Advertisement

ಡೇರಿ ರೈತರ ಜೀವನಾಡಿ : ರವಿ

02:24 PM Nov 11, 2020 | Suhan S |

ಅನುಗೊಂಡನ ಹಳ್ಳಿ: ಹಾಲು ಉತ್ಪಾದಕರು ಸಂಘಕ್ಕೆ ಉತ್ತಮ ಗುಣಮಟ್ಟದ ಹಾಲು ಸರಬರಾಜು ಮಾಡುವ ಮೂಲಕ ದೊಡ್ಡ ಗಟ್ಟಿಗನಬ್ಬೆ ಡೇರಿಯನ್ನು ಮಾದರಿ ಸಂಘ ಮಾಡಲು ಕಾರಣಕರ್ತರಾಗಿದ್ದಾರೆ ಎಂದು ದೊಡ್ಡಗಟ್ಟಿಗನಬ್ಬೆ ಡೇರಿ ಅಧ್ಯಕ್ಷ ಎಂ.ರವಿ ಪ್ರಶಂಸೆ ವ್ಯಕ್ತಪಡಿಸಿದರು.

Advertisement

ಹೊಸಕೋಟೆತಾಲೂಕಿನ ದೊಡ್ಡಗಟ್ಟಿಗನಬ್ಬೆ ಡೇರಿ ಆವರಣದಲ್ಲಿ ಏರ್ಪಡಿಸಲಾಗಿದ್ದ 2019-20ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ನೆಲ ಕಚ್ಚಿದ್ದರೂ ಹಾಲು ಒಕ್ಕೂಟ ರೈತರ ನೆರವಿಗೆ ನಿಂತು ತಾಲೂಕಿನಾದ್ಯಂತ ಉತ್ಪಾದನೆ ಆಗುತ್ತಿದ್ದ ಹಾಲನ್ನು ಒಕ್ಕೂಟ ಖರೀದಿ ಮಾಡಿ ಸಕಾಲದಲ್ಲಿ ಬಟವಾಡೆ ಸಹ ಮಾಡಿದೆ ಎಂದರು.

ಶ್ರಮ ವಹಿಸಿ: ಹಾಲು ಉತ್ಪಾದಕರ ಸಹಕಾರ ಸಂಘಗಳು ರೈತರ ಜೀವನಾಡಿ, ಹೈನುಗಾರಿಕೆಯಿಂದ ಹೆಚ್ಚಿನ ಲಾಭವಿದೆ. ಸಹಕಾರ ಸಂಘಗಳು ಹಾಗೂ ಸಹಕಾರ ತತ್ವದ ಆಧಾರದಡಿ ಪರಸ್ಪರ ಸಹಕಾರದಿಂದ ಸಂಘವನ್ನು ಉನ್ನತ ಮಟ್ಟಕ್ಕೆ ತರಲು ಸದಸ್ಯರು, ಆಡಳಿತ ಮಂಡಳಿ ಹಾಗೂ ನೌಕರರು ಶ್ರಮ ವಹಿಸಬೇಕು ಎಂದರು.

