ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸ 18 ಕೋವಿಡ್-19 ಸೋಂಕು ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಐದು ಪ್ರಕರಣಗಳು ಪಾದರಾಯನಪುರದ ಸೋಂಕಿತ ಸಂಪರ್ಕದಿಂದ ವರದಿಯಾಗಿದೆ.
ಪಾದರಾಯನಪುರದ ಸೋಂಕಿತ ಸಂಪರ್ಕ ಸೇರಿದಂತೆ ಬೆಂಗಳೂರು ನಗರದಲ್ಲಿ ಒಟ್ಟು 11 ಸೋಂಕು ಪ್ರಕರಣಗಳು ದೃಢವಾಗಿದೆ.
ಬೆಳಗಾವಿಯ ರಾಯ್ ಭಾಗ್ ನಲ್ಲಿ 10 ವರ್ಷದ ಹೆಣ್ಣು ಮತ್ತು 15 ವರ್ಷದ ಹುಡಗನಿಗೆ ಸೋಂಕು ತಾಗಿರುವುದು ಖಚಿತವಾಗಿದೆ.
ಸೂರತ್ ಗೆ ಪ್ರಯಾಣ ಮಾಡಿದ್ದ ಹಿನ್ನಲೆ ಹೊಂದಿದ್ದ ತುಮಕೂರಿನ ವ್ಯಕ್ತಿಗೆ ಸೋಂಕು ಖಚಿತವಾಗಿದೆ. ಚಿಕ್ಕಬಳ್ಳಾಪುರದಲ್ಲಿ ಇಂದು ಪ್ರಕರಣ ಖಚಿತವಾಗಿದ್ದು, ಸೋಂಕಿತ ಸಂಖ್ಯೆ 250ರ ಸಂಪರ್ಕದಿಂದ 39 ವರ್ಷದ ವ್ಯಕ್ತಿಗೆ ಸೋಂಕು ದೃಢವಾಗಿದೆ.
ಬಾಗಲಕೋಟೆಯಲ್ಲಿ ಎರಡು ಸೋಂಕು ಪ್ರಕರಣ ದೃಢವಾಗಿದ್ದು, ಮುದೋಳದಲ್ಲಿ ಒಂದು ಮತ್ತು ಜಮಕಂಡಿಯಲ್ಲಿ ಒಂದು ಪ್ರಕರಣ ಖಚಿತವಾಗಿದೆ. ವಿಜಯಪುರದ 17 ವರ್ಷದ ವ್ಯಕ್ತಿಗೆ ಸೋಂಕು ದೃಢವಾಗಿದೆ.
ರಾಜ್ಯದಲ್ಲಿ ಇದುವರೆಗೆ 18 ಪ್ರಕರಣಗಳು ಸಾವನ್ನಪ್ಪಿದ್ದು, 150 ಜನರು ಗುಣಮುಖರಾಗಿದ್ದಾರೆ.