Advertisement

ಅರುಣಾಚಲ ಪ್ರದೇಶದಲ್ಲಿ ಹೈಡ್ರಾಮಾ: ಬಿಜೆಪಿ ವಶಕ್ಕೆ ಮತ್ತೊಂದು ರಾಜ್ಯ

03:45 AM Jan 01, 2017 | |

ಇಟಾನಗರ: ಕಳೆದೊಂದು ವರ್ಷದಿಂದ ಹಲವು ರಾಜಕೀಯ ಬೃಹನ್ನಾಟಕಗಳಿಗೆ ಸಾಕ್ಷಿಯಾಗುತ್ತಿರುವ ಅರುಣಾಚಲ ಪ್ರದೇಶದಲ್ಲಿ ಹೊಸ ವರ್ಷದ ಮುನ್ನಾದಿನವಾದ ಶನಿವಾರ ಮತ್ತೂಂದು ಹೈಡ್ರಾಮಾ ನಡೆದಿದೆ. ಆಡಳಿತಾ ರೂಢ ಕಾಂಗ್ರೆಸ್‌ ಪಕ್ಷದ 42 ಶಾಸಕರ ಜತೆ ಕಳೆದ ಸೆಪ್ಟೆಂಬರ್‌ನಲ್ಲಷ್ಟೇ ಪಿಪಿಎ (ಪೀಪಲ್ಸ್‌ ಪಾರ್ಟಿ ಆಫ್ ಅರುಣಾಚಲ)ಗೆ ವಲಸೆ ಹೋಗಿದ್ದ ಮುಖ್ಯಮಂತ್ರಿ ಪೆಮಾ ಖಂಡು, ಈಗ ಮತ್ತೂಂದು ಕ್ಷಿಪ್ರಕ್ರಾಂತಿ ನಡೆಸಿದ್ದಾರೆ. ಶನಿವಾರ 32 ಶಾಸಕರ ಜತೆ ಬಿಜೆಪಿಗೆ ಪಕ್ಷಾಂತರ ಮಾಡುವ ಮೂಲಕ ಬಿಜೆಪಿ ಮುಖ್ಯಮಂತ್ರಿಯಾಗಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

Advertisement

ಈಶಾನ್ಯ ರಾಜ್ಯದಲ್ಲಿ ಬೇರುಬಿಡಲು ಹರ ಸಾಹಸ ನಡೆಸುತ್ತಿರುವ ಬಿಜೆಪಿಗೆ ಇದೊಂದು ರೀತಿ ಜಾಕ್‌ಪಾಟ್‌ ಹೊಡೆದಂತಾಗಿದೆ. ಅರುಣಾ ಚಲಪ್ರದೇಶದಲ್ಲಿ ಇದೇ ಮೊದಲ ಬಾರಿಗೆ “ಕಮಲ’ ಅರಳಿದಂತಾಗಿದ್ದು, ದೇಶದಲ್ಲಿ ಬಿಜೆಪಿ ಮುಖ್ಯಮಂತ್ರಿಗಳ ಸಂಖ್ಯೆ 10ಕ್ಕೇರಿದಂತಾಗಿದೆ. ಮಧ್ಯಪ್ರದೇಶ, ಛತ್ತೀಸ್‌ಗಢ, ಗುಜರಾತ್‌, ರಾಜಸ್ಥಾನ, ಹರ್ಯಾಣ, ಅಸ್ಸಾಂ, ಗೋವಾ, ಜಾರ್ಖಂಡದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ದಲ್ಲಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆಯ ಬೆಂಬಲದೊಂದಿಗೆ ಬಿಜೆಪಿ ಮುಖ್ಯಮಂತ್ರಿಯೇ ಅಧಿ ಕಾರ ನಡೆಸುತ್ತಿದ್ದಾರೆ.

60 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ 31 ಸ್ಥಾನಗಳು ಬೇಕು. ಪೆಮಾ ಖಂಡು, 32 ಶಾಸಕರ ಬೆಂಬಲದಿಂದಾಗಿ ಬಿಜೆಪಿ ಬಲ 47ಕ್ಕೆ ಜಿಗಿದಿದೆ. ಖಂಡು ಪಾಳೆಯದ ಪಕ್ಷ ಸೇರ್ಪಡೆಗೆ ಮುನ್ನ ಬಿಜೆಪಿ ಬಳಿ 12 ಶಾಸಕರಿದ್ದರು. ಇಬ್ಬರು ಪಕ್ಷೇತರರ ಬೆಂಬಲವೂ ಆ ಪಕ್ಷಕ್ಕೆ ಇತ್ತು. ಪಕ್ಷ ಸೇರ್ಪಡೆ ಬೆನ್ನಲ್ಲೇ ಪೆಮಾ ಖಂಡು ಅವರು ಸ್ಪೀಕರ್‌ ತೇನ್‌ಜಿಂಗ್‌ ನೊಬುì ಥೊಂಗೊxಕ್‌ ಅವರ ಮುಂದೆ ಶಾಸಕರ ಪರೇಡ್‌ ನಡೆಸಿದ್ದಾರೆ. ಅವರು ಖಂಡು ಗುಂಪಿನ ಬಿಜೆಪಿ ಸೇರ್ಪಡೆಯನ್ನು ಒಪ್ಪಿಕೊಂಡಿದ್ದಾರೆ.

