Advertisement
ಕೇರಳ ರಾಜ್ಯದಲ್ಲಿರುವ ಗಡಿನಾಡು ಕಾಸರಗೋಡಿನ ಕನ್ನಡಿಗರಿಗೆ ಕನ್ನಡದ ಬಾಲಕ ಹೆಮ್ಮೆ ತಂದಿದ್ದಾನೆ. ಗಡಿನಾಡಿನಲ್ಲಿ ಕನ್ನಡದ ದಮನಕ್ಕಾಗಿ ಕೇರಳ ಪ್ರಯತ್ನಿಸುತ್ತಿರುವ ಸಂದರ್ಭದಲ್ಲೇ ಇವನ ಸಾಧನೆಯು ಕಾಸರಗೋಡಿನ ಕನ್ನಡಿಗರಿಗೆ ಅಭಿಮಾನದ ಸಂಕೇತ ವಾಗಿದೆ. ಸೀಸನ್2ರಲ್ಲಿ ಕರ್ನಾಟಕದ ಅನೇಕ ಕಡೆ ಅಡಿಷನ್‌ಗಳು ನಡೆದು ಸುಮಾರು 25 ಸಾವಿರಕ್ಕಿಂತಲೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.
ಪೊಲೀಸ್ ಅಧಿಕಾರಿಯಾಗಿ ಗಮನಸೆಳೆದ
ಮಂಗಳೂರಿನಲ್ಲಿ ನಡೆಸಿದ ಅಡಿಷನ್‌ನಲ್ಲಿ ಐಪಿಎಸ್ ಪೋಲಿಸ್ ಅ ಧಿಕಾರಿಯಾಗಿ ನಟಿಸಿದ ಡ್ರಾಮಾ ಮತ್ತು ಮೆಗಾ ಅಡಿಶನ್‌ನಲ್ಲಿ ಕಾನ್‌ಸ್ಟೆಬಲ್ ಭೀಮಣ್ಣ ಎಂಬ ಪಾತ್ರವನ್ನು ಅದ್ಭುತವಾಗಿ ಮಾಡಿ ತೀರ್ಪುಗಾರರ ಗಮನ ಸೆಳೆದಿದ್ದಾನೆ. ತನ್ನ ಸ್ವ ಆಸಕ್ತಿಯಿಂದಲೇ ನಟನೆಯನ್ನು ರೂಢಿಸಿಕೊಂಡಿರುವ ಬಾಲಕ ಅನೂಪ್ ರಮಣ ಶರ್ಮ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದಲ್ಲಿ ತನ್ನದೇ ಛಾಪು ಮೂಡಿಸುವ ಖುಷಿಯಲ್ಲಿದ್ದಾನೆ. ಸಾವಿರಗಟ್ಟಲೆ ಮಕ್ಕಳಲ್ಲಿ ಆಯ್ಕೆಗೊಂಡ ಮೂವತ್ತು ಮಂದಿಯಲ್ಲಿ ಒಬ್ಬನಾಗಿರುವ ಅನೂಪ್‌ನನ್ನು ಖುಷಿಗೊಳಿಸಿದ್ದು, ಇದೀಗ ಮುಂದಿನ ದಿನಗಳಲ್ಲಿ ಉತ್ತಮ ನಟನೆಯನ್ನು ಮಾಡುವ ಭರವಸೆಯನ್ನು ಹೊಂದಿದ್ದಾನೆ. ಯಾವುದೇ ತರಬೇತಿ ಇಲ್ಲದೆ, ತನ್ನದೇ ಆಸಕ್ತಿಯಿಂದ ನಟನೆಯನ್ನು ಅಭ್ಯಸಿಸುತ್ತಿದ್ದಾನೆ. ಅನೂಪ್‌ನ ತಾಯಿ ಪದ್ಮ ಕೆ.ಕೆ ಮುಳ್ಳೇರಿಯ ಎ.ಯು.ಪಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಇವರು ನೃತ್ಯ, ಇನ್ನಿತರ ಕಲಾ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದು, ಪಠ್ಯೇತರ ಚಟುವಟಿಕೆಗಳಿಗೆ ತನ್ನ ಮಕ್ಕಳನ್ನೂ ಒಗ್ಗಿಕೊಳ್ಳುವಂತೆ ಪೊÅàತ್ಸಾಹ ನೀಡುತ್ತಿದ್ದಾರೆ. ಶಾಲೆಯಲ್ಲಿ ನಡೆಸುವ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಇದೀಗ ಡ್ರಾಮಾ ಜೂನಿ ಯರ್ಸ್‌ಗೆ ಆಯ್ಕೆಗೊಳ್ಳುವ ಮೂಲಕ ಕಾಸರಗೋಡಿನ ಹೆಸರನ್ನು ಮುಗಿಲೆತ್ತರಕ್ಕೆ ಕೊಂಡೊ ಯ್ಯುವ ಪ್ರಯತ್ನ ನಡೆಸಿದ್ದಾನೆ. ಮುಳ್ಳೇರಿಯಾ ಎಯುಪಿಎಸ್ ಶಾಲೆಯ ಆರನೇ ತರಗತಿಯ ವಿದ್ಯಾರ್ಥಿಯಾಗಿದ್ದು, ತಂದೆ ಮಹಾ ಲಿಂಗೇಶ್ವರ ಎನ್. ಇವರು ಎಸ್‌ಎನ್‌ಎಲ್‌ಪಿ ಶಾಲೆ ಪೆರ್ಲದ ಮುಖ್ಯ ಶಿಕ್ಷಕರಾಗಿರುವರು. ಇವರ ಪ್ರೋತ್ಸಾಹ ಮತ್ತು ರಂಗ ನಿರ್ದೇಶಕ ಉದಯ ಸಾರಂಗ್ ಅವರ ಪೊÅàತ್ಸಾಹವಿದೆ. ಕನ್ನಡದ ಡ್ರಾಮಾ ಜೂನಿಯರ್ಸ್‌ಗೆ ಅನೂಪ್ ಪ್ರವೇಶಿಸಿದ್ದು ಆತನಿಗೆ ಉತ್ತಮ ಭವಿಷ್ಯವಿರಲಿ ಎಂದು ಸಮಸ್ತ ಕನ್ನಡಿಗರ ಪ್ರಾರ್ಥನೆ.