Advertisement

ಸಿಲಿಂಡರ್‌ ಸ್ಫೋಟಕ್ಕೆ ಮತ್ತೂಂದು ಮಗು ಬಲಿ

12:21 PM Apr 10, 2018 | Team Udayavani |

ಬೆಂಗಳೂರು: ಇತ್ತೀಚೆಗೆ ನಗರದ ಕಲ್ಯಾಣನಗರ ಮತ್ತು ಜಗಜೀವನರಾಮ್‌ ನಗರದಲ್ಲಿ ಸಂಭಿವಿಸಿದ ಪ್ರತ್ಯೇಕ ಸಿಲಿಂಡರ್‌ ಸ್ಫೋಟದಲ್ಲಿ ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 14  ಮಂದಿ ಗಾಯಾಳುಗಳ ಪೈಕಿ ಏಳು ವರ್ಷದ ಮಗು ಸೇರಿದಂತೆ ಇಬ್ಬರು ಸೋಮವಾರ ಮೃತಪಟ್ಟಿದ್ದಾರೆ. ಇದರೊಂದಿಗೆ ಅವಳಿ ಸಿಲಿಂಡರ್‌ ಸ್ಫೋಟ ಪ್ರಕರಣಗಳಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ. 

Advertisement

ದಾಸರಹಳ್ಳಿ ಕಲ್ಯಾಣನಗರದಲ್ಲಿ ಸಿಲಿಂಡರ್‌ ಸ್ಫೋಟಗೊಂಡು ಗಾಯಗೊಂಡಿದ್ದ ಪಾವಗಡ ಮೂಲದ ವೆಂಕಟೇಶ್‌ ಮತ್ತು ಮಹೇಶ್ವರಮ್ಮ ದಂಪತಿ ಪುತ್ರಿ ಅಲಮೇಲು (7) ಮತ್ತು ಜಗಜೀವನರಾಮ್‌ ನಗರದ ಹರಪತ್‌ನಗರದಲ್ಲಿ ನಡೆದ ಸ್ಫೋಟದಲ್ಲಿ ಗಾಯಗೊಂಡಿದ್ದ ಸೋಹೆಲ್‌ ಮೃತಪಟ್ಟವರು. ಮೂರು ದಿನಗಳ ಹಿಂದೆ ವೆಂಕಟೇಶ್‌ ಸಂಬಂಧಿ ದೇವರಾಜು- ಲಕ್ಷ್ಮಮ್ಮ ದಂಪತಿಯ ಪುತ್ರಿ ದೇವಿಕಾ ಮೃತ ಪಟ್ಟಿದ್ದಳು.

ಚಿಕಿತ್ಸೆ ಮುಂದುವರಿಕೆ: ಸಿಲಿಂಡರ್‌ ಸ್ಫೋಟದಲ್ಲಿ ಆಲವೇಲುಗೆ ಶೇ. 50ರಷ್ಟು ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ. ಹೀಗಾಗಿ ಸೋಮವಾರ ಬೆಳಗ್ಗೆ ಚಿಕಿತ್ಸೆ ಫ‌ಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಎಂದು ಆಸ್ಪತ್ರೆಯ ವೈದ್ಯ ಡಾ.ಕೆ.ಟಿ.ರಮೇಶ್‌ ತಿಳಿಸಿದ್ದಾರೆ. ಮೃತ ಆಲಮೇಲು ಪೋಷಕರಾದ ವೆಂಕಟೇಶ್‌ ಮತ್ತು ಮಹೇಶ್ವರಮ್ಮ ದಂಪತಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ವೈದ್ಯರು ತಿಳಿಸಿದ್ದಾರೆ. 