ಶುರುವಾಗಿದ್ದು ಗುರುವಾರ ರಾತ್ರಿಯಿಂದ: 2014ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆ ಸ್ಸಿನ 42 ಮಂದಿ ಗೆದ್ದಿದ್ದರು. ಹೀಗಾಗಿ ಆ ಪಕ್ಷ ಮತ್ತೂಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿತ್ತು. ನಬಂ ಟುಕಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಸಿತ್ತು. ಆದರೆ ಅವರ ವಿರುದ್ಧ ಪಕ್ಷದ ಶಾಸಕರು ಬಂಡಾಯ ಸಾರಿದ್ದರು. ಹೋಟೆಲ್‌ನಲ್ಲಿ ವಿಧಾನಸಭೆ ಅಧಿವೇಶನ ನಡೆಸಿ, ಟುಕಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕಿತ್ತೂಗೆದಿದ್ದರು. ಕೊನೆಗೆ ಬಿಜೆಪಿ ಬೆಂಬಲ ದೊಂದಿಗೆ ಕಾಂಗ್ರೆಸ್ಸಿನ ಬಂಡಾಯ ಶಾಸಕ ಕಲಿಕೋ ಪುಲ್‌ ಅವರು ಕಳೆದ ಫೆಬ್ರವರಿಯಲ್ಲಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು.

ಇದರ ವಿರುದ್ಧ ಕಾಂಗ್ರೆಸ್‌ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು. ಟುಕಿ ಸರ್ಕಾರವನ್ನು ನ್ಯಾಯಾ ಲಯ ಮರುಸ್ಥಾಪಿಸಿತ್ತು. ಆದರೆ ಟುಕಿ ಅವರಿಗೆ ಶಾಸಕರ ಬೆಂಬಲವಿರಲಿಲ್ಲ. ಪುಲ್‌ ಅವರು ತಮ್ಮನ್ನೇ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡ 
ಬೇಕು ಎಂದು ಒತ್ತಡ ಹೇರಿದರು. ಆದರೆ ಶಾಸಕರು ಪೆಮಾ ಖಂಡು ಬೆಂಬಲಕ್ಕೆ ನಿಂತರು. ಖಂಡು ಮುಖ್ಯಮಂತ್ರಿಯಾದರು. ಆದರೆ ಖಂಡು ಅವರು ಕೆಲವೇ ದಿನಗಳಲ್ಲಿ 42 ಕಾಂಗ್ರೆಸ್‌ ಶಾಸಕರ ಜತೆ ಪಿಪಿಎ ಸೇರಿದರು. ಆ ಪಕ್ಷ ಬಿಜೆಪಿ ಬೆಂಬಲಿತ ಈಶಾನ್ಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಇಡಿಎ)ದ ಮಿತ್ರಪಕ್ಷವಾಗಿತ್ತು. 

Advertisement

ಆದರೆ ಗುರುವಾರ ರಾತ್ರಿ ದಿಢೀರನೆ ಪಿಪಿಎ ಮುಖ್ಯಸ್ಥ ಕಹಾ ಬೆಂಗಿಯಾ, ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇರೆಗೆ ಮುಖ್ಯಮಂತ್ರಿ ಖಂಡು, ಡಿಸಿಎಂ ಚೌನಾ ಮೇನ್‌ ಹಾಗೂ ಐವರು ಶಾಸಕರನ್ನು ಪಕ್ಷದಿಂದ ಅಮಾನತುಗೊಳಿಸಿದರು. ತಾಕಂ ಪಾರಿಯೋ ಅವರನ್ನು  ಸಿಎಂ ಆಗಿ ಆಯ್ಕೆ ಮಾಡಿದರು. ಆರಂಭದಲ್ಲಿ ಶಾಸಕರು ಅವರಿಗೆ ಬೆಂಬಲ ನೀಡಿದ್ದರಾದರೂ, ಬಳಿಕ ಖಂಡು ಅವರತ್ತ ಆಕರ್ಷಿತರಾದರು. ಕೊನೆಗೆ ಖಂಡು ಅವರು 32 ಶಾಸಕರ ಜತೆ ಶನಿವಾರ ಬಿಜೆಪಿಗೆ ಜಿಗಿದರು.

ಪಿಪಿಎ ಕಿಡಿ: ಬಿಜೆಪಿ ವಿರುದ್ಧ ಕಿಡಿಕಾರಿರುವ ಪಿಪಿಎ ನಾಯಕ ಕಹಾ ಬೆಂಗಿಯಾ, ತನ್ನ ಸರ್ಕಾರವನ್ನು ರಾಜ್ಯದಲ್ಲಿ ಪ್ರತಿಷ್ಠಾಪಿಸಲು ಪಕ್ಷದ ಶಾಸಕರನ್ನು ಬಿಜೆಪಿ ಅಪಹರಿಸುತ್ತಿದೆ. ರಾಜ ಕೀಯ ಬಿಕ್ಕಟ್ಟು ಎದುರಾಗಿದ್ದರೂ ಎನ್‌ಡಿಎ ಸಂಚಾಲಕ, ಅಸ್ಸಾಂನ ಸಚಿವ ಹಿಮಂತ ಬಿಸ್ವಾ ಶರ್ಮಾ ರಾಜ್ಯಕ್ಕೆ ಬಂದಿಲ್ಲ. ಕೆನ್ಯಾಕ್ಕೆ ಹೋಗಿದ್ದಾರೆ ಎಂದು ಕಿಡಿಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next