ರಾಸುಗಳ ವಿಮೆಗೆ ಶೇ.50 ಅನುದಾನ : ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಜಿ.ವಿನಯ್‌ ಮಾತನಾಡಿ, ಸರ್ಕಾರ ಹಾಗೂ ಒಕ್ಕೂಟದಿಂದ ಹೈನುಗಾರಿಕೆ ಮಾಡಲು ಅನೇಕ ಸವಲತ್ತುಗಳನ್ನು ನೀಡಲಾಗಿದೆ. ರಾಸುಗಳಿಗೆ ವಿಮೆ ಮಾಡಿಸಲು ಒಕ್ಕೂಟದಿಂದ ಶೇ.50ರಷ್ಟು ಅನುದಾನ ನೀಡುತ್ತಿದೆ. ಹಾಲು ಕರೆಯುವ ಯಂತ್ರ, ಮೇವು ಕತ್ತರಿಸುವ ಯಂತ್ರಗಳನ್ನು ಸಹ ಶೇ.50 ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಸಹಕಾರ ಸಂಘದಲ್ಲಿ ನಡೆಯುವ ಸಭೆಗಳಲ್ಲಿ ಸದಸ್ಯರು ಪ್ರಶ್ನೆ ಮಾಡುವ ಸಾಮರ್ಥ್ಯ ಬೆಳೆಸಿಕೊಂಡಾಗ ಮಾತ್ರ ಸಂಘದ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು. ಸಭೆಯಲ್ಲಿ ನಿರ್ದೇಶಕರಾದ ಎಂ.ತಿಮ್ಮರಾಯಪ್ಪ, ಎನ್‌.ಶ್ರೀನಿವಾಸ್‌, ಎಂ.ವೆಂಕಟೇಶ್‌,ಬಚ್ಚಣ್ಣ, ಗೋಪಾಲಕೃಷ್ಣ,ಟಿ.ಮೋಟಪ್ಪ, ಚೌಡಪ್ಪ , ಮಂಜುಳಾ, ಶಶಿಕಲಾ, ಕಾರ್ಯನಿರ್ವಾಹಕ ಉಮೇಶ್‌, ಹಾಲು ಪರೀಕ್ಷಕ ಸಿ.ನಟರಾಜ್‌ ಉಪಸ್ಥಿತರಿದ್ದರು.

ಸಂಘದ ಆಡಳಿತ ಪಾರದರ್ಶಕವಾಗಿರಲು ಸದಸ್ಯರಕೊಡುಗೆಯೂ ಮುಖ್ಯವಾಗುತ್ತದೆ. ದೊಡ್ಡಗಟ್ಟಿಗನಬ್ಬೆ ಸಹಕಾರ ಸಂಘಹಾಲಿನ ಗುಣಮಟ್ಟ, ಲೆಕ್ಕಪತ್ರಗಳ ನಿರ್ವಹಣೆ ಸೇರಿದಂತೆ ಎಲ್ಲ ವಿಧದಲ್ಲಿ ಮಾದರಿಯಾಗಿದ್ದು, ಇನ್ನು ಹೆಚ್ಚಿನ ಗುಣಮಟ್ಟದ ಹಾಲು ಶೇಖರಣೆ ಹಾಗೂ ಹೆಚ್ಚಿನ ಲಾಭ ಪಡೆದುಕೊಳ್ಳಬೇಕು. ಜಿ.ವಿನಯ್‌, ಹಾಲು ಒಕ್ಕೂಟದ ವಿಸ್ತರಣಾಧಿಕಾರಿ

Advertisement

ದೊಡ್ಡಗಟ್ಟಿಗನಬ್ಬೆ ಡೇರಿಯಿಂದ ಹಾಲು ಸರಬರಾಜು ಮಾಡುವ ಪ್ರತಿಯೊಬ್ಬ ರೈತರ ಹಿತ ಕಾಪಾಡಲು ಸಂಘಬದ್ಧವಾಗಿದ್ದು, ಯಾವುದೇ ಸಂದರ್ಭದಲ್ಲಿ ಸಮಸ್ಯೆಗಳು ಎದುರಾದಲ್ಲಿ ಸಂಘಅವರ ಬೆನ್ನಿಗೆ ನಿಂತು ಸಹಾಯ ಮಾಡಲಿದೆ. ಒಕ್ಕೂಟದಿಂದಹೈನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ರೈತರು ಪ್ರಯೋಜನ ಪಡೆದುಕೊಳ್ಳಬೇಕು. ಎಂ.ರವಿ, ಅಧ್ಯಕ್ಷ, ದೊಡ್ಡಗಟ್ಟಗನಬ್ಬೆ ಡೇರಿ

Advertisement

Udayavani is now on Telegram. Click here to join our channel and stay updated with the latest news.

Next