ದೇವರಾಜ್‌ ಮತ್ತು ಲಕ್ಷ್ಮಮ್ಮ ಕೆಲ ವರ್ಷಗಳಿಂದ ದಾಸರಹಳ್ಳಿಯ ಕಲ್ಯಾಣ ನಗರದ ವಾಸಿ. ಖಾಸಗಿ ಕಂಪೆನಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ. ಶಾಲೆಗೆ ರಜೆ ಇದ್ದುದರಿಂದ ಅವರ ಸಂಬಂಧಿ ವೆಂಕಟೇಶ್‌ ಕುಟುಂಬ ಸಮೇತ ದೇವರಾಜ್‌ ಮನೆಗೆ ಬಂದಿದ್ದರು. ಸಂಬಂಧಿಕರ ಜೊತೆ ಮಾತನಾಡುತ್ತಾ ಲಕ್ಷ್ಮಮ್ಮ ರಾತ್ರಿ ಮಲಗುವಾಗ ಗ್ಯಾಸ್‌ ಸಿಲಿಂಡರ್‌ ಸಂಪರ್ಕ ಸ್ಥಗಿತಗೊಳಿಸಲು ಮರೆತಿದ್ದರು. ಇದರಿಂದ ಅನಿಲ ಸೋರಿಕೆಯಾಗಿತ್ತು. ದೇವರಾಜ್‌ ಮನೆಗೆ ಆಗಮಿಸಿದಾಗ ಬಾಗಿಲು ತೆರೆಯಲು ಲೈಟ್‌ ಆನ್‌ಮಾಡಿದ ವೇಳೆ ಪ್ರಕರಣ ಸಂಭವಿಸಿತ್ತು.

ಹೆತ್ತವರಿಗೆ ಗೊತ್ತೆ ಇಲ್ಲ: ಬಾಲಕಿ ಅಲಮೇಲು ಮೃತಪಟ್ಟಿರುವುದು ಆಕೆಯ ಪೋಷಕರಿಗೆ ಇನ್ನೂ ಗೊತ್ತಿಲ್ಲ. ಸಿಲಿಂಡರ್‌ ಸ್ಫೋಟದಲ್ಲಿ ಆಕೆಯ ತಂದೆ ವೆಂಕಟೇಶ್‌ ಮತ್ತು ತಾಯಿ ಮಹೇಶ್ವರಮ್ಮ ಅವರಿಗೂ ಗಂಭೀರ ಗಾಯಗಳಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಈ ಸಂದರ್ಭದಲ್ಲಿ ಮಗಳ ಸಾವಿನ ಬಗ್ಗೆ ಹೇಳಿದರೆ ಹೆಚ್ಚಿನ ಆಘಾತಕ್ಕೆ ಒಳಗಾಬಹುದು. ಇಲ್ಲವೇ ಪ್ರಾಣಕ್ಕೆ ಹಾನಿಯಾಗಬಹುದು ಎಂಬ ಆತಂಕದಿಂದ ಬಾಲಕಿಯ ಸಂಬಂಧಿಕರೇ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

Advertisement

ಮತ್ತೂಂದು ಸಾವು: ಅದೇ ದಿನ ಜಗಜೀವನ್‌ ರಾಮ್‌ ನಗರದ ಹರಪತ್‌ನಗರದಲ್ಲಿ ನಡೆದಿದ್ದ ಸಿಲಿಂಡರ್‌ ಸ್ಫೋಟದಲ್ಲಿ ಗಾಯಗೊಂಡಿದ್ದ ಸೋಹೆಲ್‌ ಎಂಬುವರು ಕೂಡ ಚಿಕಿತ್ಸೆ ಫ‌ಲಕಾರಿಯಾಗದೆ ಸೋಮವಾರ ಸಾವನ್ನಪ್ಪಿದ್ದಾರೆ. ಹರಪತ್‌ ನಗರದಲ್ಲಿ ಸೋಹೆಲ್‌ ಎಂಬುವರು ಬಟ್ಟೆ ಕಸೂತಿ (ಸ್ಟೋನ್‌ ಫಿನಿಶಿಂಗ್‌) ಅಂಗಡಿ ಅಂಗಡಿ ಆವರಣದಲ್ಲಿದ್ದ ಸಿಲಿಂಡರ್‌ ಏಕಾಏಕಿ ಸ್ಫೋಟಗೊಂಡು ಸೋಹೆಲ್‌ ಸೇರಿದಂತೆ ಐವರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next