Advertisement

ಅಂಕಿ-ಅಂಶಗಳ ವಾರ್ಷಿಕ ಕೈಪಿಡಿ ಬಿಡುಗಡೆ

06:19 AM Jun 06, 2020 | Suhan S |

ವಿಜಯಪುರ: ವಿಜಯಪುರ ಜಿಲ್ಲೆಯ ಆರ್ಥಿಕ ಮತ್ತು ಶೈಕ್ಷಣಿಕ ಸೇರಿದಂತೆ ಮತ್ತಿತರ ಚಟುವಟಿಕೆಗಳ 2018-19ನೇ ಸಾಲಿನ ಅಂಕಿ ಅಂಶಗಳ ವಾರ್ಷಿಕ ಕೈಪಿಡಿಯನ್ನು ಜಿಲ್ಲಾಧಿ ಕಾರಿ ವೈ.ಎಸ್‌. ಪಾಟೀಲ ಬಿಡುಗಡೆ ಮಾಡಿದರು.

Advertisement

ಈ ಅಂಕಿ-ಆಂಶಗಳ ವಾರ್ಷಿಕ ಕೈಪಿಡಿಯಲ್ಲಿ ವಿಜಯಪುರ ಜಿಲ್ಲೆಯ ವಿವಿಧ ಕಚೇರಿಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ. ಜನಸಂಖ್ಯೆಗೆ ಸಂಬಂಧಿಸಿದ ಅಂಕಿ-ಅಂಶಗಳು 2011ರ ಜನಗಣತಿ, ಮಳೆಗೆ ಸಂಬಂಧಿಸಿದ ಅಂಕಿ ಅಂಶಗಳು 2018ಕ್ಕೆ ಸಂಬಂಧಿಸಿದ್ದು ಹಾಗೂ 2012ರ ಜಾನುವಾರು ಗಣತಿ, 2015-16ನೇ ಸಾಲಿನ ಕೃಷಿಗಳ ಅಂಕಿ ಅಂಶ ಒಳಗೊಂಡಿದೆ. ಶಿಕ್ಷಣ, ಸಂಶೋಧನೆ, ಯೋಜನೆ ಹೀಗೆ ವಿವಿಧ ಉದ್ದೇಶಗಳಿಗೆ ಈ ಅಂಕಿ ಆಂಶಗಳು ಆಧಾರವಾಗಲಿದ್ದು ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ ನೀಡುವ ಕೈಪಿಡಿಯಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.

ಈ ಜಿಲ್ಲಾ ಅಂಕಿ-ಅಂಶಗಳ ನೋಟ ಕೈಪಿಡಿಯಲ್ಲಿ ಜಿಲ್ಲೆಯ ತಾಲೂಕಾ ನಕ್ಷೆ, ಭೂಬಳಕೆ ಮತ್ತು ಭೂಕವಚ ನಕ್ಷೆ, ಮಣ್ಣಿನ ನಕ್ಷೆ ಹಾಗೂ ಒಳಚರಂಡಿ ಮತ್ತು ಜಲಮೂಲಗಳ ನಕ್ಷೆ ಮಾಹಿತಿ, ತಾಲೂಕು, ಹೋಬಳಿ, ಗ್ರಾಪಂ, ಗ್ರಾಮಲೆಕ್ಕಿಗರ ವೃತ್ತಗಳು, ಜನವಸತಿ ಇರುವ, ಇಲ್ಲದ ಮತ್ತು ಒಟ್ಟು ಗ್ರಾಮಗಳ 2011ರ ಜನಗಣತಿ, ನಗರ ಸ್ಥಳೀಯ ಸಂಸ್ಥೆಗಳ ವಿವರ, ಅಗ್ನಿಶಾಮಕ ಠಾಣೆಗಳ ವಿವರ ಹಾಗೂ ಪಡಿತರ ಅಂಗಡಿಗಳು ಮತ್ತು ಆದ್ಯತಾ ಪಡಿತರ ಚೀಟಿದಾರರು ವಿವರ ನೀಡಲಾಗಿದೆ.

ಜಿಲ್ಲೆಯ ವಿಸ್ತೀರ್ಣ, ಜನಸಂಖ್ಯೆ, ಲಿಂಗಾನುಪಾತ, ಮಕ್ಕಳ ಶೇಕಡಾವಾರು, ಮಕ್ಕಳ ಲಿಂಗಾನುಪಾತ, ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಶೇಕಡಾವಾರು ಜನಸಂಖ್ಯೆ, ಕೃಷಿ ಸಾಗುವಳಿದಾರರು, ಕೃಷಿ ಕಾರ್ಮಿಕರು, ಗೃಹ ಕೈಗಾರಿಕೆ ಕೆಲಸಗಾರರು, ಕೃಷಿಯೇತರ ಕೆಲಸಗಾರರು ಹೀಗೆ ವಿವಿಧ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರ ಅಂಕಿ-ಅಂಶಗಳನ್ನು ನೀಡಲಾಗಿದೆ ಅಧಿಕಾರಿಗಳು ವಿವರಿಸಿದರು.

ಈ ವಾರ್ಷಿಕ ಕೈಪಿಡಿ ಬಿಡುಗಡೆ ಸಂದರ್ಭದಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಜಿ.ಎಂ. ಕುಲಕರ್ಣಿ, ಕೃಷಿ ಜಂಟಿ ನಿರ್ದೇಶಕ ಶಿವಕುಮಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಸುಲೇಮಾನ್‌ ನದಾಫ್‌, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಸಂತೋಷ ಇನಾಂದಾರ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next