Advertisement

ವಾರ್ಷಿಕ ಕ್ರೀಡಾಕೂಟಕ್ಕೆ ಅದ್ದೂರಿ ಚಾಲನೆ

06:25 PM Jan 20, 2020 | Team Udayavani |

ನವಿ ಮುಂಬಯಿ, ಜ. 19: ನಗರದ ಪ್ರತಿಷ್ಠಿತ ಹೆಗ್ಗಡೆ ಸೇವಾ ಸಂಘ ಮುಂಬಯಿ ಇದರ ವಾರ್ಷಿಕ ಕ್ರೀಡಾಕೂಟವು ಜ. 19 ರಂದು ಐರೋಲಿಯ ಹೆಗ್ಗಡೆ ಭವನ ಸಮೀಪದ ಸೆಕ್ಟರ್‌-15, ಎನ್‌ಎಂಎಂಸಿ ಮೈದಾನದಲ್ಲಿ ವೈವಿಧ್ಯಮಯ ಕ್ರೀಡಾಸ್ಪರ್ಧೆ ಗಳೊಂದಿಗೆ ನಡೆಯಿತು.

Advertisement

ಹೆಗ್ಗಡೆ ಸೇವಾ ಸಂಘ ಮುಂಬಯಿ ಅಧ್ಯಕ್ಷ ಶಂಕರ ಆರ್‌. ಹೆಗ್ಡೆ ಇವರ ಅಧ್ಯಕ್ಷತೆಯಲ್ಲಿ ಡೊಂಬಿವಲಿಯ ಹೊಟೇಲ್‌ ಉದ್ಯಮಿ ಪ್ರಭಾಕರ ಎನ್‌. ಹೆಗ್ಡೆ ಹೆರ್ಮುಂಡೆ ಅವರು ದೀಪ ಪ್ರಜ್ವಲಿಸಿ, ಬಲೂನ್‌ ಹಾರಿಸುವುದರ ಮೂಲಕ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು. ಸಮಾ ರಂಭದಲ್ಲಿ ಸಂಸ್ಥೆಯ ಕಾರ್ಯಾಧ್ಯಕ್ಷ ಆನಂದ ಹೆಗ್ಡೆ, ಅಧ್ಯಕ್ಷ ಶಂಕರ್‌ ಆರ್‌. ಹೆಗ್ಡೆ, ಉಪಾಧ್ಯಕ್ಷ ಮನೋಜ್‌ ಕುಮಾರ್‌ ಎಲ್‌. ಹೆಗ್ಡೆ, ಗೌರವ ಪ್ರಧಾನ ಕಾರ್ಯದರ್ಶಿ ರವಿ ಎಸ್‌. ಹೆಗ್ಡೆ, ಜತೆ ಕಾರ್ಯದರ್ಶಿ ದಯಾನಂದ ಬಿ. ಹೆಗ್ಡೆ, ಗೌರವ ಪ್ರಧಾನ ಕೋಶಾಧಿಕಾರಿ ಶಶಿಧರ ಎಸ್‌. ಹೆಗ್ಡೆ, ಜತೆ ಕೋಶಾಧಿಕಾರಿ ಮಂಜುನಾಥ ಎಂ. ಹೆಗ್ಡೆ, ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ್‌ ಆರ್‌. ಹೆಗ್ಡೆ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ರಾಜೇಶ್‌ ಆರ್‌. ಹೆಗ್ಡೆ, ಮೆಂಟೆನೆನ್ಸ್‌ ಸಮಿತಿಯ ಕಾರ್ಯಾಧ್ಯಕ್ಷ ಮನೋಹರ್‌ ಸಿ. ಹೆಗ್ಡೆ, ಕ್ಯಾಟರಿಂಗ್‌ ಸಮಿತಿಯ ಕಾರ್ಯಾಧ್ಯಕ್ಷ ಸಂತೋಷ್‌ ಆರ್‌. ಹೆಗ್ಡೆ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಗಣೇಶ್‌ ಎಸ್‌. ಹೆಗ್ಡೆ ಮುಲುಂಡ್‌, ಸದಸ್ಯತ್ವ ನೋಂದಣಿ ಸಮಿತಿಯ ಕಾರ್ಯಾಧ್ಯಕ್ಷೆ ಭಾರತಿ ಎಂ. ಹೆಗ್ಡೆ, ಮಾಹಿತಿ ಮತ್ತು ತಂತ್ರಜ್ಞಾನ ಸಮಿತಿಯ ಕಾರ್ಯಾಧ್ಯಕ್ಷ ಶಂಕರ್‌ ಎಸ್‌. ಹೆಗ್ಡೆ ಮುಲುಂಡ್‌, ಯುವ ವಿಭಾಗದ ಕಾರ್ಯಾಧ್ಯಕ್ಷ ಅಭಿಷೇಕ್‌ ಹೆಗ್ಡೆ, ಕಚೇರಿಯ ಆಡಳಿತಗಾರರಾದ ಗೀತಾ ಡಿ. ಹೆಗ್ಡೆ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಸುರೇಂದ್ರ ಕುಮಾರ್‌ ಹೆಗ್ಡೆ, ವಿಜಯ ಹೆಗ್ಡೆ, ಜಯರಾಮ್‌ ಹೆಗ್ಡೆ ಕಲ್ಯಾಣ್‌, ಹರೀಶ್‌ ಕುಮಾರ್‌ ವಿ. ಹೆಗ್ಡೆ, ಜಯರಾಮ್‌ ಎಂ. ಥಾಣೆ, ಕರುಣಾಕರ ಪಿ. ಹೆಗ್ಡೆ, ಪ್ರಭಾವತೀ ಜೆ. ಹೆಗ್ಡೆ, ಯುವ ವಿಭಾಗದ ಸದಸ್ಯರಾದ ಅರುಣ್‌ ಎಸ್‌. ಹೆಗ್ಡೆ, ಚಂದ್ರಹಾಸ್‌ ಎನ್‌. ಹೆಗ್ಡೆ, ನಿತಿನ್‌ ಎಂ. ಹೆಗ್ಡೆ, ಸಂತೋಷ್‌ ಎಸ್‌. ಹೆಗ್ಡೆ, ಸಾಗರ್‌ ಬಿ. ಹೆಗ್ಡೆ, ರಾಹುಲ್‌ ಜೆ. ಹೆಗ್ಡೆ, ಶ್ರೀನಿಧಿ ಎಂ. ಹೆಗ್ಡೆ, ವಿಷ್ಮಾ ವಿ. ಹೆಗ್ಡೆ, ನೇಹಾ ಎಸ್‌. ಹೆಗ್ಡೆ, ಪವಿತ್ರಾ ಎಸ್‌. ಹೆಗ್ಡೆ ಹಾಗೂ ಸದಸ್ಯ ಬಾಂಧವರು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭಶ್ರೀಮತಿ ಮತ್ತು ಶ್ರೀ ವಿನಯ್‌ ಎಸ್‌. ಹೆಗ್ಡೆ ಪುಣೆ ಇವರ ಪ್ರಾಯೋಜಕತ್ವದಲ್ಲಿ ಶ್ಯಾಮ ಹೆಗ್ಡೆ ನೂರಲ್‌ಬೈಲು ಕಾರ್ಕಳ ಸಂಸ್ಮ ರಣಾರ್ಥ ಪುರುಷರಿಗೆ ಕ್ರಿಕೆಟ್‌ ಪಂದ್ಯಾವಳಿ, ಶ್ರೀಮತಿ ತಾರಾಮತಿ ಗುಣಾನಂದ್‌ ಹೆಗ್ಡೆ ಪನ್ವೇಲ್‌ ವೇಣೂರು ಅವರ ಪ್ರಾಯೋಜಕತ್ವ ದಲ್ಲಿ ಗುಣಾನಂದ್‌ ಎಸ್‌. ಹೆಗ್ಡೆಪನ್ವೇಲ್‌ ಮೂಡುಕೋಡಿ ಸಾನ್ವಿ ನಿವಾಸ ಸಂಸ್ಮರಣೆಯಲ್ಲಿ ಮಹಿಳೆ ಯರಿಗೆ ತ್ರೋಬಾಲ್‌ ಪಂದ್ಯಾಟವನ್ನು ಆಯೋಜಿಸಲಾಗಿತ್ತು.

