Advertisement

ಈಗ ಲ್ಯಾಟಿನ್‌ ಅಮೆರಿಕದ ಮೇಲೆ ಚೀನ ಗುಪ್ತಚರ ಬಲೂನ್‌ ಹಾರಾಟ

07:57 PM Feb 04, 2023 | Team Udayavani |

ವಾಷಿಂಗ್ಟನ್‌: ಇತ್ತೀಚೆಗಷ್ಟೇ ಅಮೆರಿಕದ ಭದ್ರತಾ ಸೂಕ್ಷ್ಮ ಪ್ರದೇಶ ಮೊಂಟಾನದ ಮೇಲೆ ಚೀನಾದ ಗುಪ್ತಚರ ಬಲೂನ್‌ ಹಾರಾಡಿತ್ತು. ಇದು ಚೀನಾ-ಅಮೆರಿಕದ ನಡುವೆ ಬಿಸಿಬಿಸಿಯ ಮಾತುಕತೆಗಳಿಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಲ್ಯಾಟಿನ್‌ ಅಮೆರಿಕದಲ್ಲಿ ಚೀನದ ಮತ್ತೊಂದು ಗುಪ್ತಚರ ಬಲೂನ್‌ ಹಾರಾಟ ಕಂಡುಬಂದಿದೆ. ಇಲ್ಲಿ ನಿರ್ದಿಷ್ಟವಾಗಿ ಯಾವ ದೇಶದ ಮೇಲೆ ಈ ಹಾರಾಟ ಕೇಂದ್ರೀಕರಣಗೊಂಡಿದೆ ಎಂದು ಸ್ಪಷ್ಟವಾಗಿಲ್ಲ.

Advertisement

ಇದು ಅಮೆರಿಕದ ಮೇಲಿನ ಹಾರಾಟವಲ್ಲವಾದ್ದರಿಂದ, ತನಗೆ ಹೆಚ್ಚಿನ ಮಾಹಿತಿಯಿಲ್ಲವೆಂದು ಪೆಂಟಗನ್‌ ಮಾಧ್ಯಮ ಕಾರ್ಯದರ್ಶಿ ಬ್ರಿಗೇಡಿಯರ್‌ ಜನರಲ್‌ ಪ್ಯಾಟ್‌ ರೈಡರ್‌ ತಿಳಿಸಿದ್ದಾರೆ. ಇವೆಲ್ಲದರ ಒಟ್ಟು ಪರಿಣಾಮವೆಂಬಂತೆ ಅಮೆರಿಕ ಗೃಹಸಚಿವ ಆ್ಯಂಟನಿ ಬ್ಲಿಂಕೆನ್‌ ಶುಕ್ರವಾರ ರಾತ್ರಿ ತಮ್ಮ ಚೀನ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.

ಬಹಳ ವರ್ಷಗಳ ನಂತರ ಅಮೆರಿಕದ ದೊಡ್ಡ ನಾಯಕರೊಬ್ಬರು ಚೀನಕ್ಕೆ ತೆರಳಿದ್ದರು. ಈ ವೇಳೆ ಎರಡೂ ದೇಶಗಳ ನಡುವಿರುವ ಹಲವು ಭಿನ್ನಮತಗಳ ಬಗ್ಗೆ ಚರ್ಚೆಯಾಗುವ ನಿರೀಕ್ಷೆಯಿತ್ತು. ಚೀನ ನಡೆಯನ್ನು ಅಮೆರಿಕ ಕಟುವಾಗಿ ಟೀಕಿಸಿದೆ. ಹಾಗಾಗಿ ಪರಿಸ್ಥಿತಿ ಯಾವ ತಿರುವು ಪಡೆಯುತ್ತದೆ ಎನ್ನುವುದು ಖಚಿತವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next