ಮುಂಬಯಿ : ಅಂಧೇರಿ ಮೇಲ್ಸೇತುವೆ ಕುಸಿದ ಒಂದು ದಿನದ ತರುವಾಯ ಇದೀಗ ಗ್ರ್ಯಾಂಟ್ ರೋಡ್ ಸ್ಟೇಶನ್ ನಲ್ಲಿನ ಇನ್ನೊಂದು ಮೇಲ್ಸೇತುವೆ ಕುಸಿಯುವ ಭೀತಿ ಇದೆ; ಈ ಬಗ್ಗೆ ಮುಂಬಯಿ ಪೊಲೀಸರು ಇಂದು ಬುಧವಾರ ಎಚ್ಚರಿಕೆ ನೀಡಿದ್ದಾರೆ.
ಈ ನಡುವೆ ಕೆನಡಿ ಸೇತುವೆ ಕಡೆಗೆ ಸಾಗುವ ಮೋಟಾರು ವಾಹನಗಳನ್ನು ನಾನಾ ಚೌಕ್ ಮೂಲಕ ಸಾಗುವಂತೆ ಸೂಚಿಸಲಾಗಿದೆ.
ಮುಂಬಯಿ ಪೊಲೀಸರು ಇಂದು ಟ್ವಿಟರ್ ಮೂಲಕ ಗ್ರಾಂಟ್ ರೋಡ್ ಸ್ಟೇಶನ್ ಮೇಲ್ಸೇತುವೆಯಲ್ಲಿ ಬಿರುಕು ಕಂಡು ಬಂದಿರುವುದರಿಂದ ಅದು ಕುಸಿಯುವ ಸಾಧ್ಯತ ಇದೆ ಎಂಬ ಎಚ್ಚರಿಕೆಯನ್ನು ನೀಡಿದರು.
ಮುಂಬಯಿ ಮಹಾ ನಗರಿಯಲ್ಲಿ ನಿನ್ನೆ ಮಂಗಳವಾರದಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು ಇದರ ಪರಿಣಾಮವಾಗಿ ನಿನ್ನೆ ಸೌತ್ ಎಂಡ್‌ನಲ್ಲಿ ವಿಲೇ ಪಾರ್ಲೆ ಕಡೆಗೆ ಹೋಗುವ ಅಂಧೇರಿ ಸ್ಟೇಶನ್ ಸಮೀಪ ರೈಲು ಹಳಿಯ ಮೇಲೆ ಮೇಲ್ ಸೇತುವೆ ಕುಸಿದಿತ್ತು. ಇದರ ಪರಿಣಾಮವಾಗಿ ಆರು ಮಂದಿ ಗಾಯಗೊಂಡಿದ್ದರು. ಇಬ್ಬರನ್ನು ಅವಶೇಷಗಳ ಎಡೆಯಿಂದ ಮೇಲೆತ್ತಿ ಪಾರುಗೊಳಿಸಲಾಗಿತ್ತು.
ಗೋಖಲೆ ಎಂದೇ ಪ್ರಸಿದ್ಧವಾಗಿದ್ದ ಈ ಸೇತುವೆ ಅಂಧೇರಿ ಪೂರ್ವ ಮತ್ತು ಪಶ್ಚಿಮ ನಡುವೆ ಸಂಪರ್ಕ ಕಲ್ಪಿಸುವ ಸೇತುವೆಯಾಗಿತ್ತು. ಇದರ ಕುಸಿತದ ಪರಿಣಾಮವಾಗಿ ತೀವ್ರ ತೊಂದರೆಗೆ ಗುರಿಯಾದವರು ಡಬ್ಟಾವಾಲಾಗಳು; ಇವರು ವೆಸ್ಟ್‌ರ್ನ್ ಲೈನಿನ ಹಲವು ತಾಣಗಳಲ್ಲಿ ಸಿಲುಕಿಕೊಂಡಿದ್ದರು.