ಷಣಗಳು ಇಲ್ಲದವರಿಗಾಗಿ ತಾಲೂಕು ಕೇಂದ್ರದಲ್ಲಿರುವ ಕೋವಿಡ್‌ಸೆಂಟರ್‌ನಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತದೆ. ಕೇಂದ್ರದಲ್ಲಿ 5 ತೀವ್ರ ನಿಗಾ ಹಾಸಿಗೆಗಳು (ಐಸಿಯು) ಸಹ ಇದ್ದು ಸೋಂಕಿತರಿಗೆ ಅಗತ್ಯ ಆರೈಕೆ ಮಾಡಲಾಗುತ್ತದೆ. ಗುಂಡ್ಲುಪೇಟೆ ತಾಲೂಕು ಭಾಗದ ಸೋಂಕಿತರಿಗಾಗಿ ಇಲ್ಲಿಯೇ ಆರೈಕೆ ಮಾಡುವ ಉದ್ದೇಶದೊಂದಿಗೆ ಕೇಂದ್ರವು ಕಾರ್ಯ ನಿರ್ವಹಿಸಲಿದ್ದು, ಹೋಂ ಐಸೊಲೇಷನ್ ಬಯಸುವವರಿಗೂ ನಿಯಮಾನುಸಾರ ಪರಿಶೀಲಿಸಿ ಅನುಮತಿ ಹಾಗೂ ನಿಗಾ ವಹಿಸಲು ಕೈಗೊಳ್ಳುವ ಪ್ರಕ್ರಿಯೆಯನ್ನು ಇಲ್ಲಿಯೇ ನಡೆಸಲಾಗುತ್ತದೆ.
ಆಯಾ ಭಾಗದಲ್ಲೇ ಸೋಂಕಿತರಿಗೆ ಆರೈಕೆ ಮಾಡುವ ಸಲುವಾಗಿ ತಾಲೂಕುಕೇಂದ್ರದಲ್ಲೇ ಕೋವಿಡ್‌ಗೆ ಮೀಸಲಾದ ಆರೋಗ್ಯ ಕೇಂದ್ರಆರಂಭಿಸಲಾಗಿದೆ. ರೋಗದ ಸೌಮ್ಯ ಲಕ್ಷಣ ಹೊಂದಿರುವವರಿಗೆ ಪ್ರಸ್ತುತ ತಾಲೂಕು ಕೋವಿಡ್ ಕೇಂದ್ರದಲ್ಲೇ ಆರೈಕೆ ಮಾಡಲಾಗುತ್ತದೆ. ತೀವ್ರ ತರನಾದ ಲಕ್ಷಣಗಳು ಕಾಣಿಸಿಕೊಂಡಲ್ಲಿ ವೈದ್ಯಕೀಯ ತಜ್ಞರ ಸಮಿತಿ ಸಲಹೆ ಪಡೆದು ಕೂಡಲೇ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿ ಕೊಡುವ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ತಿಳಿಸಿದ್ದಾರೆ.
ಬೇಸರ ಕಳೆಯಲು ಟೀವಿ, ಗ್ರಂಥಾಲಯ : ಕೋವಿಡ್‌ಕೇಂದ್ರದಲ್ಲಿ ಬೇಸರಕಳೆಯಲು ಈಗಾಗಲೇ ಟಿ.ವಿ. ಅಳವಡಿಸಲಾಗಿದೆ. ಓದುವ ಹವ್ಯಾಸ ಇರುವವರಿಗೆ ಸದಭಿರುಚಿಯ ಪುಸ್ತಕಗಳನ್ನು ಒಳ ಗೊಂಡ ಗ್ರಂಥಾಲಯ ಆರಂಭಿಸುವ ಉದ್ದೇಶ ಹೊಂದಲಾಗಿದೆ.ಕೋವಿಡ್ ಕೇಂದ್ರಕ್ಕಾಗಿಯೇ ಪ್ರತ್ಯೇಕ ಆ್ಯಂಬುಲೆನ್ಸ್ ಸೌಲಭ್ಯ ಸಹ ಒದಗಿಸಲಾಗಿದೆ. ಕೋವಿಡ್‌ಕೇಂದ್ರದಲ್ಲಿ ದಾಖಲಾಗುವವರಿಗೆ ಉತ್ತಮ ಊಟ ಉಪಾಹಾರ ನೀಡುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಸರ್ಕಾರ ನಿಗದಿ ಮಾಡಿರುವ ಮೆನು ಅನುಸಾರವೇ ಊಟ ಉಪಚಾರ ವಿತರಿಸಲು ಎಲ್ಲಾ ಸಿದ್ಧತೆಕೈಗೊಳ್ಳಲಾಗಿದೆ.ಕುಡಿಯುವ ಶುದ್ಧ ನೀರು ಪೂರೈಕೆ ವ್ಯವಸ್ಥೆಯೂ ಇದೆ. ಬಿಸಿನೀರಿಗೂ ಅಗತ್ಯ ಸೌಲಭ್ಯಕಲ್ಪಿಸಲಾಗಿದೆ. ಸ್ನಾನಕ್ಕಾಗಿ ಗೀಸರ್‌ಗಳನ್ನು ಅಳವಡಿಸಲಾಗಿದೆ.