ಬೆಳಗ್ಗೆ 7ಕ್ಕೆ ಹೆಗ್ಗಡೆ ಭವನ ದಿಂದ ಎನ್‌ಎಂಎಂಸಿ ಮೈದಾನಕ್ಕೆ ಮೆರವಣಿಗೆಯಲ್ಲಿ ಅತಿಥಿ-ಗಣ್ಯ ರನ್ನು ಕರೆತರಲಾಯಿತು. ಬೆಳಗ್ಗೆ 8ರಿಂದ ಪ್ರಾರಂಭಗೊಂಡ ಕ್ರೀಡೋ ತ್ಸವವು ಸಂಜೆಯವರೆಗೆ ಸಮಾಜ ಬಾಂಧವರ ಎಳೆಯ ಮಕ್ಕಳಿಂದಹಿಡಿದು ಹಿರಿಯವರೆಗೆ ವಯೋ ಮಿತಿಗೆ ಅನುಗುಣವಾಗಿ ವೈವಿಧ್ಯ ಮಯ ಕ್ರೀಡಾ ಸ್ಪರ್ಧೆಗಳೊಂದಿಗೆ ಅದ್ದೂರಿಯಾಗಿ ನಡೆಯಿತು. ಬೆಳಗ್ಗೆ ಚಹಾ,ಮಧ್ಯಾಹ್ನ ಭೋಜನ, ಸಂಜೆ ಚಹಾದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸಂಜೆ ಸಮಾರೋಪ ಮತ್ತು ಬಹುಮಾನ ವಿತರಣೆ ಸಮಾರಂಭವು ಗಣ್ಯರಉಪಸ್ಥಿತಿಯಲ್ಲಿ ನೆರವೇರಿತು.  ಸಮಾಜ ಬಾಂಧವರು ಪಾಲ್ಗೊಂಡು ಕ್ರೀಡೋತ್ಸವದ ಯಶಸ್ಸಿಗೆ ಸಹಕರಿಸಿದರು.

 

Advertisement

ಚಿತ್ರ-ವರದಿ: ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next