Advertisement

ಸೋಲಿನಿಂದ ಕಂಗೆಟ್ಟಿರುವ ಆರ್ ಸಿಬಿಗೆ ಮತ್ತೊಂದು ಹೊಡೆತ; ಸ್ಟಾರ್ ಆಟಗಾರ ಟೂರ್ನಿಯಿಂದ ಔಟ್!

02:18 PM Apr 13, 2024 | Team Udayavani |

ಬೆಂಗಳೂರು: 17ನೇ ಸೀಸನ್ ನ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕಂಟಕಗಳು ತಪ್ಪುತ್ತಿಲ್ಲ. ಆಡಿದ ಆರು ಪಂದ್ಯಗಳಲ್ಲಿ ಕೇಲವ ಒಂದನ್ನು ಗೆದ್ದಿರುವ ಆರ್ ಸಿಬಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಅದರಲ್ಲೂ ಹೀನಾಯವಾಗಿ ಸೋಲುತ್ತಿರುವ ಆರ್ ಸಿಬಿಗೆ ಎನರ್ಜಿ ಬೂಸ್ಟರ್ ಅಗತ್ಯವಿದೆ. ಆದರೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.

Advertisement

ತಂಡದ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸವೆಲ್ ಅವರು ಮುಂಬೈ ವಿರುದ್ಧದ ಹಿಂದಿನ ಪಂದ್ಯದಲ್ಲಿ ಗಾಯಗೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಫೀಲ್ಡಿಂಗ್ ಮಾಡುವಾಗ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರು.

ಇದೀಗ ಅವರು ಸಂಪೂರ್ಣ ಕೂಟದಿಂದಲೇ ಹೊರ ಬೀಳುವ ಆತಂಕ ಎದುರಿಸುತ್ತಿದ್ದಾರೆ. ಇದರ ಬಗ್ಗೆ ಖಚಿತ ಮಾಹಿತಿ ಬರದಿದ್ದರೂ, ವರದಿಗಳು ಗ್ಲೆನ್ ಮ್ಯಾಕ್ಸವೆಲ್ ಅವರ ಅಲಭ್ಯತೆಯನ್ನು ಸೂಚಿಸುತ್ತಿದೆ.

ಬಿಗ್ ಹಿಟ್ಟರ್ ಎಂದೇ ಹೆಸರಾದ ಆಸೀಸ್ ಆಲ್ ರೌಂಡರ್ ಈ ಬಾರಿಯ ಕೂಟದಲ್ಲಿ ಆರ್ ಸಿಬಿ ಪರ ನಿರಾಶಾದಾಯಕ ಪ್ರದರ್ಶನ ನೀಡಿದ್ದಾರೆ. ಎರಡಂಕಿ ಮೊತ್ತವನ್ನೂ ಗಳಿಸಲು ಪರದಾಡುತ್ತಿರುವ ಗ್ಲೆನ್ ಬ್ಯಾಟಿಂಗ್ ಆರ್ ಸಿಬಿ ಮ್ಯಾನೇಜ್ ಮೆಂಟ್ ಗೆ ತಲೆನೋವು ತಂದಿದೆ.

ಮುಂಬೈ ವಿರುದ್ಧ ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿಯೂ ಗ್ಲೆನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next