Advertisement
ನ. 25ರಂದು ಪುಣೆಯ ಶ್ಯಾಮ್‌ರಾವ್ ಕಲ್ಮಾಡಿ ಕನ್ನಡ ಹೈಸ್ಕೂಲ್‌ನ ಸಭಾ ಭವನದಲ್ಲಿ ನಡೆದ ಪುಣೆ ಕುಲಾಲ ಸಂಘದ 40ನೇ ಮಹಾಸಭೆ ಹಾಗೂ ಸ್ನೇಹ ಸಮ್ಮಿಲನದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಇಂದಿನ ಸಮಾಜದಲ್ಲಿ ಎಲ್ಲರೂ ವಿದ್ಯಾವಂತರೆ. ಪ್ರತಿ ಮನೆಯಲ್ಲೂ ಉನ್ನತ ವ್ಯಾಸಂಗ ಮಾಡಿದವರು ಇರುತ್ತಾರೆ. ಆದರೆ ವಿದ್ಯೆಯ ಜತೆಯಲ್ಲಿ ವಿನಯ ಮತ್ತು ಸೌಜನ್ಯ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ಸಮಾಜದ ಹಿರಿಯರು, ಯುವಜನತೆ ಸೇರಿದರೆ ಸಂಘಟನೆ ನಿತ್ಯ ಸುಂದರವಾಗಿರಬಹುದು. ಇದು ನಾವು ಮಾಡುವ ಕೆಲಸ ಅಥವಾ ಸಂಘಟನೆಯಲ್ಲೂ ಬಹು ಮುಖ್ಯ. ಇದರಿಂದ ಸಂಘಟನೆ ತನ್ನಿಂತಾನೆ ಒಮ್ಮತದೊಂದಿಗೆ ಬೆಳೆದು ಸಮಾಜದ ಜನರಲ್ಲಿ ವಿಶ್ವಾಸವನ್ನು ಪಡೆಯಬಹುದು ಎಂದರು.
Related Articles
Advertisement
ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ಯಶೋದಾ ಮೂಲ್ಯ ಅವರು ಸಂಘದ ವಾರ್ಷಿಕ ವರದಿಯನ್ನು ವಾಚಿಸಿದರು. ಕೋಶಾಧಿಕಾರಿ ಮನೋಜ್ ಸಾಲ್ಯಾನ್ ವಾರ್ಷಿಕ ಲೆಕ್ಕ ಪತ್ರವನ್ನು ಮಂಡಿಸಿ ಅನುಮೋದಿಸಿಕೊಂಡರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಮಾಜದ ಮಕ್ಕಳಿಂದ ನೃತ್ಯ ವೈವಿಧ್ಯ, ಪುಣೆ ಕುಲಾಲ ಸಂಘದ ಸದಸ್ಯರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಬಲೆ ತೆಲಿಪಾಲೆ ಖ್ಯಾತಿಯ ಅರುಣ್ ಚಂದ್ರ ಬಿ.ಸಿ. ರೋಡ್ ರಚಿಸಿ, ರಂಗನಟ ಸುವರ್ಣ ಕನ್ನಡರತ್ನ ರಮಾ ಬಿ. ಸಿ. ರೋಡ್ ನಿರ್ದೇಶನದ ಗೊತ್ತಾವರೆಗ್ ಬಲ್ಲಿ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು. ಕಾರ್ಯಕ್ರಮದ ಯಶಸ್ಸಿಗೆ ಸಂಘದ ಪದಾಧಿಕಾರಿಗಳು, ಸದಸ್ಯರು, ಮಹಿಳಾ ಸದಸ್ಯರು ಸಹಕರಿಸಿದರು. ಭಾಗ್ಯಶ್ರೀ ಮೂಲ್ಯ, ಸರಸ್ವತಿ ಕುಲಾಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ನಮ್ಮಲ್ಲಿರುವ ಎಲ್ಲಾ ಮನೆಗಳ ವಿದ್ಯಾವಂತರು, ಉದ್ಯಮಿಗಳು, ಉದ್ಯೋಗಿಗಳು, ಯುವ ಜನತೆ ಸೇರಿಕೊಂಡು ಒಗ್ಗಟ್ಟನ್ನು ಪ್ರದರ್ಶಿಸಿದರೆ ಸಂಘಟನೆಯ ಬೆಳವಣಿಗೆಗೆ ಯಾವುದೇ ತೊಂದರೆಯಿರುವುದಿಲ್ಲ. ಯಾವುದೇ ರೀತಿಯ ವೈಯಕ್ತಿಕ ಮೈಮನಸ್ಸು ಇದ್ದರೂ ಕೂಡಾ ಸಂಘದ ಕಾರ್ಯದಲ್ಲಿ ಅದನ್ನು ಬದಿಗಿಟ್ಟು ನಮ್ಮದು ಎಂದು ಭಾವನೆಯಿಂದ ಒಟ್ಟು ಸೇರಬೇಕು. 