ಧಾರವಾಡ: ಧರ್ಮವನ್ನು ಅರಿತು ಅರ್ಥ ಮಾಡಿಕೊಳ್ಳುವ ಮೂಲಕ ಅದರ ನೀತಿ, ತತ್ವ, ಸಿದ್ಧಾಂತ ಮತ್ತು ಆಚರಣೆಗಳನ್ನು ಪರಿಪಾಲಿಸಬೇಕಾಗಿದ್ದು, ಹೀಗಾಗಿ ಪ್ರತಿಯೊಬ್ಬರೂ ಧರ್ಮದೀಕ್ಷೆ ಪಡೆದು ಸಂಸ್ಕಾರವಂತರಾಗಬೇಕು ಎಂದು ಅಮ್ಮಿನಬಾವಿ ಪಂಚಗೃಹ ಹಿರೇಮಠದ ಕಿರಿಯ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ವೀರಶೈವ ಜಂಗಮ ಸಂಸ್ಥೆಯ ಆಶ್ರಯದಲ್ಲಿ ಉಳವಿ ಚೆನ್ನಬಸವೇಶ್ವರ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಜಂಗಮ (ವೀರಮಾಹೇಶ್ವರ) ವಟುಗಳ ಸಾಮೂಹಿಕ ಅಯ್ನಾಚಾರ-ಶಿವದೀûಾ ಸಂಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಜಾತಿ ಕತ್ತರಿ ಇದ್ದಂತೆ. ಅದು ಯಾವಾಗಲೂ ಎಲ್ಲೆಡೆ ಎಲ್ಲರನ್ನೂ ಕತ್ತರಿಸುವ ಕೆಲಸವನ್ನೇ ಮಾಡುತ್ತದೆ. ಆದರೆ ಧರ್ಮ ಹಾಗಲ್ಲ, ಅದು ಸೂಜಿ ಇದ್ದಂತೆ. ಅದು ಸದಾಕಾಲ ಮನುಷ್ಯರೆಲ್ಲರಲ್ಲಿ ಸಾತ್ವಿಕ ನಡೆ-ನುಡಿಯ ಸತ್ಯ-ಶುದ್ಧ ಮೌಲ್ಯಾಧಾರಿತ ಉನ್ನತ ಜೀವನ ವಿಧಾನದ ಭಾವಸಮನ್ವಯ ಹುಟ್ಟುಹಾಕಿ, ಎಲ್ಲರನ್ನೂ ತನ್ನ ನೆರಳಿನಲ್ಲಿ ಸೇರಿಸಿ ಒಂದುಗೂಡಿಸುತ್ತದೆ ಎಂದರು.
ಇಷ್ಟಲಿಂಗ ಧಾರಣೆ: ದೀûಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ 26 ಜಂಗಮ ಮಕ್ಕಳಿಗೆ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಕಿರಿಯಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಇಷ್ಟಲಿಂಗ ಧಾರಣೆ ಮಾಡಿ, ಮಂತ್ರೋಪದೇಶ ನೀಡಿದರು.
ನಿತ್ಯದಲ್ಲಿ ಇಷ್ಟಲಿಂಗಾರ್ಚನೆ ಮಾಡುವ ವಿಧಾನ ಹಾಗೂ ನೀತಿಸಂಹಿತೆಯನ್ನು ಬೋಧಿಸುವ ಮೂಲಕ ಎಲ್ಲ ವಟುಗಳಿಗೆ ಬೆತ್ತ, ಜೋಳಿಗೆ, ರುದ್ರಾಕ್ಷಿಗಳನ್ನು ಅನುಗ್ರಹಿಸಿ ಆಶೀರ್ವದಿಸಿದರು. ವೀರಶೈವ ಜಂಗಮ ಸಂಸ್ಥೆಯ ಡಾ| ಎಸ್.ಬಿ. ಪುರಾಣಿಕ, ಕೆ.ಸಿ.ದಿನ್ನಿಮಠ, ಸಿ.ಆರ್. ಹಳ್ಳಿಗೇರಿಮಠ, ಜಿ.ಜಿ.ಹಿರೇಮಠ,
ಡಾ| ಮಹಾಂತಸ್ವಾಮಿ ಹಿರೇಮಠ, ರಾಚಯ್ಯ ಹಿಡಕಿಮಠ, ಸಿ.ಎಸ್. ಪಾಟೀಲಕುಲಕರ್ಣಿ, ಜಗದೀಶ ಸುಬ್ಟಾಪುರಮಠ, ಡಾ| ಬಿ.ಸಿ. ಪೂಜಾರ, ಎಫ್.ಆರ್. ಕರವೀರಮಠ ಇದ್ದರು. ಈ ಸಂದರ್ಭದಲ್ಲಿ ರಾಚಯ್ಯ ಹಿಡಕಿಮಠ ಅವರು ನಡೆಸಿದ ದಾಸೋಹ ಸೇವೆಯಲ್ಲಿ ಸಾಮೂಹಿಕ ಅನ್ನಸಂತರ್ಪಣೆ ಜರುಗಿತು.