40 ವರ್ಷಗಳ ಹಿಂದೆ ಹಿರಿಯರು ಕಟ್ಟಿದ ಈ ಪುಣೆ ಕುಲಾಲ ಸಂಘ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಬೇಕು. ಸಮಾಜದ ಎಲ್ಲಾ ಕುಟುಂಬಗಳು ಸೇರಿಕೊಂಡು ಸಂಘಟನೆಯ ಬಲವರ್ಧನೆಗೆ ಸಹಕರಿಸಬೇಕು. ಜ್ಯೋತಿ ಕೋ -ಆಪರೇಟಿವ್ ಕ್ರೆಡಿಟ್ ಸೊಸೈಟಿ ಪುಣೆಯ ಶಾಖೆ ಪ್ರಾರಂಭವಾಗಿದ್ದು, ಜಾತಿ ಬಾಂಧವರೊಂದಿಗೆ ಎಲ್ಲಾ ಸಮಾಜ ಬಾಂಧವರ ಸಹಕಾರ ಅಗತ್ಯವಾಗಿದೆ .ಗಿರೀಶ್ ಸಾಲ್ಯಾನ್, ಕಾರ್ಯಾಧ್ಯಕ್ಷರು, ಜ್ಯೋತಿ ಕೋ -ಆಪರೇಟಿವ್ ಕ್ರೆಡಿಟ್ ಸೊಸೈಟಿ ಸಂಘದ ಈವರೆಗಿನ ನಡೆಯಲ್ಲಿ ಸ್ಥಾಪಕ ಅಧ್ಯಕ್ಷರಿಂದ ಹಿಡಿದು ಮಾಜಿ ಅಧ್ಯಕ್ಷರುಗಳು ಪದಾಧಿಕಾರಿಗಳು ಸಹಕಾರ ನೀಡಿ ಸಂಘವನ್ನು ಅರ್ಥಪೂರ್ಣವಾಗಿ ಬೆಳೆಸಿಕೊಂಡು ಬಂದಿ¨ªಾರೆ. ನಮ್ಮ ಮನದಲ್ಲಿ ಮುಖ್ಯವಾಗಿ ಸಮಾಜದ ಬಾಂಧವರಿಗಾಗಿ ಇರುವ ಸಂಸ್ಥೆ ತಮ್ಮದೇ ಎಂಬ ಭಾವನೆ ಮೂಡಬೇಕು. ಹೆಸರು, ಪದವಿಯ ಆಸೆಯನ್ನು ಬಿಟ್ಟು ಯಾರೇ ಸಂಘದ ಚುಕ್ಕಾಣಿ ಹಿಡಿದರೂ ಕೂಡಾ ತಮ್ಮೆಲ್ಲರ ಸಹಕಾರ ವರ್ಷದಿಂದ ವರ್ಷಕ್ಕೆ ಹೆಚ್ಚಾಗಿ ಸಂಘಕ್ಕೆ ಭದ್ರ ಬುನಾದಿಯನ್ನು ಹಾಕುವ ಸಂಕಲ್ಪವನ್ನು ನಾವೆಲ್ಲರೂ ಮಾಡಬೇಕು. ಈವರೆಗಿನ ತಮ್ಮೆಲ್ಲರ ಸಹಕಾರಕ್ಕೆ ವಂದನೆಗಳು .
ಹರೀಶ್ ಕುಲಾಲ ಮುಂಡ್ಕೂರು, ಅಧ್ಯಕ್ಷರು, ಕುಲಾಲ ಸಂಘ ಪುಣೆ ನಮ್ಮ ಪುಣೆ ಕುಲಾಲ ಸಂಘ ಬೆಳವಣಿಗೆಯ ಹಂತದಲ್ಲಿ ಸಂಘ ಅಭಿವೃದ್ದಿಗೆ ಎಲ್ಲಾ ಬಾಂಧವರ ಸಹಕಾರ ಮುಖ್ಯ. ವ್ಯಕ್ತಿಗಿಂತ ಭಿನ್ನವಾಗಿ ಸಂಘಟನೆ ಬೆಳೆಯಬೇಕು. ನಮ್ಮಲ್ಲಿರುವ ಜನ ಸಂಖ್ಯೆಯಲ್ಲಿ ನೂರಕ್ಕೆ ನೂರರಷ್ಟು ಬಾಂಧವರು ಒಟ್ಟು ಸೇರಿ ನಮ್ಮ ಒಗ್ಗಟ್ಟನ್ನು , ಸಾಧನೆಯನ್ನು,
ಮುಂದಿನ ದಿನಗಳಲ್ಲಿ ಸಮಾಜಕ್ಕೆ ತೋರಿಸಬೇಕು. ಇದು ಸಾಧ್ಯವಾಗುತ್ತದೆ ಎಂಬ ಭಾವನೆ ನನ್ನಲ್ಲಿದೆ .
ವಿಶ್ವನಾಥ್ ಉಡುಪಿ, ಗೌರವಾಧ್ಯಕ್ಷರು, ಕುಲಾಲ ಸಂಘ ಪುಣೆ ಚಿತ್ರ-ವರದಿ : ಹರೀಶ್ ಮೂಡಬಿದ್ರೆ ಪುಣೆ